ಕಲಬುರಗಿ: ಭೂಸ್ವಾಧೀನ ಕಾಯ್ದೆ ೨೦೧೯ನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಜೂನ್ ೨೨ರಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡಲಿರುವ ಹೇರೂರ್(ಬಿ) ಗ್ರಾಮದ ಬಳಿ ರೈತರು ಮಾರುತಿ ಮಾನ್ಪಡೆ ಅವರ ನೇತೃತ್ವದಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಹಾಗೂ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಶರಣಬಸಪ್ಪ ಮಮಶೆಟ್ಟಿ ಅವರು ಇಲ್ಲಿ ಹೇಳಿದರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಯ್ದೆ ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದು ಆಘಾತ ತಂದಿದೆ. ಇದು ರೈತರ ಹಕ್ಕುಗಳನ್ನು ಕಸಿದುಕೊಂಡಂತೆ ಆಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಹಿಂದಿನ ಯುಪಿಎ ಸರ್ಕಾರದಲ್ಲಿ ಈ ಕುರಿತು ವ್ಯಾಪಕ ಚರ್ಚೆ ನಡೆದು ೧೮೯೪ರಲ್ಲಿ ಬ್ರಿಟಿಷರು ಅಂಗೀಕರಿಸಿದ ಕಾಯ್ದೆ ರದ್ದುಪಡಿಸಿ ಭೂಸ್ವಾಧೀನ ಪುನರ್ವಸತಿ ಮತ್ತು ಪುನರ್ ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ, ಪಾರದರ್ಶಕ ಹಕ್ಕು ಕಾಯ್ದೆ ಅಂಗೀಕರಿಸಲಾಗಿದೆ.
ರೈತರು ಗ್ರಾಮಸಭೆಯಲ್ಲಿ ಒಪ್ಪಿದಾಗ ಮಾತ್ರ ಭೂಮಿ ವಶಕ್ಕೆ ತೆಗೆದುಕೊಳ್ಳಲು ಸಾಧ್ಯವಿದೆ. ಹಿಂದೆ ೨೦೧೪, ೨೦೧೫, ೨೦೧೬ರಲ್ಲಿ ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಮೂಲಕ ಮಸೂದೆ ತಿದ್ದುಪಡಿ ಮಾಡಲು ಯತ್ನಿಸಿದರೂ ಸಹ ರೈತರು ಅವಕಾಶ ಕೊಡಲಿಲ್ಲ. ಆದಾಗ್ಯೂ, ಈಗ ಕೇಂದ್ರ ಸರ್ಕಾರಕ್ಕೆ ಪರ‍್ಯಾಯ ರೂಪಿಸಿಕೊಳ್ಳಲು ಭೂಸ್ವಾಧೀನ ಕಾಯ್ದೆ ಜಾರಿ ಮಾಡಿದ್ದು ಆಘಾತಕಾರಿ ಎಂದು ಅವರು ತೀವ್ರ ಆತಂಕ ವ್ಯಕ್ತಪಡಿಸಿದರು.
ಕೈಗಾರಿಕೆ ಹಾಗೂ ರೈಲು ರಸ್ತೆ ಅಭಿವೃದ್ಧಿಗೆ ಯಾರ ವಿರೋಧವಿಲ್ಲ. ನೆರೆ ರಾಜ್ಯದಲ್ಲಿ ಉಚಿತ ಭೂಮಿ ಕೊಡುತ್ತಿದ್ದಾರೆ ಎಂದು ಸಂಪುಟದ ಸಚಿವರು ಹೇಳುತ್ತಿದ್ದಾರೆ. ಕೈಗಾರಿಕೆಗಳನ್ನು ಸ್ಥಾಪಿಸಲು ಉಚಿತ ಭೂಮಿ ಕೊಡುವುದಕ್ಕೂ ರೈತರ ವಿರೋಧವಿಲ್ಲ. ಸರ್ಕಾರ ೨೦೧೩ರ ಕಾಯ್ದೆಯನ್ನು ಉಳಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಕಳೆದ ಐದಾರು ವರ್ಷಗಳಿಂದ ಕಂದಾಯ ಕಾಯ್ದೆ ೧೦೯ ಎ ಅಡಿಯಲ್ಲಿ ರೈತರಿಂದ ನೇರವಾಗಿ ಉದ್ದಿಮೆದಾರರು ಭೂಮಿ ಖರೀದಿ ಮಾಡಲು ಅವಕಾಶ ಮಾಡಿರುವುದರಿಂದ ರೈತರಿಗೆ ನ್ಯಾಯಯುತ ಪರಿಹಾರ, ಉದ್ಯೋಗ ಸಿಗದಂತೆ ಆಗಿದೆ. ರಾಜ್ಯಾದ್ಯಂತ ಲಕ್ಷಾಂತರ ಹೆಕ್ಟೇರ್ ಫಲವತ್ತಾದ ಭೂಮಿ ರೈತರಿಂದ ಅಪಹರಿಸಲ್ಪಟ್ಟಿದೆ. ಬ್ರಾಹ್ಮಿಣಿ ಸ್ಟಿಲ್, ಮಿತ್ತಲ್ ಸ್ಟಿಲ್, ಶ್ರೀ ಸಿಮೆಂಟ್, ನೈಸ್ ರಸ್ತೆ, ರಾಜಶ್ರೀ ಸಿಮೆಂಟ್ ಮುಂತಾದವುಗಳು ಕುಖ್ಯಾತಿ ಪಡೆದಿವೆ. ಆದ್ದರಿಂದ ೧೯೬೪ರ ಕೇಂದ್ರದ ಕಾಯ್ದೆಯಡಿ ಯಾವುದೇ ಕಾರಣಕ್ಕೂ ೧೦೯ರ ಎ ಅಡಿಯಲ್ಲಿ ಭೂಮಿ ಖರೀದಿಗೆ ಅವಕಾಶ ಮಾಡಿಕೊಡಬಾರದು ಎಂದು ಅವರು ಆಗ್ರಹಿಸಿದರು.
ಜಿಲ್ಲೆಯಲ್ಲಿ ಭೀಕರ ಬರ ಎದುರಾಗಿದ್ದು, ಮಳೆಯ ಕೊರತೆ ಇದೆ. ಆದ್ದರಿಂದ ಕೂಡಲೇ ರಾಜ್ಯ ಸರ್ಕಾರವು ಮೋಡ ಬಿತ್ತನೆ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಅಶೋಕ್ ಮ್ಯಾಗೇರಿ, ಪಾಂಡುರಂಗ್ ಮಾವಿನಕರ್ ಅವರು ಉಪಸ್ಥಿತರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…