ಬಿಸಿ ಬಿಸಿ ಸುದ್ದಿ

ಪಿಎಸ್‌ಐ ಅಮಾನತ್ತಿಗೆ ಮಾಜಿ ಶಾಸಕ ಆರ್.ವಿ.ನಾಯಕ ಪತ್ರ

ಸುರಪುರ: ಹುಣಸಗಿ ತಾಲೂಕಿನ ಕೊಡೇಕಲ್ ಪೊಲೀಸ್ ಠಾಣೆಯ ಪಿಎಸ್‌ಐ ಬಾಷುಮಿಯಾ ಅವರನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿ ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರು ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದಾರೆ.

ನನ್ನ ಮತ ಕ್ಷೇತ್ರದ ವ್ಯಾಪ್ತಿಯ ಕೊಡೇಕಲ್ ಠಾಣೆಯ ಪಿಎಸ್‌ಐ ಅವರು ಪದೇ ಪದೇ ವಿನಾಕಾರಣವಾಗಿ ಕಾಂಗ್ರೇಸ್ ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಅಮಾಯಕರನ್ನು ವಿಚಾರಣೆಗೆಂದು ಠಾಣೆಗೆ ಕರೆಯಿಸಿ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಈ ಹಿಂದೆ ಬೆಂಚಿಗಡ್ಡಿ ಗ್ರಾಮದ ಅಪ್ರಾಪ್ತೆ ಮೇಲೆ ಫೆಬ್ರವರಿ ೩ ರಂದು ಅತ್ಯಾಚಾಕ್ಕೊಳಗಾಗಿದ್ದು ಈ ಪ್ರಕರಣಕ್ಕೆ ಸಂಬಂದಿಸಿದಂತೆ ಸಂತ್ರಸ್ಥೆ ಮತ್ತು ಪೊಷಕರು ಮೂರು ದಿನಗಟ್ಟಲೆ ಕೊಡೇಕಲ್ ಠಾಣೆಗೆ ಅಲಿದರು ಪ್ರಕರಣದಾಖಲಿಸದೆ ಪಿಎಸ್‌ಐ ಅವರು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿ, ದೂರು ನೀಡದಂತೆ ತಡೆಹಿಡಿದು ಕೊನೆಗೆ ಪೊಷಕರು ಪಟ್ಟುಹಿಡಿದಾಗ ಫೆಬ್ರವರಿ ೬ ರಂದು ಅಪರಾದ ಪ್ರಕರಣದಾಖಲಿಸಿರುತ್ತಾರೆ.

ಇದನ್ನೂ ಸಹ ಓದಿ: ಆಸ್ತಿಗಾಗಿ ಅಣ್ಣನ ಮಗನನ್ನೆ ಕೊಂದ ಪಾಪಿ ಚಿಕ್ಕಪ್ಪ: ದೀವಳಗುಡ್ಡದಲ್ಲಿ ಘಟನೆ

ಏದಲಬಾವಿ ಗ್ರಾಮದ ಜಟ್ಟೆಪ್ಪ ಪೂಜಾರಿಯವರನ್ನು ವಿನಾಕಾರಣ ಠಾಣೆಗೆ ಕರೆತಂದು ಬೆಳ್ಳಗ್ಗೆಯಿಂದ ರಾತ್ರಿಯವರೆಗೆ ಠಾಣೆಯಲ್ಲಿ ಕೂಡಿಸಿ ರಾತ್ರಿ ಅವರ ಮೇಲೆ ಎಫ್‌ಐಆರ್ ಅಪರಾಧ ಸಂಖ್ಯೆ:೮೬/೨೦೨೦ ಅಡಿಯಲ್ಲಿ ಸುಳ್ಳು ಮಾನಹಾನಿ ಕೇಸನ್ನು ದಾಖಲಿಸಿ ಜೈಲಿಗೆ ಕಳಿಸಿದ್ದಾರೆ. ಇತಂಹ ಅನೇಕ ಸುಳ್ಳು ಪ್ರಕರಣಗಳು ಕೊಡೇಕಲ್ ಪೊಲೀಸ್ ಠಾಣೆಯ ಪಿಎಸ್‌ಐ ಅವರು ಉದ್ದೇಶ ಪೂರ್ವಕವಾಗಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪದೇ ಪದೇ ದಾಖಲಿಸುತ್ತಿದ್ದಾರೆ.

ಇತ್ತೀಚಿಗೆ ಮಂಜಲಾಪುರ ಗ್ರಾಮದಲ್ಲಿ ಎರಡು ಸಮುದಾಯಗಳ ನಡುವೆ ಗಲಬೆ ನಡೆಯುತ್ತಿರುವ ಕುರಿತು ಗ್ರಾಮದ ಹಲವಾರು ಜನ ಪಿಎಸ್‌ಐ ಅವರಿಗೆ ದೂರವಾಣಿ ಮುಖಾಂತರ ಮಾಹಿತಿ ನೀಡಿದ್ದರು ಸಹ ಸ್ಥಳಕ್ಕೆ ಹೋಗಿ ಗಲಭೆಯನ್ನು ತಡೆಯದೆ ಬೇಜವಾಬ್ದಾರಿಯಾಗಿ ವರ್ತಿಸಿದ್ದಾರೆ. ಹಾಗೂ ಈ ಗಲಭೆಯನ್ನು ಸಂಬಂಧಪಟ್ಟ ಹುಣಸಗಿ ಠಾಣೆಯ ಆರಕ್ಷಕ ನೀರೀಕ್ಷರು ಸ್ಥಳಕ್ಕೆ ಬೇಟಿನೀಡಿ ಎರಡೂ ಸಮುದಾಯದವರಿಗೆ ತಿಳಿಹೇಳಿ ಪರಿಸ್ಥಿತಿಯನ್ನು ತಿಳಿಗೊಳಿಸಿರುತ್ತಾರೆ.

ಹಿಂದೆ ಗ್ರಾಮ ಪಂಚಾಯತಿ ಅಧ್ಯಕ್ಷ ಚುನಾವಣೆ ಸಮಯದಲ್ಲಿ ರಾಜಕೀಯ ದುರುದ್ದೇಶದಿಂದ ಗೆದ್ದಲಮರಿ ತಾಂಡಾದ ಮೂರು ಜನ ಕಾಂಗ್ರೇಸ್ ಕಾರ್ಯಕರ್ತರಾದ ಬಸವರಾಜ ತಂ/ಕೃಷ್ಣಪ್ಪ ಜಾದವ ಅಲಿಯಾಸ (ಗುಂಡಪ್ಪ), ಕೃಷ್ಣ ತಂ/ ಹಣಮಂತ ಜಾದವ, ಶಾಂತಿಲಾಲ ತಂ/ಸಕ್ರೇಪ್ಪ ಪವಾರ ಇವರ ಮೇಲೆ ಅಪರಾಧ ಸಂಖ್ಯೆ: ೦೪/೨೦೨೧ಅಡಿಯಲ್ಲಿ ಪಿಎಸ್‌ಐ ಬಾಶುಮೀಯಾ ಕೊಂಚೂರ ಇವರು ತಾವೆ ಖುದ್ದಾಗಿ ನಿರಪರಾಧಿಗಳ ಮೇಲೆ ಅಪಹರಣ ಪ್ರಕರಣ ದಾಖಲಿಸಲು ಅರ್ಜಿಯನ್ನು ಬಿಜೆಪಿ ಕಾರ್ಯಕರ್ತರಿಂದ ಪಡೆದು ಪ್ರಕರಣ ದಾಖಲಿಸಿ ದಿನಾಂಕ ಇದೇ ಫೇಬ್ರವರಿ ೧೪ ರಂದು ಗೆದ್ದಲಮರಿ ತಾಂಡಾದ ಕಾರ್ಯಕರ್ತನಾದ ಬಸವರಾಜ ತಂ/ಕೃಷ್ಣಪ್ಪ ಜಾದವ ಅಲಿಯಾಸ (ಗುಂಡಪ್ಪ) ಇವರನ್ನು ಬಂಧಿಸಿ,ದೈಹಿಕ ಹಲ್ಲೆ ಮತ್ತು ಜಾತಿನಿಂದನೆ ಮಾಡಿದ್ದಾರೆ.

ಇದನ್ನೂ ಸಹ ಓದಿ: ಮದುವೆಗೆ ವಿಳಂಬ: ಇಬ್ಬರು ಯುವ ಪ್ರೇಮಿಗಳ ಆತ್ಮಹತ್ಯೆ

ಆದ್ದರಿಂದ ಸದರಿ ಮೂರ ಜನರಮೇಲೆ ದಾಖಲಿಸಿರುವ ಪ್ರಕರಣವು ಸುಳ್ಳ ಪ್ರಕರಣವಾಗಿರುವುದರಿಂದ ಇವರ ಮೇಲಿರುವ ಪ್ರಕರಣವನ್ನು ರದ್ದುಗೊಳಿಸಿ ಕೊಡೆಕಲ್ ಠಾಣೆಯ ಪಿಎಸ್‌ಐ ಬಾಶುಮಿಯಾ ಕೊಂಚೂರು ಅವರು ಕಾಂಗ್ರೇಸ್ ಕಾರ್ಯಕರ್ತರನ್ನು ಗುರಿಯಾಗಿಸಿ ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ. ಇವರು ಸರ್ಕಾರ ನೌಕರರೆಂದು ಮರೆತು ಜನರ ಸೇವೆಯನ್ನು ಮಾಡದೆ ತನ್ನ ಅಧಿಕಾರವನ್ನು ದುರೂಪಯೋಗಪಡಿಸಿಕೊಂಡು ಬಿಜೆಪಿ ಪಕ್ಷದವರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಕಾರಣ ಸದರಿ ಪಿಎಸ್‌ಐ ಅವರನ್ನು ಕೊಡಲೆ ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಅವರು ತಮ್ಮ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಎಸಿಸಿ ಸಿಮೆಂಟ್ ಕಂಪೆನಿ ಅಧಿಕಾರಿಗಳ ವಿರುದ್ಧ ಜಾತಿ ನಿಂದನೆ ದೂರು

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago