ಸುರಪುರ: ಕೊಡೇಕಲ್ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯಗಳೆಂಬುದು ಮರೀಚಿಕೆಯಾಗಿದೆ,ಅನೇಕ ಬಾರಿ ಮನವಿ ಸಲ್ಲಿಸಿ ಬೇಸತ್ತಿದ್ದು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಕೊಡೇಕಲ್ ವಲಯ ಅಧ್ಯಕ್ಷ ರಮೇಶ ಬಿರಾದಾರ್ ಆಕ್ರೋಶ ವ್ಯಕ್ತಪಡಿಸಿದರು.
ಕೊಡೇಕಲ್ ಬಸ್ ನಿಲ್ದಾಣದ ಆವರಣದಲ್ಲಿ ವೇದಿಕೆ ವತಿಯಿಂದ ಹಮ್ಮಿಕೊಂಡ ಧರಣಿಯ ನೇತೃತ್ವವಹಿಸಿ ಮಾತನಾಡಿ,ನಮ್ಮ ಗ್ರಾಮದ ಬಸ್ ನಿಲ್ದಾಣ ಎಂದರೆ ಅಧಿಕಾರಿಗಳಿಗೆ ಅಸಡ್ಡೆ ಎನ್ನುವಂತಾಗಿದೆ,ಬಸ್ ನಿಲ್ದಾಣದಲ್ಲಿ ದನ ಹಂದಿಗಳು ಮಲಗುತ್ತವೆ,ಶೌಚಾಲಯ ವ್ಯವಸ್ಥೆಯಿಲ್ಲ ಅಲ್ಲದೆ ಒಂದೂ ಬಸ್ ನಿಲ್ದಾಣದ ಒಳಗೆ ಬರುವುದಿಲ್ಲ, ಬರೀ ರೋಡಲ್ಲಿ ನಿಂತು ಜನರನ್ನು ತುಂಬಿಕೊಂಡು ಹೋಗುತ್ತವೆ,ಬಸ್ ನಿಲ್ದಾಣ ಇದೇ ಎಂಬುದೆ ಸಾರಿಗೆ ಇಲಾಖೆಯವರಿಗೆ ಗೊತ್ತಿಲ್ಲದಷ್ಟು ನಿರ್ಲಕ್ಷ್ಯ ತೋರುತ್ತಾರೆ.ಆದ್ದರಿಂದ ಕೂಡಲೇ ಬಸ್ ನಿಲ್ದಾಣಕ್ಕೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕು ಅಲ್ಲಿಯವರೆಗೆ ಧರಣಿಯನ್ನು ನಿರಂತರವಾಗಿ ನಡೆಸುವುದಾಗಿ ತಿಳಿಸಿದರು.
ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ
ಸಾರಿಗೆ ಇಲಾಖೆಯ ಅಧಿಕಾರಿಗಳು ಧರಣಿ ಸ್ಥಳಕ್ಕೆ ತೆರಳಿ ಮನವಿ ಆಲಿಸಿದರಾದರೂ ಧರಣಿ ನಿರತರು ಯಾದಗಿರಿ ಎನ್‌ಇಕೆಆರ್‌ಟಿಸಿ ಡಿಸಿಯವರು ಬರುವವರೆಗೆ ಧರಣಿ ನಿಲ್ಲಿಸುವುದಿಲ್ಲ,ಡಿಸಿಯವರು ಬಂದು ಲಿಖಿತ ಭರವಸೆ ನೀಡಿದಾಗ ಮಾತ್ರ ಧರಣಿ ಕೈಬಿಡುವುದಾಗಿ ಎಚ್ಚರಿಸಿದರು.ಧರಣಿಯಲ್ಲಿ ಮುಖಂಡರಾದ ಶಿವರಾಜ ಹೊಕ್ರಾಣಿ ಅಮರೇಶ ನೂಲಿ ದೇವರಾಜ್ ಪಾಟೀಲ್ ಕಾಂತು ಗುತ್ತೇದಾರ ತಿರುಪತಿ ಪವಾರ್ ಅಮರೇಶ ಅಗ್ನಿ ಸುರೇಶ ಏವೂರ ಅಯ್ಯಣ್ಣ ಪಡಶೆಟ್ಟಿ ಸಂಗಮೇಶ ಕಕ್ಕೇರಾ ಮಲ್ಲಣ್ಣ ಆರಲಗಡ್ಡಿ ರಮೇಶ ನಾಲತವಾಡ ಶರಣು ವಡಗೇರಿ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಐಟಿ, ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆ ಅವರ 46ನೇ ವರ್ಷದ…
ಕಲಬುರಗಿ: ವಕ್ಫ್ ಬೋರ್ಡ್ ವಿರುದ್ಧ ಹೋರಾಟ ಮಾಡುತ್ತಿರುವ ಯತ್ನಾಳ ಟೀಮ್ ಗೆ ಬೆಂಬಲವಿಲ್ಲ ಭಾರತೀಯ ಜನತಾ ಪಕ್ಷದ ಯುವ ಮುಖಂಡ…
ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…