ಕಲಬುರಗಿ: ವಾಡಿ ಪಟ್ಟಣದ ಎಸಿಸಿ ಸಿಮೆಂಟ್ ಕಾರ್ಖಾನೆಯ ವಿವಿಧ ವಿಭಾಗಗಳ ಮೂವರು ವ್ಯವಸ್ಥಾಪಕ ಅಧಿಕಾರಿಗಳ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ದೂರು ದಾಖಲಾಗಿದೆ.
ಕಂಪನಿಯ ಸಿಮೆಂಟ್ ಲಾಜಸ್ಟಿಕ್ ವಿಭಾಗದ ಡಿಜಿಎಂ ಗೋಕುಲಕೃಷ್ಣ, ಎಚ್‌ಆರ್ ಮುಖ್ಯಸ್ಥ ನಾಗೇಶ್ವರರಾವ ಹಾಗೂ ಸೆಕ್ಯೂರಿಟಿ ಅಧಿಕಾರಿ ಶಮಶೀರಸಿಂಗ್ ಜಾತಿನಿಂದನೆ ಪ್ರಕರಣಕ್ಕೆ ಗುರಿಯಾದ ಎಸಿಸಿ ಅಧಿಕಾರಿಗಳು. ಎಸಿಸಿ ಘಟಕದಿಂದ ಲಾರಿಗಳ ಮೂಲಕ ಗೋವಾ ಸೇರಿದಂತೆ ದೇಶದ ನಾನಾ ರಾಜ್ಯಗಳಿಗೆ ಸಿಮೆಂಟ್ ಸಾಗಾಣಿಕೆ ಮಾಡುವ ಧನಲಕ್ಷ್ಮೀ ಟ್ರಾನ್ಸ್‌ಪೋರ್ಟ್ ಮಾಲೀಕ, ಮಹರ್ಷಿ ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಭೀಮರಾವ ದೊರೆ ಈ ದೂರು ದಾಖಲಿಸಿದ ಸಂತ್ರಸ್ಥರಾಗಿದ್ದಾರೆ.
ಇದನ್ನೂ ಓದಿ: ಆಸ್ತಿಗಾಗಿ ಅಣ್ಣನ ಮಗನನ್ನೆ ಕೊಂದ ಪಾಪಿ ಚಿಕ್ಕಪ್ಪ: ದೀವಳಗುಡ್ಡದಲ್ಲಿ ಘಟನೆ
ಟ್ರಾನ್ಸ್‌ಪೋರ್ಟ್ ವ್ಯವಹಾರಕ್ಕೆ ಸಂಬಂದಿಸಿದಂತೆ ದೂರುದಾರ ಭೀಮರಾವ ದೊರೆ ಮತ್ತು ಎಸಿಸಿ ಕಂಪನಿ ಅಧಿಕಾರಿಗಳೊಂದಿಗೆ ಕಳೆದ ಹಲವು ತಿಂಗಳಿಂದ ತಕರಾರು ನಡೆಯುತ್ತಿತ್ತು ಎನ್ನಲಾಗಿದ್ದು, ಫೆ.೧೧ ರಂದು ಸಂಜೆ ಇದೇ ವಿಷಯಕ್ಕೆ ಮತ್ತೆ ವಾಗ್ವಾದ ಉಂಟಾಗಿದೆ. ಕಂಪನಿ ಆವರಣದಲ್ಲಿ ಪರಸ್ಪರ ಹೊಡೆದಾಟವೂ ನಡೆದಿದೆ ಎನ್ನಲಾಗಿದ್ದು, ಈ ಸಂದರ್ಭದಲ್ಲಿ ಕಂಪನಿ ಅಧಿಕಾರಿಗಳು ಅವಾಚ್ಯ ಪದಗಳನ್ನು ಬಳಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಭೀಮರಾವ ದೊರೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಸಹ ಓದಿ: ಪಿಎಸ್‌ಐ ಅಮಾನತ್ತಿಗೆ ಮಾಜಿ ಶಾಸಕ ಆರ್.ವಿ.ನಾಯಕ ಪತ್ರ
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…