ಶಹಾಬಾದ: ಸಣ್ಣ ಪುಟ್ಟ ಕಾಯಿಲೆಗಳಿಗೆ ವೈದ್ಯರ ಮೇಲೆ ಅವಲಂಬಿಸುವುದರ ಬದಲು ನಮ್ಮ ಹಿತ್ತಲಿನಲ್ಲೇ ಬೆಳೆದಿರುವ ಸಸ್ಯಗಳಿಂದ ಔಷಧಗಳನ್ನು ಪಡೆದರೇ ನಮ್ಮ ಆರೋಗ್ಯಕ್ಕೆ ಬಹಳ ಅನುಕೂಲವಾಗುತ್ತದೆ ಎಂದು ಆಯುಷ್ ವೈದ್ಯಾಧಿಕಾರಿ ಡಾ. ಸಯ್ಯದಾ ಅತರ್ ಹೇಳಿದರು.
ಅವರು ನಗರದ ಪ್ರಿ ಮೆಟ್ರಿಕ್ ಬಾಲಕರ ವಸತಿ ನಿಲಯದಲ್ಲಿ ಆಯುಷ್ ಇಲಾಖೆಯಿಂದ ಆಯೋಜಿಸಲಾದ ಆಯುಷ್ ಔಷಧಿ ಸಸ್ಯಗಳ ಅಭಿವೃದ್ಧಿ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಲವಾರು ಔಷಧಗಳು ಇಂದು ಮಾನವನ ದೇಹದ ಮೇಲೆ ವ್ಯರಿಕ್ತ ಪರಿಣಾಮ ಉಂಟಾಗುತ್ತಿದ್ದು, ಸಸ್ಯ ಮೂಲಗಳಿಂದ ಪಡೆದ ಯಾವುದೇ ಔಷಧವು ಆರೋಗ್ಯ ಮೇಲೆ ಅಡ್ಡ ಪರಿಣಾಮ ಉಂಟು ಮಾಡುವುದಿಲ್ಲ.ಅಲೋಪಥಿಕ್ ಔಷಧ ಮಾಡಲಾರದ ಕೆಲಸವನ್ನು ಸಸ್ಯ ಮೂಲದ ಔಷಧಗಳು ಕಾಯಿಲೆಗಳನ್ನು ಗುಣಪಡಿಸುತ್ತಿವೆ. ಕೋವಿಡ್ ಸಂದರ್ಭದಲ್ಲಿ ಜನರು ಸಸ್ಯ ಮೂಲಗಳಾದ ಲವಂಗ, ದಾಲಚಿನಿ, ನುಗ್ಗೆ, ತುಳಸಿ, ಲೋಳಸರ, ಅಮೃತ ಬಳ್ಳಿಯ ಬಳಕೆ ಮಾಡುತ್ತಿರುವುದೇ ತಾಜಾ ಉದಾಹರಣೆ. ಈ ಸಸ್ಯಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ರೋಗಾಣುಗಳು ನಮ್ಮ ದೇಹವನ್ನು ಪ್ರವೇಶಿಸದಂತೆ ತಡೆಯುತ್ತದೆ. ಆದರೆ ಇಂದು ಸಸ್ಯಗಳ ಪರಿಚಯ ಇಲ್ಲದೇ ಹೋಗುತ್ತಿದ್ದೆವೆ.ಆದ್ದರಿಂದ ಅಪರೂಪದ ಸಸ್ಯ ಸಂಪತ್ತಿನ ರಕ್ಷಣೆ ಜತೆಗೆ ಜೀವವೈವಿದ್ಯತೆಯನ್ನು ರಕ್ಷಿಸುವ ಕೆಲಸವಾಗಬೇಕು.ಅಲ್ಲದೇ ಪ್ರತಿಯೊಬ್ಬರಿಗೂ ಮನೆಯ ಹಿತ್ತಲಿನಲ್ಲಿ ಬೆಳೆದುಕೊಳ್ಳುವ ಹಾಗೂ ಬೆಳೆದಿರುವ ಸಸ್ಯದ ಔಷಧಿ ಗುಣಗಳ ಬಗ್ಗೆ ಜಾಗೃತಿ ಆಂದೋಲನ ಮಾಡಬೇಕೆಂದು ಹೇಳಿದರು.
ಡಾ.ರಶೀದ್ ಮರ್ಚಂಟ್ ಮಾತನಾಡಿ, ನಮ್ಮ ಸುತ್ತಮುತ್ತಲಿನಲ್ಲಿರುವ ತುಳಸಿ, ಅಜವಾನ, ಲೋಳಸರ, ಅಮೃತ ಬಳ್ಳಿ, ಸದಾ ಮಲ್ಲಿಗೆಯಂತಹ ಸಸ್ಯಗಳು ಬಹಳಷ್ಟು ಔಷಧಿ ಗುಣಗಳನ್ನು ಹೊಂದಿವೆ.ಅಲ್ಲದೇ ಬ್ರಯೋಫಿಲ್ಲಮ ಎಂಬ ಸಸ್ಯದ ಎಲೆಗಳನ್ನು ತಿಂದರೆ ಮೂತ್ರಪಿಂಡದಲ್ಲಿರುವ ಕಲ್ಲು ಕೂಡ ಕರಗುತ್ತದೆ.ಇಂತಹ ಅಮೂಲ್ಯವಾದ ಔಷಧಿ ಗುಣಗಳನ್ನು ಹೊಂದಿರುವ ಸಸ್ಯಗಳನ್ನು ಮನೆಯ ಅಂಗಳಲ್ಲಿ ಬೆಳೆಸುವುದರ ಮೂಲಕ ಇವುಗಳ ಸಂರಕ್ಷಣೆ ಮಾಡಬೇಕಿದೆ ಎಂದರು.
ಆಯುಷ್ ವೈದ್ಯಾಧಿಕಾರಿ ಆರತಿ ಬಡಿಗೇರ್, ಮಾಜಿ ನಗರಸಭೆ ಅಧ್ಯಕ್ಷ ಗಿರೀಶ ಕಂಬಾನೂರ, ನಗರಸಭೆ ಸದಸ್ಯರಾದ ಡಾ.ಅಹ್ಮದ್ ಪಟೇಲ್ ನಾಗರಾಜ ಕರಣಿಕ್, ಸಾಹೇಬ, ಸಾಜಿದ್ ಗುತ್ತೆದಾರ, ಅಜರೋದ್ದಿನ್, ಜಾವೀದ್, ಮೇಲ್ವಿಚಾರಕ ರವಿಕುಮಾರ ಮುತ್ತಗಾ ಸೇರಿದಂತೆ ಹಲವಾರಿ ಜನರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…