ವೀರ ಶೂರ ಚಾರಿತ್ರ್ಯವಂತ ಮಹಾರಾಜ ಶಿವಾಜಿ: ಸಾಳುಂಕೆ

1
86

ಶಹಾಬಾದ: ಜಗತ್ತಿನಲ್ಲಿ ಹಲವಾರು ವೀರ ಶೂರ ಮಹಾರಾಜರಲ್ಲಿ ಜಾಣತನ ಮತ್ತು ಚಾರಿತ್ರ್ಯವಂತ ಯುಗಪುರುಷರೇನಾದರೂ ಇದ್ದರೆ ಅವರೇ ಛತ್ರಪತಿ ಶಿವಾಜಿ ಮಹಾರಾಜರು ಎಂದು ಶಿಕ್ಷಕ ಬಾಬಾಸಾಹೇಬ ಸಾಳುಂಕೆ ಹೇಳಿದರು.

ಅವರು ಶುಕ್ರವಾರ ನಗರದ ರಾಷ್ಟ್ರಭಾಷಾ ಶಿಕ್ಷಣ ಸಮಿತಿಯ ವಿವಿಧ ಪ್ರಕಲ್ಪಗಳಿಂದ ಆಯೋಜಿಸಲಾದ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

15ನೇ ಹಣಕಾಸು ಅನುದಾನ ದುರ್ಬಳಕೆ: ತನಿಖೆಗೆ ಕರವೇ ಆಗ್ರಹ

ಯಾವುದೇ ಜಾತಿ,ಭಾಷೆಗಳ ಭೇದ ಭಾವ ಮಾಡದೇ ಜಾತಿ ರಹಿತ ಸಂಘಟನೆ ಕಟ್ಟಿದ್ದರು. ಅವರು ಮಹಿಳೆಯರಲ್ಲಿ ತಾಯಿಯ ಸ್ವರೂಪವನ್ನು ಕಾಣುತ್ತಿದ್ದರು. ೧೭ ನೇ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ಧರ್ಮ ಹಾಗೂ ರಾಜ್ಯ ವ್ಯವಸ್ಥೆ ಘಾಸಿಗೊಂಡಾಗ ತನ್ನ ಸ್ವ-ಸಾಮರ್ಥ್ಯದಿಂದ ಮೊಘಲರನ್ನು ಎದುರಿಸಿ, ಸಾಮ್ರಾಜ್ಯವನ್ನು ಕಟ್ಟಿ ಭಾರತೀಯರ ಕಣ್ಮಣಿಯಾದ ಛತ್ರಪತಿ ಶಿವಾಜಿಯ ದೇಶಭಕ್ತಿ ಅನುಪಮ ಹಾಗೂ ಅನುಕರಣಿಯವಾದುದು. ಅಲ್ಲದೇ ಭಾರತೀಯ ಕಲೆಗೆ ಅರ್ಥ ತಂದ ವ್ಯಕ್ತಿ ಅವರು.ಕಡಿಮೆ ಅವಧಿಯಲ್ಲಿ ಇಡೀ ದೇಶ ಸಂಚರಿಸಿ, ಸಾಮ್ರಾಜ್ಯ ಕಟ್ಟಿದ ಮಹಾನ್ ಪರಾಕ್ರಮಿಯಾಗಿದ್ದರು ಎಂದು ಹೇಳಿದರು.

ಎಸ್.ಜಿ.ವರ್ಮಾ ಹಿಂದಿ ಶಾಲೆಯ ಮುಖ್ಯಗುರುಮಾತೆ ಅನಿತಾ ಶರ್ಮಾ ಮಾತನಾಡಿ,ಸಮಾಜದ ಶ್ರೇಷ್ಠತೆಗೆ ಶ್ರಮಿಸಿದ ಯುಗಪುರುಷ ಎಂದೇ ಖ್ಯಾತರಾದ ಶ್ರೀ ಸವಿತಾ ಮಹರ್ಷಿಗಳ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು. ಸವಿತಾ ಮಹರ್ಷಿಗಳು ಸಮಾಜಮುಖಿಯಾಗಿ ಬೆಳೆದು ನಮ್ಮೆಲ್ಲರಿಗೂ ದಾರಿದೀಪವಾಗಿದ್ದಾರೆ ಎಂದು ಹೇಳಿದರು.

ಸಾಮಾನ್ಯ ಕಾನೂನುಗಳ ತಿಳಿಯಲು ಪದವಿ ವಿದ್ಯಾರ್ಥಿಗಳಿಗೆ ಪೊಲೀಸ್ ಕಿರು ಪರೀಕ್ಷೆ

ರಾಷ್ಟ್ರಭಾಷಾ ಶಿಕ್ಷಣ ಸಮಿತಿಯ ಮೂರು ವಿಭಾಗದ ಮುಖ್ಯಗುರುಗಳಾದ ದಮಯಂತಿ ಸೂರ್ಯವಂಶಿ,ಅನಿತಾ ಶರ್ಮಾ, ಸುಧೀರ ಕುಲಕರ್ಣಿ, ಚನ್ನಬಸಪ್ಪ ಕೊಲ್ಲೂರ್,ಅನಿಲಕುಮಾರ ಕುಲಕರ್ಣಿ,ವಸಂತ ಪಾಟೀಲ, ಶಿರೋಮಣೀ ದಯಾಲ, ಜಗದೇವಿ ಅಗಸ್ಥ್ಯತೀರ್ಥ, ಸುರೇಖಾ, ಸಂಗೀತಾ, ಮಹೇಶ್ವರಿ ಗುಳಿಗಿ, ರಾಜೇಶ್ವರಿ.ಎಮ್, ಗೀತಾ ಪುಂಡಲಿಕ್,ಶ್ರೀರಾಮ ಚವ್ಹಾಣ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here