ಬಿಸಿ ಬಿಸಿ ಸುದ್ದಿ

ಫೆ. 28ಕ್ಕೆ ಶಾಸಕ ಡಾ. ಅಜಯ್ ಸಿಂಗ್ ಎರಡನೇಯ ಗ್ರಾಮ ವಾಸ್ತವ್ಯ

ಕಲಬುರಗಿ/ ಜೇವರ್ಗಿ: ಜೇವರ್ಗಿ ಶಾಸಕರು ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರೂ ಆಗಿರುವ ಡಾ. ಅಜಯ್ ಸಿಂಗ್ ತಮ್ಮ 2 ನೇ ಗ್ರಾಮ ವಾಸ್ತವ್ಯಕ್ಕೆ ಜೇವರ್ಗಿ ಮತಕ್ಷೇತ್ರದ ಯಡ್ರಾಮಿ ತಾಲೂಕಿನ ವಡಗೇರಾ ಗ್ರಾಮವನ್ನ ಆಯ್ಕೆ ಮಾಡಿಕೊಂಡಿದ್ದಾರೆ.

ವಡಗೇರಾ ಗ್ರಾಮದಲ್ಲಿ ಇದೇ ಫೆ. 28 ರ ಭಾನುವಾರ ವಾಸ್ತವ್ಯ ಹೂಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಗ್ರಾಪಂ ಮುಖ್ಯ ಕೇಂದ್ರವಾಗಿರುವ ವಡಗೇರಾದಲ್ಲಿರುವ ಸಣ್ಣ ರೈತ ಶಿವಾನಂದ ಕುಂಬಾರ ಇವರ ಮನೆಯಲ್ಲೇ ವಾಸ್ತವ್ಯ ಹೂಡಲಿರುವ ಡಾ. ಅಜಯ್ ಸಿಂಗ್ ಅಂದು ಸಂಜೆ 5 ಗಂಟೆಗೇ ಗ್ರಾಮಕ್ಕೆ ಆಗಮಿಸಿ ಸಾರ್ವಜನಿಕ ಸಭೆ, ಸಂವಾದ, ಜನರ ಸಮಸ್ಯೆಗಳಿಗೆ ಕಿವಿಯಾಗಲಿದ್ದಾರೆ. ಸಾರ್ವಜನಿಕ ಸಭೆಯಲ್ಲಿಯೇ ಜನರೊಂದಿಗೆ ನೇರವಾಗಿಯೇ ಮಾತುಕತೆ ನಡೆಸಲಿರುವ ಡಾ. ಅಜಯ್ ಸಿಂಗ್ ಅವರು ಅಲ್ಲೇ ಜನರ ಅಹವಾಲು ಆಲಿಸಲಿದ್ದಾರೆ.

ಕೆ.ಕೆ.ಆರ್.ಡಿ.ಬಿ: ನಾಲ್ಕನೇ ಕಂತಿನ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಕೆ

ತಾಲೂಕು ಆಡಳಿತದ ತಹಶೀಲ್ದಾರ್, ತಾಪಂ ಮುಖ್ಯಾಧಿಕಾರಿಗಳು, ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳೆಲ್ಲರೂ ಈ ಗ್ರಾಮ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾಜ್ಯ ಸರಕಾರ ಅದಿಕಾರಿಗಳ ನಡೆ ಹಳ್ಳಿಗಳ ಕಡೆ ಎಂದು ತಿಂಗಳ 3 ನೇ ಶನಿವಾರ ಹಳ್ಳಿಗಳಿಗೆ ಹೋಗಿ ಅಹವಾಲು ಆಲಿಸಿರೆಂದು ಆರಂಭಿಸಿರುವ ಕಾರ್ಯಕ್ರಮ, ಜಿಲ್ಲಾಧಿಕಾರಿಗಳು ನಡೆಸುತ್ತಿರುವ ಗ್ರಾಮ ವಾಸ್ತವ್ಯದ ಕಾರ್ಯಕ್ರಮ ತಾವು ಜ. 28 ರಿಂದ ಆರಂಭಿಸಿರುವ ವಾಸ್ತವ್ಯದ ನೇರ ಪರಿಣಾಮ, ಸಿಹಿಫಲವಾಗಿದೆ ಎಂದು ಡಾ. ಅಜಯ್ ಸಿಂಗ್ ಸಂತಸಪಟ್ಟಿದ್ದಾರೆ.

ಕಳೆದ ತಿಂಗಳು ಜ. 28ರಂದು ತಮ್ಮ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಜೇವರ್ಗಿ ತಾಲೂಕಿನ ಜೇರಟಗಿಯಿಂದ ಡಾ. ಅಜಯ್ ಸಿಂಗ್ ಅವರು ಮಹತ್ವಾಕಾಂಕ್ಷಿ ಗ್ರಾಮ ವಾಸ್ತವ್ಯದ ತಮ್ಮ ಜನಪರ ಯೋಜನೆ ಪ್ರಕಟಿಸಿ ಜಾರಿಗೆ ತಂದವರು. ಜೇರಟಗಿಯಲ್ಲಿ ಮೋದಿನ್ ಸಾಬ್ ಹಣಗಿಕಟ್ಟಿ ಮನೆಯಲ್ಲಿ ವಾಸ್ತವ್ಯ ಮಾಡಿದ್ದ ಡಾ. ಅಜಯ್ ಸಿಂಗ್ ಶಾಲೆಯಲ್ಲಿ ಸಭೆ ನಡಜೆಸಿ ಜನರ ಸಮಸ್ಯೆ ಆಲಿಸಿದ್ದರು.

ಗುಲಬರ್ಗಾ ವಿಶ್ವವಿದ್ಯಾಲಯ ಅಕ್ಯಾಡೆಮಿಕ್ ಕೌನ್ಸಿಲ್‌ಗೆ ಹಿರೇಮಠ್ ನಾಮನಿರ್ದೇಶನ

ಸಭೆಯಲ್ಲಿ 23 ಸಂಗತಿಗಳ ಬಗ್ಗೆ ಸಾರ್ವಜನಿಕರು ಅಹವಾಲು ಸಲ್ಲಿಸಿದ್ದರು. ಈ ಪೈಕಿ 7 ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ದೊರಕಿದ್ದು ಉಳಿದಂತೆ ಸಿಸಿ ರಸ್ತೆ, ಬಸ್ ನಿಲ್ದಾಣ, ಚರಂಡಿ ನಿರ್ಮಾಣದಂತಹ ಕಾಮಗಾರಿಗಳಿಗೆ ಬರುವ ದಿನಗಳಲ್ಲಿ ಮಂಜೂರಾತಿ ನೀಡುವ ಕೆಲಸ ನಡೆಯಲಿದೆ. ಜೇರಟಗಿ ಊರಿನ ಜನರ ಬಸ್ ನಿಲ್ದಾಣ ಬೇಡಿಕೆಗೆ ತಾವೇ ಖುದ್ದು ಈಶಾನ್ಯ ಸಾರಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣ ಆ ಯೋಜನೆ ಜೇರಟಗಿಗೆ ಬರುವಂತೆ ಮಾಡುವುದಾಗಿಯೂ ಡಾ. ಅಜಯ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ನನ್ನ ಗ್ರಾಮ ವಾಸ್ತವ್ಯ ಯಶಸ್ಸು ಕಂಡದ್ದನ್ನ ಮಾಧ್ಯಮದವರು ರಾಜ್ಯಾದ್ಯಂತ ಬಿಂಬಿಸಿದ್ದರಿಂದಾಗಿ ಇಂತಹ ಜನಪರ ಕಾರ್ಯಕ್ರಮ ಸರಕಾರದಿಂದಲೇ ನೀಡಬಾರದ್ಯಾಕೆ ಎಂದು ಇದೀಗ ಎಲ್ಲರೂ ಹಳ್ಳಿಕಡೆಗೆ ಹೆಜ್ಜೆ ಹಾಕುತ್ತಿರೋದನ್ನ ನಾನು ಸ್ವಾಗತಿಸುವೆ. ಇದರಿಂದಲಾದರೂ ಹಳ್ಳಿ ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸಿಗುವಂತಾದರೆ ಅದೇ ನನಗೆ ಸಂತೃಪ್ತಿ, ಹಳ್ಳಿ ಕಡೆಗೆ ಅಧಿಕಾರಿಗಳು, ಜನಪ್ರತಿನಿಧಿಗಳ ನಡೆಯನ್ನ ಸ್ವಾಗತಿಸುವೆ ಎಂದು ಶಾಸಕ ಡಾ. ಅಜಯ್ ಸಿಂಗ್ ಹೇಳಿದ್ದಾರೆ.

sajidpress

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

21 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago