ಕಲಬುರಗಿ: ಕೇಂದ್ರ ಸರ್ಕಾರ ಕೊಡಮಾಡಿದ 7 ಕೋಟಿ ರೂ.ಗಳನ್ನು ಬೀಜೋತ್ಪಾದಕರಿಗೆ ಸಂದಾಯ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಒಂದು ಸಾವಿರ ರೈತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜೂನ್ 21 ರಂದು ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದಾರೆ ಎಂದು ಹೈದ್ರಾಬಾದ್ ಕರ್ನಾಟಕ ಪ್ರಮಾಣಿತ ಬೀಜೋತ್ಪಾದಕರ ಸಂಘದ ಪ್ರಮುಖ ಬಸವರಾಜ್ ಇಂಗಿನ್ ಅವರು ಇಲ್ಲಿ ಹೇಳಿದರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೧೦೭-೨೦೧೮ನೇ ಸಾಲಿನಲ್ಲಿ ಕೇಂದ್ರ ಸರ್ಕಾರವ ಬೀಜಗಳಿಗೆ ಕೊಡಲಾದ ಪ್ರೋತ್ಸಾಹ ಧನ ಈಗಾಗಲೇ ರಾಜ್ಯ ಸರ್ಕಾರಕ್ಕೆ ೭ ಕೋಟಿ ರೂ.ಗಳು ಬಿಡುಗಡೆಯಾದರೂ ಸಹ ಬೀಜೋತ್ಪಾದಕರಿಗೆ ಸಂದಾಯವಾಗಿಲ್ಲ ಎಂದು ಆರೋಪಿಸಿದರು. ರಾಜ್ಯ ಬೀಜ ನಿಗಮದ ಕಾರ್ಯಕ್ರಮಗಳು ನೆರೆಯ ರಾಜ್ಯವಾದ ಮಹಾರಾಷ್ಟ್ರ ಮಾದರಿಯಲ್ಲಿ ಮಾಡಬೇಕು. ಖಾಸಗಿ ಕಂಪೆನಿಗಳಿಂದ ತಯಾರಿಸಲ್ಪಟ್ಟ ಕಳಪೆ ಬೀಜಗಳಿಂದ ರೈತರಿಗೆ ನಷ್ಟವಾಗುವುದನ್ನು ತಪ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
೨೦೧೮-೨೦೧೯ನೇ ಸಾಲಿನಲ್ಲಿ ಬೆಳೆದ ಬೀಜಗಳಿಗೆ ಸರ್ಕಾರವು ನಿಗದಿಪಡಿಸಿದ ಎಂಎಸ್‌ಪಿ ದರಕ್ಕೆ ಶೇಕಡಾ ೨೫ರಷ್ಟು ಹೆಚ್ಚಿನ ದರ ನಿಗದಿಗೊಳಿಸುವಂತೆ ಆಗ್ರಹಿಸಿದ ಅವರು, ನಿಗಮಕ್ಕೆ ಸಲ್ಲಿಸಿದ ಬೀಜಗಳು ಸಂಸ್ಕರಣೆ ಮಾಡುವಾಗ ಶೇ.೨೫ರಷ್ಟು ನಷ್ಟವಾಗುತ್ತದೆ. ಅದನ್ನು ಸರಿದೂಗಿಸಲು ಶೇ. ೨೫ರಷ್ಟು ಹೆಚ್ಚಿಗೆ ಕೊಡಬೇಕು ಎಂದರು.
೨೦೧೮-೨೦೧೯ನೇ ಸಾಲಿನಲ್ಲಿ ಬೆಳೆದ ತೊಗರಿ, ಕಡಲೆ ಮತ್ತು ಜೋಳ ಡಿಸೆಂಬರ್ ೨೦೧೯ಕ್ಕೆ ನಿಗಮಕ್ಕೆ ಸಲ್ಲಿಸಲಾಗಿದೆ. ಇದುವರೆಗೆ ಅಂತಿಮ ಬಿಲ್ಲು ಪಾವತಿಯಾಗಿಲ್ಲ. ಒಂದು ವಾರದೊಳಗೆ ಪಾವತಿಸಬೇಕು ಎಂದು ಅವರು ಗಡುವು ನೀಡಿದರು.
ಜೂನ್ ೨೨ರಂದು ಗ್ರಾಮ ವಾಸ್ತವ್ಯಕ್ಕೆ ಆಗಮಿಸುವ ಮುಖ್ಯಮಂತ್ರಿಗಳು ಸ್ಥಳಕ್ಕೆ ಬಂದು ಬೇಡಿಕೆಗಳನ್ನು ಇಡೇರಿಸಬೇಕು. ಇಲ್ಲವಾದಲ್ಲಿ ಮುಖ್ಯಮಂತ್ರಿಗಳು ಕಂಡಲ್ಲಿ ಮುತ್ತಿಗೆ ಹಾಕಲಾಗುವುದು ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಬೀಜೋತ್ಪಾದಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಹರಸೂರ್, ಎಂ.ಎಸ್. ಪಾಟೀಲ್ ನರಿಬೋಳ್, ರಾಜೇಂದ್ರ ಕರೇಕಲ್, ಅಶೋಕ್ ಎಸ್. ನಾಸಿ, ಅಂಬರೇಷ್ ಸಜ್ಜನ್, ಬಾಬುರಾವ್ ಹಾಗರಗುಂಡಗಿ ಅವರು ಉಪಸ್ಥಿತರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…