ಕೆ.ಕೆ.ಆರ್.ಡಿ.ಬಿ: ನಾಲ್ಕನೇ ಕಂತಿನ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಕೆ

3
40

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 2020-21ನೇ ಸಾಲಿಗೆ ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಮತ್ತು ಪ್ರಾರಂಭಿಕ ಶುಲ್ಕ ಅನುದಾನದ ಪೈಕಿ ಒಟ್ಟಾರೆ ಪ್ರಸಕ್ತ ಸಾಲಿನಲ್ಲಿ 822.70 ಕೋಟಿ ರೂ. ಅನುದಾನ ಖರ್ಚು ಮಾಡಲಾಗಿದೆ. ಪ್ರಸಕ್ತ ಸಾಲಿನ ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರವು 2020-21ನೇ ಸಾಲಿಗೆ ನಿಗದಿಪಡಿಸಿದ 1136.81 ಕೋಟಿ ರೂ. ಅನುದಾನ ಪೈಕಿ ಮೂರು ಕಂತುಗಳಲ್ಲಿ ಒಟ್ಟು 787.94 ಕೋಟಿ ರೂ. ಬಿಡುಗಡೆ ಮಾಡಿದೆ. ಮಂಡಳಿಯ ಪ್ರಾರಂಭಿಕ ಶಿಲ್ಕು 308.70 ಕೋಟಿ ರೂ. ಇದ್ದು, ಪ್ರಸಕ್ತ ಸಾಲಿನಲ್ಲಿ 5422 ಭೌತಿಕ ಗುರಿಗೆ 3915 ರಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸುವುದರ ಮೂಲಕ ಶೇ. 72ರಷ್ಟು ಗುರಿ ಸಾಧಿಸಿದೆ. ಅದೇ ರೀತಿ ಈ ವರ್ಷ ಇದುವರೆಗೆ 822.70 ಕೋಟಿ ರೂ. ಅನುದಾನವನ್ನು ಖರ್ಚು ಮಾಡುವ ಮೂಲಕ ಶೇ. 75 ರಷ್ಟು ಆರ್ಥಿಕ ಸಾಧನೆ ಮಾಡಲಾಗಿದೆ.

Contact Your\'s Advertisement; 9902492681

ಹಜರತ್ ಸಯ್ಯದ್ ಬುರ‍್ಹಾನುದ್ದಿನ್ ಶಹಾ ಖಾದ್ರಿ ದರ್ಗಾ ಉರುಸ್: ಧರ್ಮ ಸಮ್ಮೇಳನ

ಮಂಡಳಿಯೂ ನಿಯಮಿತವಾಗಿ ಅನುμÁ್ಠನಾಧಿಕಾರಿಗಳೊಂದಿಗೆ ಕಾಮಗಾರಿವಾರು ಪರಾಮರ್ಶಿಸಿ, ಕಾಲಬದ್ಧ ಮಿತಿಯೊಳಗಡೆ ಪ್ರಗತಿಯನ್ನು ಸಾಧಿಸಲು ಆದ್ಯತೆ ನೀಡಿದ್ದರಿಂದ ಭೌತಿಕ ಹಾಗೂ ಆರ್ಥಿಕ ಗುರಿಯಲ್ಲಿ ಗಣನೀಯ ಸಾಧನೆ ಮಾಡಿದೆ. ಇದರ ಪ್ರತಿಫಲವಾಗಿ 4ನೇ ಕಂತಿನ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾಪಿಸಿರುವುದು ಮಂಡಳಿಯ ಸಾಧನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here