ಸುರಪುರ: ತಾಲೂಕಿನ ಪೇಠ ಅಮ್ಮಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಸ್ಸಮ್ಮ ದಿ:ಬಸಲಿಂಗಪ್ಪ ಸಾಹುಕಾರ ಅವರಿಗೆ ಕಲ್ಯಾಣ ಕರ್ನಾಟಕ ಪಂಚಮಸಾಲಿ ಸಮುದಾಯದ ಬಣಜಿಗರ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವೀರಶೈವ ಲಿಂಗಾಯತ ಸಮುದಾಯದ ಹಿರಿಯ ಮುಖಂಡ ಶಿವರಾಜಪ್ಪ ಗೋಲಗೇರಿ ಮಾತನಾಡಿ,ನಮ್ಮ ಸಮುದಾಯ ರಾಜಕೀಯವಾಗಿ ಇನ್ನೂ ಬೆಳವಣಿಗೆ ಕಾಣಬೇಕಿದೆ ಅದಕ್ಕೆ ನಮ್ಮ ಒಗ್ಗಟ್ಟು ತುಂಬಾ ಮುಖ್ಯವಾಗಿದೆ ಎಂದರು.ಅಲ್ಲದೆ ತಾಲೂಕಿನಲ್ಲಿ ಪೇಠ ಅಮ್ಮಾಪುರ ಗ್ರಾಮ ಪಂಚಾಯತಿಗೆ ನಮ್ಮ ಪಂಚಮಸಾಲಿ ಸಮುದಾಯದ ಬಣಜಿಗ ಸಮಾಜದ ಹಿರಿಯರು ಅಧ್ಯಕ್ಷರಾಗಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ.ತಮ್ಮಿಂದ ಪೇಠ ಅಮ್ಮಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಸರ್ವಾಂಗಿಣ ಅಭಿವೃಧ್ಧಿ ಕಾಣಲಿ ಹಾಗು ತಮ್ಮ ಆಡಳಿತವು ಇನ್ನೂ ಅನುಗಾಲ ಪೇಠ ಅಮ್ಮಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನತೆ ನೆನಪಲ್ಲಿಟ್ಟುಕೊಳ್ಳುವಂತಾಗಲಿ ಎಂದು ಹಾರೈಸುವುದಾಗಿ ತಿಳಿಸಿದರು.
ನಂತರ ಅಧ್ಯಕ್ಷರಾಗಿ ನೇಮಕಗೊಂಡ ಬಸಮ್ಮ ದಿ:ಬಸಲಿಂಗಪ್ಪ ಸಾಹುಕಾರ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಮುಖಂಡರಾದ ಶಿವು ಸಾಹುಕಾರ ರಾಜಶೇಖರ ತಂಬಾಕೆ ಶಿವುಗೌಡ ಸೂಗುರ್ ಶರಣು ಸಾಹುಕಾರ ಚನ್ನಬಸವ ವಾಲಿ ಸಿದ್ದು ಮುಧೋಳ ಜಗದೀಶ ತಂಬಾಕೆ ಸಜ್ಜನ್‌ಕುಮಾರ ಕಲ್ಯಾಣಶೆಟ್ಟಿ ಅಂಬರೀಶ ದೇಸಾಯಿ ಬಸವರಾಜ ಬಿರಾದಾರ್ ಶಿವಲಿಂಗಪ್ಪ ಶೆಟ್ಟಿ ಅಮ್ಮಾಪುರ ಗುರುಪಾದಪ್ಪ ಬೇವಿನಗಿಡ ಅನಿಲ್ ಶೆಟ್ಟಿ ಬಸವಣಪ್ಪ ಹಂಗರಗಿ ಒಕ್ಕೂಟದ ಸಂಚಾಲಕ ನಾಗಭೂಷಣ ಯಾಳಗಿ ರವಿಕುಮಾರ ಶೆಟ್ಟಿ ಸೇರಿದಂತೆ ಅನೇಕರಿದ್ದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ ಬಿಜೆಪಿ ಪಕ್ಷದ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…