ಸುರಪುರ: ನಗರದ ಜನನಿ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಬಿ.ಎ ಹಾಗೂ ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ ಸ್ವಾಗತ ಸಮಾರಂಭ ಹಾಗೂ ಪ್ರವೇಶಕ್ಕೊಂದು ಸಸಿ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರು ಶ್ರೀಕಾಂತ ಜಿ.ಕೆ ಮಾತನಾಡಿ, ಶಿಕ್ಷಣ ಎನ್ನುವುದೇ ಮಾನವನಿಗೆ ಆಮ್ಲಜನಕವಿದ್ದಂತೆ ಅದರಲ್ಲಿ ಪದವಿ ಶಿಕ್ಷಣ ಎನ್ನುವುದು ಶಿಕ್ಷಣದ ಬಹು ದೊಡ್ಡ ಘಟ್ಟ ಈ ಮಹತ್ವದ ಘಟ್ಟದಲ್ಲಿ ಆಸಕ್ತಿಯಿಂದ ಯಾವುದೇ ಬೇರೆ ಬೇರೆ ರೀತಿಯ ಋಣಾತ್ಮಕ ಶಕ್ತಿಯಕಡೆಗೆ ನಿಮ್ಮ ಗಮನವನ್ನು ಹರಿಸದೆ ಯಶಸ್ವಿ ಪದವಿಧರರಾಗಿ ಸಮಾಜದಲ್ಲಿನ ಇತರ ಮಹಿಳೆಯರಿಗೆ ಮಾದರಿಯಾಗಬೇಕು. ಪ್ರತಿಯೊಬ್ಬರು ವೈಚಾರಿಕವಾಗಿ ವೈಜ್ಞಾನಿಕ ಮನೋಭಾವನ್ನು ಬೆಳೆಸಿಕೊಂಡು ಸಮಾಜವನ್ನು ತಿದ್ದುವ ತೀಡುವ ವ್ಯಕ್ತಿಗಳಾಗಬೇಕು ಮಹಿಳಾ ಶಕ್ತಿಗಳಾಗಬೇಕು ಎಂದು ಕರೆನೀಡಿದರು.
ಮೂಲಭೂತ ಸೌಲಭ್ಯಕ್ಕಾಗಿ ಕೊಡೇಕಲ್ ಬಸ್ ನಿಲ್ದಾಣದಲ್ಲಿ ಕರವೇ ಧರಣಿ
ಮುಖ್ಯ ಅತಿಥಿಗಳಾಗಿದ್ದ ಮೈಲಾರಲಿಂಗೇಶ್ವರ ಗಣಿತ ಶಾಸ್ತ್ರ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕರಾದ ರಜಾಕ ಬಾಗವಾನ ಮಾತನಾಡಿ. ಯಾವಾಗಲೂ ವಿದ್ಯಾರ್ಥಿನಿಯರು ನಾವು ದುರ್ಬಲರು ಅಸಮರ್ಥರು ಎಂದು ಋಣಾತ್ಮಕ ಆಲೋಚನೆಗಳನ್ನೆ ಮನದಲ್ಲಿ ತುಂಬಿಕೊಂಡಿರುತ್ತಾರೆ. ಇದನ್ನು ಬಿಟ್ಟು ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲೆ ಸಾಧನೆ ಮಾಡಿರುವ ಸಾವಿರಾರು ಮಹಿಳೆಯರು ಇದ್ದಾರೆ ಅವರನ್ನು ಮಾದರಿಯಾಗಿಟ್ಟುಕೊಂಡು ನಾವುಕೂಡ ಅವರ ಮಾರ್ಗದಲ್ಲಿ ಸಾಗಿ ಯಶಸ್ಸಿನ ಕಡೆಗೆ ಸಾಗಬೇಕು ಎಂದು ವಿವರಿಸಿದರು.
ಕಾರ್ಯಕ್ರಮದ ವೇದಿಕೆಯ ಮೇಲೆ ಅಮರೇಶ್ವರ ಗ್ರಾಮಿಣ ಅಭಿವೃಧ್ಧಿ ಮತ್ತು ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ರಾಜಶೇಖರ ನೀಲಗಾರ ರವರು ಅತಿಥಿಗಳ ಸ್ಥಾನವನ್ನು ವಹಿಸಿಕೊಂಡಿದ್ದರು. ಪ್ರಾಂಶುಪಾಲರಾದ ಬಸವರಾಜೇಶ್ವರಿ ಘಂಟಿ ಅಧ್ಯಕ್ಷತೆ ವಹಿಸಿದ್ದರು. ಬಿ.ಎ ಮತ್ತು ಬಿ.ಕಾಂ, ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ ವಿವಿಧ ಸಾಂಸ್ಕೃತಿಕ ಸ್ಫರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು ಅವುಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಯಿತು ಅಲ್ಲದೆ ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ
ಕಾರ್ಯಕ್ರಮದಲ್ಲಿ ಕಾರ್ಯದರ್ಶಿಗಳಾದ ಆದಿಶೇಷ ನೀಲಗಾರ, ಉಪನ್ಯಾಸಕರಾದ ಸುವರ್ಣ ಅಂಟೋಳಿ, ಶ್ರೀದೇವಿ ನಾಯಕ, ಸ್ನೇಹಾ ಶಹಬಾದಿ, ವೆಂಕಟೇಶ ಜಾಲಗಾರ, ತಿರುಪತಿ ಕೆಂಭಾವಿ, ಬೀರೇಶ ದೇವತ್ಕಲ್, ಅಂಬ್ರೇಶ ಚಿಲ್ಲಾಳ, ಮಹೇಶ ಗಂಜಿ, ಚಂದ್ರಶೇಖರ ನಾಯಕ ಉಪಸ್ಥಿತರಿದ್ದರು. ಉಪನ್ಯಾಸಕ ಡಾ.ಮಲ್ಲಿಕಾರ್ಜುನ ಕಮತಗಿ ಪ್ರಾಸ್ಥಾವಿಕವಾಗಿ ಮಾತನಾಡಿದರು, ಮಧುಮತಿ ಕೋನ್ಹಾಳ ಹಾಗೂ ಲಕ್ಷ್ಮಿ ಬಿ.ಕೆ ಕಾರ್ಯಕ್ರಮವನ್ನು ನಿರೂಪಿಸಿದರು, ರಷ್ಮಾ ಸ್ವಾಗತಿಸಿದರು, ಸಾಮಕಾಬಾಯಿ, ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…