ಅಫಜಲಪುರ: ಪ್ರಾಥಮಿಕ ಆರೋಗ್ಯ ಕೇಂದ್ರ ಗೊಬ್ಬೂರು ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರದಲ್ಲಿ ಇಂದು ನೂತನ ಗ್ರಾಮ ಪಂಚಾಯತ್ ಸದಸ್ಯರಾದ ಪೀರ್ ಹಮದ್ ಜಮಾದಾರ್ ದೀಪ ಬೆಳಗಿಸುವುದರ ಮೂಲಕ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ತದನಂತರಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಬಳಿ ಅವರು ಕಾರ್ಯಕ್ರಮ ಕುರಿತು ಮಾತನಾಡುತ್ತಾ ಆರೋಗ್ಯವಂತ ಶಿಶು ಮಕ್ಕಳು ದೇಶದ ಸಂಪತ್ತು ಅದಕ್ಕಾಗಿ ಗರ್ಭಿಣಿ ಎಂದು ತಿಳಿದ ತಕ್ಷಣ ತಾಯಿ ಕಾರ್ಡ್ ಮಾಡಿಸುವುದು ಅದರ ಮಹತ್ವ ಅಲ್ಲದೆ ನಾಲ್ಕು ಬಾರಿ ತಪಾಸಣೆ ಮಾಡಿಸುವುದು,, ಸರಕಾರದ ಅನೇಕ ಸೌಲಭ್ಯಗಳು ತಾಯಿ ಮತ್ತು ಮಗುವಿಗಾಗಿ ಇರುವುದನ್ನು ಗಮನಕ್ಕೆ ತಂದರು.
ಸಾಹಿತ್ಯ ಸಮೇಳನದ ಖರ್ಚು ವೆಚ್ಚದ ಮಾಹಿತಿ ನೀಡುವಂತೆ ಸಿಎಂ ಬಳಿ ನಿಯೋಗ
ಪ್ರಧಾನಮಂತ್ರಿ ಮಾತೃತ್ವ ಸಂರಕ್ಷಣಾ ಯೋಜನೆ ಪ್ರತಿ ತಿಂಗಳು ಒಂಬತ್ತು ನೇ ತಾರೀಖಿನಂದು ಜರುಗುವುದು ಅದರಲ್ಲಿ ಅಪಾಯಕಾರಿ ಗರ್ಭಿಣಿಯರನ್ನು ಸಂರಕ್ಷಿಸುವುದು ಅಲ್ಲದೆ ತಾಯಿ ಮಗುವಿನ ಸಾವಿನ ಪ್ರಮಾಣವನ್ನು ತಡೆಯುವುದರ ಬಗ್ಗೆ ಕುಲಂಕುಶವಾಗಿ ಮಾಹಿತಿಯನ್ನು ನೀಡಿದರು.
ನಂತರ ಅಲ್ಲಿನ ಕಿರಿಯ ಆರೋಗ್ಯ ಸಹಾಯಕಿ ಮಹಿಳೆ ಪ್ರಿಯಾ ಅವರು ಮಾತನಾಡಿ ತಾಯಿಯ ಎದೆ ಹಾಲಿನ ಮಹತ್ವ ಹಾಗೂ ನೂತನ ಗರ್ಭಧಾರಣೆ ತಡೆಗಟ್ಟುವ ವಿಧಾನಗಳ ಕುರಿತು ಮಾಹಿತಿಯನ್ನು ನೀಡಿದರು.
ಯಾದಗಿರಿ: ವನದುರ್ಗ ಸರ್ಕಾರಿ ಆಸ್ಪತ್ರೆಗೆ ಬೀಗ
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗರ್ಭಿಣಿ ತಾಯಿಯಂದಿರು, ಮಗುವಿನ ಪಾಲಕರು ಅಲ್ಲದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುರೇಖಾ ಮತ್ತು ಸಹ ಶಿಕ್ಷಕರು ಭಾಗವಹಿಸಿದ್ದರು.
ಪ್ರಥಮ ಬಹುಮಾನ ಅಸದುಲ್ಲಾ, ದ್ವಿತೀಯ ಮಹಮದ್ ಉಮೇರ್, ತೃತೀಯ ಪವಿತ್ರ ಮಕ್ಕಳಿಗೆ ಬಹುಮಾನವನ್ನು ಗ್ರಾಮ ಪಂಚಾಯತ್ ಸದಸ್ಯರಿಂದ ಶಾಲಾ ಮುಖ್ಯಗುರು ಗಳಿಂದ ವಿತರಿಸಲಾಯಿತು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…