ಕಲಬುರಗಿ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಹಿಂಗಾರು ಹಂಗಾಮಿನಲ್ಲಿ ಕಡಲೆಕಾಳು ಉತ್ಪನ್ನವನ್ನು ಪ್ರತಿ ಕ್ವಿಂಟಾಲ್‍ಗೆ 5,100 ರೂ.ಗಳ ದರದಲ್ಲಿ ಕಲಬುರಗಿ ಜಿಲ್ಲೆಯ ರೈತರಿಂದ ಖರೀದಿಸಲು ಜಿಲ್ಲೆಯಲ್ಲಿ ಒಟ್ಟು 64 ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಕಡಲೆಕಾಳು ಬೆಳೆದ ರೈತರು ಅವಶ್ಯಕ ದಾಖಲಾತಿಗಳೊಂದಿಗೆ ತಮ್ಮ ಹತ್ತಿರದ ಯಾವುದೇ ಕಡಲೆಕಾಳು ಖರೀದಿ ಕೇಂದ್ರಕ್ಕೆ ತೆರಳಿ ಆನ್‍ಲೈನ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಕಲಬುರಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಟಾಸ್ಕ್‍ಫೋರ್ಸ್ ಸಮಿತಿಯ ಅಧ್ಯಕ್ಷರಾದ ವಿ.ವಿ. ಜ್ಯೋತ್ಸ್ನಾ ಅವರು ಮನವಿ ಮಾಡಿದ್ದಾರೆ.
ಹೈವೋಲ್ಟ್ ವಿದ್ಯುತ್ ತಂತಿ ಸ್ಪರ್ಷ: ಇಬ್ಬರು ಗಂಭೀರ
ಪ್ರತಿ ಎಕರೆಗೆ 4 ಕ್ವಿಂಟಲ್‍ನಂತೆ ಗರಿಷ್ಠ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಾಲ್ ಕಡಲೆಕಾಳು ಉತ್ಪನ್ನ ಮಾತ್ರ ಖರೀದಿಸಲಾಗುತ್ತದೆ. ಈಗಾಗಲೇ ಫೆಬ್ರವರಿ 15 ರಿಂದ ಹೆಸರು ನೋಂದಣಿ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಕಡಲೆಕಾಳು ಉತ್ಪನ್ನ ಬೆಳೆದ ರೈತರು ಹತ್ತಿರದ ಯಾವುದೇ ಕಡಲೆ ಖರೀದಿ ಕೇಂದ್ರಕ್ಕೆ ಅವಶ್ಯಕ ದಾಖಲಾತಿಗಳೊಂದಿಗೆ ತೆರಳಿ ಆನ್‍ಲೈನ್‍ನಲ್ಲಿ 2021ರ ಏಪ್ರಿಲ್ 30 ರೊಳಗಾಗಿ ನೋಂದಾಯಿಸಿಕೊಳ್ಳಬೇಕು. ರೈತರಿಂದ 2021ರ ಫೆಬ್ರವರಿ 22 ರಿಂದ ಮೇ 14 ವರೆಗೆ ಕಡಲೆಕಾಳು ಖರೀದಿಯ ದಿನಾಂಕವನ್ನು ನಿಗದಿಪಡಿಸಲಾಗಿದೆ.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದ 36 ಖರೀದಿ ಕೇಂದ್ರಗಳನ್ನು ಹಾಗೂ ಕಲಬುರಗಿಯ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ 28 ಸೇರಿದಂತೆ ಒಟ್ಟು 64 ಕಡಲೆಕಾಳು ಖರೀದಿ ಕೇಂದ್ರಗಳ್ನು ಸ್ಥಾಪಿಸಲಾಗಿದೆ.
ಕಲಬುರಗಿ ತಾಲೂಕು: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದ ಖರೀದಿ ಕೇಂದ್ರಗಳಾದ ಭೀಮಳ್ಳಿ, ಹೊನ್ನಕಿರಣಗಿ, ಔರಾದ, ಕಲಮೂಡ, ಫರಹತಾಬಾದ, ಫೀರೋಜಾಬಾದ, ನಾಗೂರ ಹಾಗೂ ಕಲಬುರಗಿ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಖರೀದಿ ಕೇಂದ್ರಗಳಾದ ಸಣ್ಣೂರ, ಮಹಾಗಾಂವ, ಮೇಳಕುಂದಾ (ಬಿ) ನೇಗಿಲಯೋಗಿ ರೈತ ಸಂಘ (ಎಫ್‍ಪಿಓ), ಶ್ರೀನಿವಾಸ ಸರಡಗಿ ಹಾಗೂ ಟಿಎಪಿಸಿಎಮ್‍ಎಸ್ ಕಲಬುರಗಿ.
ರಾಜ್ಯಸಭೆ ವಿರೋಧ ಪಕ್ಷ ನಾಯಕರಾಗಿ ಡಾ. ಖರ್ಗೆ ಆಯ್ಕೆ: ಯುವ ಕಾಂಗ್ರೆಸ್ ದಿಂದ ವಿಜಯೋತ್ಸವ
ಸೇಡಂ ತಾಲೂಕು: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದ ಖರೀದಿ ಕೇಂದ್ರಗಳಾದ ಯಡಗಾ, ಸಿಂಧನಮಡು, ಊಡಗಿ, ಕಾನಾಗಡ್ಡಾ ಹಾಗೂ ಕಲಬುರಗಿ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಖರೀದಿ ಕೇಂದ್ರಗಳಾದ ಅಡಕಿ, ಮುಧೋಳ, ಹಂದರಕಿ, ಮುಧೋಳ ಬಲಭೀಮ ಸೇನಾ ರೈತ ಉತ್ಪಾದಕರ ಸಂಸ್ಥೆ-ಎಫ್‍ಪಿಓ.
ಅಫಜಲಪುರ ತಾಲೂಕು: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದ ಖರೀದಿ ಕೇಂದ್ರಗಳಾದ ಮಣ್ಣೂರ, ಅತನೂರ, ಗೊಬ್ಬೂರ (ಬಿ), ರೇವೂರ, ಮಶ್ಯಾಳ ಹಾಗೂ ಕಲಬುರಗಿ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಖರೀದಿ ಕೇಂದ್ರಗಳಾದ ಕರಜಗಿ, ದೇವಲಗಾಣಗಾಪುರ ಸಂಗಮ್ಮನಾಥ ತೋಟಗಾರಿಕಾ ರೈತ ಉತ್ಪಾದಕರ ಸಂಸ್ಥೆ(ಎಫ್‍ಪಿಓ), ಚಿಣಮಗೇರಾ ಹಾಗೂ ಟಿಎಪಿಸಿಎಮ್‍ಎಸ್ ಅಫಜಲಪುರ.
ಆಳಂದ ತಾಲೂಕು: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದ ಖರೀದಿ ಕೇಂದ್ರಗಳಾದ ಖಜೂರಿ, ನರೋಣಾ, ಕಡಗಂಚಿ, ಮಾದನ ಹಿಪ್ಪರಗಾ, ಚಿಂಚನಸೂರ (ಕೆರೆ ಅಂಬಲಗಾ), ಕಿಣ್ಣಿ ಸುಲ್ತಾನ ಹಾಗೂ ಕಲಬುರಗಿ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಖರೀದಿ ಕೇಂದ್ರಗಳಾದ ತಡಕಲ್, ನಿಂಬರ್ಗಾ, ಸರಸಂಬಾ, ಭೂಸನೂರ.
ಚಿಂಚೋಳಿ ತಾಲೂಕು: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದ ಖರೀದಿ ಕೇಂದ್ರಗಳಾದ ಸಾಲೇಬೀರನಳ್ಳಿ, ಕನಕಪೂರ, ಸುಲೇಪೇಟ್, ಕೂಡ್ಲಿ ಹಾಗೂ ಕಲಬುರಗಿ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಖರೀದಿ ಕೇಂದ್ರಗಳಾದ ಐನೊಳ್ಳಿ, ಐನಾಪುರ, ಚಿಮ್ಮನಚೂಡ.
ಚಿತ್ತಾಪುರ ತಾಲೂಕು: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದ ಖರೀದಿ ಕೇಂದ್ರಗಳಾದ ದಿಗ್ಗಾಂವ್, ಭೀಮನಳ್ಳಿ, ಅಲ್ಲೂರ (ಬಿ), ಗೋಟೂರ, ಗುಂಡಗುರ್ತಿ, ಕೊಡದೂರ, ಕಂದಗೊಳ ಹಾಗೂ ಕಲಬುರಗಿ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಖರೀದಿ ಕೇಂದ್ರಗಳಾದ ಬಂಕೂರ, ಕಾಳಗಿ, ನಾಲವಾರ, ಹೆರೂರ, ಹಲಕಟ್ಟಾ, ಪೇಠಶೀರೂರ ನೃಪತುಂಗಾ ರೈತ ಉತ್ಪಾದಕರ ಸಂಸ್ಥೆ (ಎಫ್‍ಪಿಓ), ಅರಣಕಲ್, ತೊನಸನಳ್ಳಿ.
ಜೇವರ್ಗಿ ತಾಲೂಕು: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದ ಖರೀದಿ ಕೇಂದ್ರಗಳಾದ ಕೋಳಕೂರ, ನರಿಬೋಳ, ನೆಲೋಗಿ ಹಾಗೂ ಕಲಬುರಗಿ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಖರೀದಿ ಕೇಂದ್ರವಾದ ಬಳಬಟ್ಟಿ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…