ಶಹಾಬಾದ: ನಗರದ ಕನ್ನಡಭವನದಲ್ಲಿ ಶುಕ್ರವಾರ ಕಸಾಪ ಕಲಬುರಗಿ ಗ್ರಾಮೀಣ ವತಿಯಿಂದ ಸವಿತಾ ಮಹರ್ಷಿ ಅವರ ಜಯಂತಿಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಾಮಾಜಿಕ ಚಿಂತಕ ಲೋಹಿತ್ ಕಟ್ಟಿ ಮಾತನಾಡಿ, ಸವಿತಾ ಸಮಾಜದವರು ಮಾಡುವ ಕ್ಷೌರಿಕ ವೃತ್ತಿಯಿಂದ ನಾವುಗಳು ಸೌಂದರ್ಯದಿಂದ ಕಾಣುತ್ತಿದ್ದೇವೆ ಒಂದು ವೇಳೆ ಅವರು ತಮ್ಮ ಕಸುಬುನ್ನು ನಿಲ್ಲಿಸಿದರೆ ನಮ್ಮ ರೂಪ ಊಹಿಸಿಕೊಳ್ಳಲು ಸಾದ್ಯವಿಲ್ಲ ಅಭಿಪ್ರಾಯ ವ್ಯಕ್ತಪಡಿಸಿದರು.
ವೀರ ಶೂರ ಚಾರಿತ್ರ್ಯವಂತ ಮಹಾರಾಜ ಶಿವಾಜಿ: ಸಾಳುಂಕೆ
ಸವಿತಾ ಮಹರ್ಷೀ ಅವರು ಚೌರ, ಸಂಗೀತ ಕರ್ಮಗಳನ್ನು ಸೃಷ್ಟಿಕರ್ತನಿಂದ ವರವಾಗಿ ಪಡೆದಿದ್ದಾರೆ ಎಂದು ಪೌರಾಣಿಕ ಕಥೆಗಳಿಂದ ತಿಳಿದು ಬರುತ್ತದೆ. ಒಬ್ಬ ಮನು? ಸುಂದರವಾಗಿ ಕಾಣಲು ಕ್ಷೌರ ಹಾಗೂ ಮಾನಸಿಕವಾಗಿ ಸದೃಢನಾಗಲು ಸಂಗೀತ ಬಹಳ ಅಗತ್ಯವಾಗಿದೆ.ಆದ್ದರಿಂದ ಸಮಾಜದ ಪ್ರತಿಯೊಬ್ಬರು ಈ ಸಮಾಜಕ್ಕೆ ಗೌರವ ನೀಡ ಬೇಕೆಂದರು.
ಸವಿತಾ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಕಟ್ಟಕಡೆಯ ಸಮಾಜವಾಗಿದ್ದು ಈ ಸಮುದಾಯಕ್ಕೆ ನೈತಿಕ ಸ್ಥೈರ್ಯವನ್ನು ತುಂಬಲು ಸರ್ಕಾರ ಸವಿತಾ ಮಹರ್ಷಿ ಅವರ ಜಯಂತ್ಯುತ್ಸವ ಆಚರಣೆ ಮಾಡುತ್ತಿದೆ. ಕೇಶಮುಂಡನೆ ಮಾಡುವ ವೃತ್ತಿ ನೈಪುಣ್ಯತೆ ಹೊಂದಿರುವ ವ್ಯಕ್ತಿಯು ಸವಿತಾ ಮಹರ್ಷಿ ಅವರ ಅನುಯಾಯಿ ಆಗಿರುತ್ತಾರೆ. ಕೇಶಮುಂಡನೆ ವೃತ್ತಿಯು ಅದ್ಭುತ ಕಲೆಯಾಗಿದ್ದು, ವೃತ್ತಿಯ ಬಗ್ಗೆ ಕೀಳರಿಮೆ ಬೇಡ. ಸಮಾಜದವರು ವೃತ್ತಿ ಧರ್ಮದ ಜತೆ ಶೈಕ್ಷಣಿವಾಗಿ ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.
15ನೇ ಹಣಕಾಸು ಅನುದಾನ ದುರ್ಬಳಕೆ: ತನಿಖೆಗೆ ಕರವೇ ಆಗ್ರಹ
ಸಂತೋಷ ಕೋಟನೂರ ಮಾತನಾಡಿದರು.ಕಸಾಪ ಕಲಬುರಗಿ ಗ್ರಾಮೀಣ ಅಧ್ಯಕ್ಷ ಶರಣಗೌಡ ಪಾಟೀಲ, ಗಣ್ಯರಾದ ಮರಲಿಂಗ ಕಮರಡಗಿ,ಕಸಾಪ ನಗರಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ಸವಿತಾ ಸಮಾಜದ ಅಧ್ಯಕ್ಷ ದಶರಥ.ಎಸ್.ಕೋಟಿನೂರ್,ಪ್ರಧಾನ ಕಾರ್ಯದರ್ಶಿ ವೀರಭದ್ರ ಮೊರೆ,ಸಂತೋ? ಕೋಟನೂರ್, ರಾಜೇಶ ಅಲ್ಲಿಪುರ್, ವಿಠ್ಠಲ ಸತನೂರ್,ಕಂಟಪ್ಪ ಕೋಟನೂರ, ಬಸವರಾಜ ಅಲ್ಲಿಪುರ್,ನರಸಪ್ಪ ಸತನೂರ್,ಬಸವರಾಜ್ ಸತನೂರ್,ನರಸಿಂಗ ಸತನೂರ್, ರಜನಿ, ಮಲ್ಲು ಅಲ್ಲಿಪುರ್, ಶಾಂತಪ್ಪ ಹಡಪದ,ರಮೇಶ ಜೋಗದನಕರ್ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…