ಯುವಜನ ಸಬಲೀಕರಣ ನಿಗಮ ಸ್ಥಾಪನೆಗೆ ಹಕ್ಕೊತ್ತಾಯ, ಕಲಬುರಗಿಯಲ್ಲಿ ಯುವಜನ ಹಕ್ಕಿನ ಮೇಳ ಕಲರವ

ಕಲಬುರಗಿ: ರಾಜ್ಯದಲ್ಲಿ ಯುವಜನ ಸಬಲೀಕರಣ ನಿಗಮ ಸ್ಥಾಪನೆಯಾಗಬೇಕು. ಯುವಜನರ ಹಕ್ಕುಗಳು ಅವರಿಗೆ ಸಿಗಬೇಕು. ಸರಕಾರ ಅವುಗಳನ್ನು ಖಾತ್ರಿಪಡಿಸಲಿ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯ ಕುಲಪತಿ ಪ್ರೊ. ದಯಾನಂದ ಅಗಸರ ಮಾತನಾಡಿದರು.

ನಗರದ ಶ್ರೀ ಶಿವಶರಣ ಹರಳಯ್ಯ ಸಾಂಸ್ಕೃತಿಕ ಭವನದಲ್ಲಿ ನಡೆದ ಯುವಜನ ಹಕ್ಕಿನ ಮೇಳದಲ್ಲಿ ಸಂವಿಧಾನದ ಪ್ರಸ್ತಾವಣೆಯನ್ನು ಅನಾವರಣಗೊಳಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಡಾ. ಬಿ ಆರ್ ಅಂಬೇಡ್ಕರ್ ಅವರು ಬರೆದ  ಸಂವಿಧಾನದ ಮೂಲ ಆಶಯದ ಬಗ್ಗೆ ಯುವ ಜನರು ತಿಳಿದುಕೊಳ್ಳನಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.

ಯುವಜನ ಹಕ್ಕುಗಳ ಜಾಗೃತಿಯ ಕುರಿತಾದ ಇಂತಹ ಕಾರ್ಯಕ್ರಮಗಳು ಅತಿ ಹೆಚ್ಚಾಗಿ ಆಗಬೇಕು. ಇತ್ತೀಚಿನ ದಿನಗಳಲ್ಲಿ ಸಂವಾದಂತಹ  ಸಂಸ್ಥೆಗಳು ಅನೇಕ ಉಪಯುಕ್ತ ಕಾರ್ಯಕ್ರಗಳನ್ನು ಆಯೋಜಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಶಿಕ್ಷಣ ತಜ್ಞ ಮತ್ತು ಹೈ.ಕ ಹೋರಾಟಗಾರ ಡಾ.ರಝಾಕ್ ಉಸ್ತಾದ್ ಮಾತನಾಡಿ ಯುವಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು.  ಯುವಜನರು ಸ್ವಾವಲಂಬನೆ ಬದುಕಿಗಾಗಿ ಹಾಗೂ ಅವರ   ಹಕ್ಕುಗಳಿಗಾಗಿ ಗಟ್ಟಿ ಧ್ವನಿ ಎತ್ತಬೇಕೆಂದು ತಿಳಿಸಿದರು.

ಯುವ ಜನರಿಗೆ ಅನೇಕ ಸಮಸ್ಯಗಳಿವೆ. ಅವರು ಅನೇಕ ಆತಂರಿಕ ಮತ್ತು ಭಾಹ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಯುವಜನರು ಹಕ್ಕು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಕಳೆದ ೭೦ ವರ್ಷಗಳಿಂದ ರಾಜಕೀಯ ಪಕ್ಷಗಳು ಆಳ್ವಿಕೆ ಮಾಡತ್ತಿವೆ ಆದರೆ ಇಂದಿಗೂ  ಯುವ ಜನರಿಗಾಗಿ ಯಾವುದೇ ಹಕ್ಕುಗಳನ್ನು ಸರ್ಕಾರ ಘೋಷಣೆ ಮಾಡಿಲ್ಲ.

ಸಮಾನ ಶಿಕ್ಷಣ, ಉಚಿತ ಶಿಕ್ಷಣ, ಗುಣಮಟ್ಟದ ಶಿಕ್ಷಣ ವೃತ್ತಿ ಮಾರ್ಗದರ್ಶನ, ಘನತೆಯ ಮತ್ತು ತಾರತಮ್ಯ ರಹಿತ ಉದ್ಯೋಗ ಯುವಜನರ ಹಕ್ಕು, ಪೌಷ್ಠಿಕಾಂಶಯುಕ್ತ ಆಹಾರ,  ಬಟ್ಟೆ, ಭಾಷೆ ಇವುಗಳ ಆಯ್ಕೆ ಯುವಜನರದ್ದಾಗಿದೆ. ದೇಶದಲ್ಲಿ ೩೦% ಯುವಜನರಿದ್ದಾರೆ ಅವರ ಇಷ್ಟದಂತೆ ಬದುಕಲು ಬಿಡಿ ಎಂದು ಡಾ. ಅನಿಲ ಟೆಂಗಳೆ  ತಿಳಿಸಿದರು.

ಯುವ ವಕೀಲರು ಅಶ್ವಿನಿ ಮದನಕರ್  ಯುವಜನರ ಸಮಸ್ಯೆಗಳನ್ನು ಕುರಿತು ಮಾತಾನಾಡುತ್ತಾ ಯುವಜನರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಕಾಲ ಕಳೆಯುತ್ತದ್ದಾರೆ ಅದು ಕೂಡ ಇಂದಿನ ಯುವಜನರ ಪ್ರಮುಖ ಸಮಸ್ಯೆ ಎಂದು ಹೇಳಿದರು. ದೇಶದಲ್ಲಿ ಕ್ರಾಂತಿ ಶುರುವಾಗಿದ್ದು ಮೊದಲಿಗೆ ಯುವಜನರಿಂದಲೆ. ದೇಶ ಬದಲಾವಣೆಗೆ ಯುವಜನರ ಪಾತ್ರ ಮುಖ್ಯವಾಗಿದೆ. ಆದೇ ಇಂದಿನ ಪ್ರಸ್ತುತ ದಿನಗಳಲ್ಲಿ ಯಾರೂ ಕೂಡ ಪ್ರಭುತ್ವಕ್ಕೆ ಪ್ರಶ್ನಿಸುತ್ತಿಲ್ಲವೆಂದು ತಿಳಿಸಿದರು.

ಈ ಯುವಜನ ಮೇಳಕ್ಕೆ ಧ್ವನಿಗೂಡಿಸಿದ ಜೋಗತಿ ಪದಗಳ ಹಾಡುಗಾರ್ತಿ ಶಿಲ್ಪಾ ಮುಡಬಿ ಮಾತಾನಾಡುತ್ತಾ ನಾವು ಎಷ್ಟೇ ಆಧುನಿಕವಾಗಿ ಮುಂದುವರೆದರು ನಮ್ಮ ಅಜ್ಜಿ ಮುತ್ತಜ್ಜಿಯರು ಬದುಕಿದ ಬದುಕನ್ನು ನಾವು ಮರೆಯಬಾರದು. ಅದು ನಮ್ಮ ಅಸ್ತಿತ್ವ. ಅದು ನಮ್ಮ ಗುರುತು. ಅದನ್ನು ನಾವು ಹೆಮ್ಮೆಯಿಂದ ಹೇಳಿಕೊಳ್ಳಬೇಕು ಎಂದು ಹೇಳಿ “ಸೋರುತಿದೆ ಮನೆಯ ಮಾಳಿಗೆ” ಎಂಬ ಹಾಡು ಹಾಡಿ ಯುವಜನ ಸಬಲೀಕರಣ ನಿಗಮ ಸ್ಥಾಪನೆಯಾಗಬೇಕು ಎಂದು ತಿಳಿಸಿದರು.

ಈ ದೇಶದ ಯುವ ಸಮೂಹ ಸಬಲಗೊಂಡರೇ ಮಾತ್ರ ರಾಷ್ಟ್ರ ಸದೃಢಗೊಳ್ಳಲಿದೆ. ಈ ಬಗ್ಗೆ ಸರಕಾರಗಳು ಗಂಭೀರ ಚಿಂತನೆ ನಡೆಸಬೇಕಾದ ಸಂದರ್ಭ ಎದುರಾಗಿದೆ ಅಭಿಪ್ರಾಯಪಟ್ಟರು.

ಯುವ ಜನ ಈ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಅರ್ಪಿಸಿದ್ದಾರೆ. ರಾಷ್ಟ್ರ ನಿರ್ಮಾಣದಲ್ಲಿ ಯುವ ಸಮೂಹದ ಪಾತ್ರ ಮಹತ್ವದ್ದಾಗಿದೆ. ಆದರೇ ಇಂದು ಯುವ ಸಮೂಹದ ಸ್ಥಿತಿ ಗಂಭೀರವಾಗಿದ್ದು, ದೇಶ ಮುನ್ನಡೆಸುವವರು ಯುವಜನ ಸಬಲೀಕರಣ ನಿಗಮ ಸ್ಥಾಪನೆಗೆ ಮುಂದಾಗಬೇಕು ಎಂದರು.

ಸಂವಾದ ಸಂಸ್ಥೆಯ ಸಂಯೋಜಕಿ ರುಕ್ಮಿಣಿ ನಾಗಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು.  ಉಮೇಶ ಸಜ್ಜನ ನಿರೂಪಿಸುದರೆ, ಮಂಗಳೂರು ರಿಯಾಜ್ ವಂದಿಸಿದರು.

ಯುವಜನ ಹಕ್ಕಿನ ಮೇಳದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಂವಾದ- ಯುವ ಮುನ್ನಡೆ ತಂಡದ    ಸಂಚಾಲಕರು, ಸದಸ್ಯರು ಭಾಗವಹಿಸಿದ್ದರು. ಕಲಬುರಗಿಯ ರಿಪಬ್ಲಿಕನ್ ಯೂತ್ ಫೆಡರೇಶನ್, ಪ್ರಬುದ್ಧ ಭಾರತ ಸಂಘರ್ಷ ಸಮಿತಿ, ಯುವ ಜಾಗೃತಿ ವೇದಿಕೆ, ಐ.ಎಸ್.ಓ ಮತ್ತು ಎಸ್.ಎಫ್.ಐ ಹಾಗೂ ಅಫ್ಜಲಪುರದ ಸಮಾಜ ಚಿಂತಕ ವೇದಿಕೆಯ ಯುವಜನರು ಭಾಗವಹಿಸಿ ಕಾರ್ಯಕ್ರಮವನ್ನು  ಯಶಸ್ವಿಯಾಗಿ ನಡೆಸಿದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

7 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

10 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

10 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

10 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

10 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

10 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420