ಕಲಬುರಗಿ: ನಗರದ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಕುಮಾರಿ ಸ್ನೇಹಾ ಮಲ್ಲಿಕಾರ್ಜುನ ಪೊಲೀಸ್ ಪಾಟೀಲ್ ಅವರು ೨೦೧೮-೧೯ನೇ ಸಾಲಿನ ಬಿ.ಎ ಅಂತಿಮ ವರ್ಷದ ಸಂಗೀತ ವಿಷಯದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಅಧೀನದಲ್ಲಿಯ ೪೭೦ ಮಹಾವಿದ್ಯಾಲಯಗಳಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ಚಿನ್ನದ ಪದಕ ಪಡೆಯುವ ಮೂಲಕ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.
೨೦೧೯ ಮೇ/ಜೂನ್ ತಿಂಗಳಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಅವರು ನಡೆಸಿದ ಬಿ.ಎ ಅಂತಿಮ ವರ್ಷದ ಪರೀಕ್ಷೆಯಲ್ಲಿ ಸ್ಥಳೀಯ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕುಮಾರಿ ಸ್ನೇಹಾ ಮಲ್ಲಿಕಾರ್ಜುನ ಪೋಲಿಸ್ ಪಾಟೀಲ್ ಅವರು ಸಂಗೀತ ವಿಷಯದಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆಯುವುದರ ಮೂಲಕ ಪಾದೂರು ರಾಮಚಂದ್ರ ತಂತ್ರಿ ಸ್ಮಾರಕ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿನಿಯ ಸಾಧನೆಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಶರಣಬಸವಪ್ಪ ಅಪ್ಪ, ಚೇರಮನರಾದ ಡಾ.ದಾಕ್ಷಾಯಿಣಿ ಎಸ್.ಅಪ್ಪ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಹಾಗೂ ಪ್ರಾಚಾರ್ಯರಾದ ಡಾ.ಸುರೇಶಕುಮಾರ ನಂದಗಾಂವ ಅವರು ಹರ್ಷವ್ಯಕ್ತಪಡಿಸಿದರು.
ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಕು.ಮಲ್ಲಿಕಾರ್ಜು ವಸ್ತ್ರದ ಮಠ, ಕು.ಅನಿಲ ರಮೇಶ ತರಾಟೆ ಮತ್ತು ಕು.ಬಸವರಾಜ ಶಿವಶರಣಪ್ಪ ಅವರುಗಳು ಸಂಗೀತ ವಿಷಯದಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಕ್ರಮವಾಗಿ ಮೂರನೇಯ, ಐದನೆಯ ಹಾಗೂ ಏಳನೆಯ ಸ್ಥಾನ ಪಡೆದಿರುವುದು ಸಂತೋಷದ ವಿಷಯವೆಂದು ಪ್ರಚಾರ್ಯರಾದ ಡಾ.ನಂದಗಾಂವ ಅವರು ತಿಳಿಸಿದರು.
ಇದೆ ಸಂದರ್ಭದಲ್ಲಿ ಮಹಾವಿದ್ಯಾಲಯದ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಕಲಬುರಗಿ: ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಸಂವಿಧಾನ ದಿನ ಆಚರಣೆ ಕಾರ್ಯಕ್ರಮ ವನ್ನು ಸವಿಧಾನ ಪ್ರತಿಯನ್ನು ಓದುವ ಮೂಲಕ ಸವಿಧಾನ ಶಿಲ್ಪಿ…
ಕಲಬುರಗಿ : ಸೇಡಂ ಮತಕ್ಷೇತ್ರದ ವ್ಯಾಪ್ತಿಯ ಕರ್ಚಖೇಡ, ಕಾನಗಡ್ಡ,ಮದನ, ಮುಧೋಳ ಗ್ರಾ.ಪಂನ ಉಪ ಚುನಾಚುನಾವಣೆಯಲ್ಲಿ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿಗಳು ಜಯ…
ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ 75ನೇ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್…
ಚಿಂಚೋಳಿ: ತಾಲೂಕಿನ ಸಾಲೆಬೀರನಳ್ಳಿ ಗ್ರಾಮದ ನೀವೃತ ಮುಖ್ಯಗುರುಗಳಾದ ಅಲ್ ಹಜ್ ಶಮಶೋದ್ದಿನ ಬೀರಗಿ ಪಟೇಲ್ (86) ಮಂಗಳವಾರ ನಿಧನರಾದರು. ಅವರಿಗೆ…
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…