ಕಲಬುರಗಿ: ಮದುವೆ ಮುಂದೂಡುತ್ತಿರುವ ಬಗ್ಗೆ ಆತಂಕಗೊಂಡು ಇಬ್ಬರು ಪ್ರೇಮಿಗಳಿಬ್ಬರು ಮರದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಯಡ್ರಾಮಿ ತಾಲೂಕಿನ ಅಖಂಡಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಮಾನಶಿವಣಗಿ ಗ್ರಾಮದ ಪರಶುರಾಮ ಪೂಜಾರಿ (23) ಮತ್ತು ಭಾಗ್ಯಶ್ರೀ ಒಡೆಯರ್ (18) ಆತ್ಮಹತ್ಯೆ ಮಾಡಿಕೊಂಡ ಯುವ ಪ್ರೇಮಿಗಳು. ಇಬ್ಬರೂ ಸಂಬಂಧಿಕರೇ ಆಗಿದ್ದು, ಅಕ್ಕಪಕ್ಕದ ಮನೆಯಲ್ಲಿ ವಾಸವಿದ್ದರು. ಪರುಶುರಾಮ ಕೃಷಿ ಕೆಲಸ ಹಾಗೂ ಭಾಗ್ಯಶ್ರೀ ಪಿಯುಸಿ ಓದುತ್ತಿದ್ದಳು. ಇಬ್ಬರ ನಡುವೆ ಕೆಲ ವರ್ಷಗಳ ಹಿಂದೆಯೇ ಪ್ರೀತಿ ಶುರುವಾಗಿದ್ದು, ಯುವತಿ ತನ್ನ ಪ್ರೇಮಿಯೊಂದಿಗೆ ಮದುವೆಯಾಗುವುದಾಗಿಒ ಪಟ್ಟು ಹಿಡಿದಿದ್ದಳು ಎಂದು ತಿಳಿದುಬಂದಿದೆ.
ಇದನ್ನೂ ಸಹ ಓದಿ: ತೊಗರಿ ಬೆಳೆಗಾರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾನವ ಸರಪಳಿ ಪ್ರತಿಭಟನೆ
ಪರಶುರಾಮ ಭಾಗ್ಯಶ್ರೀಯ ಸೋದರತ್ತೆ ಮಗನಾದ ಕಾರಣ ಮನೆಯ ಹಿರಿಯರು ಚರ್ಚಿಸಿ, ಆದಷ್ಟು ಬೇಗ ನಿಶ್ಚಿತಾರ್ಥ ಮಾಡಿ, ಸ್ವಲ್ಪ ತಡವಾಗಿ ಮದುವೆ ಮಾಡಿದರಾಯ್ತು ಎಂದು ನಿರ್ಧರಿಸಿದ್ದರು ಎನ್ನಲಾಗಿದೆ. ಆದರೆ ಮದುವೆ ಏಕೆ ತಡ ಮಾಡುತ್ತೀರಿ ಎಂದು ಬೇಸರಗೊಂಡು ಪ್ರೇಮಿಗಳಿಬ್ಬರು ಫೆ. 11ರಂದು ಮನೆ ಬಿಟ್ಟು ಹೋಗಿದ್ದರು ಎಂದು ಮೃತಳ ತಂದೆ ದೂರಿನಲ್ಲಿ ತಿಳಿಸಿದ್ದಾರೆ.
ಮದುವೆ ಮಾಡುವುದಾಗಿ ಹೇಳಿ, ಬಳಿಕ ತಮ್ಮನ್ನು ದೂರ ಮಾಡಬಹುದು ಎಂಬ ಸಂದೇಹದಿಂದ ಪ್ರೇಮಿಗಳು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಫೆ. 11ರಂದು ಮನೆ ಬಿಟ್ಟು ಹೋಗಿದ್ದ ಪ್ರೇಮಿಗಳು, ಇಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಇದನ್ನೂ ಸಹ ಓದಿ: ಪಟ್ಟಾಧಿಕಾರ ಮಹೋತ್ಸವ ಅದ್ದೂರಿ ಆಚರಣೆ; ರಾಜಕುಮಾರ ಪಾಟೀಲ್ ತೇಲ್ಕೂರ್
ಘಟನಾ ಸ್ಥಳಕ್ಕೆ ಸ್ಥಳಕ್ಕೆ ಯಡ್ರಾಮಿ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.