ಮೌನರಾಗ.
ಮಾತು ಮೌನಾಗಿದೆ,
ಮನ ಮೂಕಾಗಿದೆ,
ಪ್ರೀತಿಯೂ ಬತ್ತಿದೆ,
ಹೃದಯ ನಲುಗಿದೆ
ಕ್ಷಣವೊಂದು ನೀನಿಲ್ಲದೆ
ಬದುಕುವಾಸೆ ನನಗೆಲ್ಲಿದೆ
ಓ ಗೆಳತಿ ನನಗೆಲ್ಲಿದೆ.
ಜೀವ ನೊಂದಿದೆ
ಭಾವ ಬೆಂದಿದೆ
ಹನಿಯೊಂದು ಜಾರಿದೆ
ಉಲ್ಲಾಸ,ಉತ್ಸಾಹ
ಕುಗ್ಗಿದೆ,ನೀನಿಲ್ಲದೆ
ಬದುಕುವಾಸೆ ನನಗೆಲ್ಲಿದೆ
ಓ ಗೆಳತಿ ನನಗೆಲ್ಲಿದೆ.
ನೆಮ್ಮದಿ ಹಾಳಾಗಿದೆ
ಮನ ಶಾಂತಿ ಕದಡಿದೆ
ಸಹನೆ ಒಡೆದೋಗಿದೆ
ಒಳಗೊಳಗೆ ಹೃದಯ
ಅಳುತಿದೆ ನೀನಿಲ್ಲದೆ
ಬದುಕುವಾಸೆ ನನಗೆಲ್ಲಿದೆ
ಓ ಗೆಳತಿ.ನನಗೆಲ್ಲಿದೆ
ನಿನ್ನ ನೆನಪೊಂದು ಕಾಡಿದೆ
ಕನಸೊಂದು ಬಾಡಿದೆ
ಮನಸೊಂದು ಮರಗಿದೆ
ಬಾಳೊಂದು ಕೊರಗಿದೆ
ನೀನಿಲ್ಲದೆ ಬದುಕುವಾಸೆ
ನನಗೆಲ್ಲಿದೆ ಓ ಗೆಳತಿ ನನಗೆಲ್ಲಿದೆ
ಚೆಲುವೆಲ್ಲಾ ನಿನ್ನದೆ
ಒಲವೆಲ್ಲಾ ನಿನ್ನದೆ
ಗೆಲುವೆಲ್ಲಾ ನಿನ್ನದೆ
ಕೊನೆಗೆಲ್ಲಾ ಸೋತಿದೆ
ಹೃದಯ ಸಣ್ಣಗಾಗಿದೆ
ಉಸಿರು ನಿಂತಿದೆ
ನೀನಿಲ್ಲದೆ ಬದುಕುವಾಸೆ
ನನಗೆಲ್ಲಿದೆ ಓ ಗೆಳತಿ ನನಗೆಲ್ಲಿದೆ.
– ಬಸವರಾಜ ಸಿನ್ನೂರ ಶಹಾಪುರ
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…