ಬಿಸಿ ಬಿಸಿ ಸುದ್ದಿ

ಕಳಬೇಡ ಎಂಬ ಬಸವ ಪದವೇ ಬದುಕಿಗೆ ಸವಾಲು

ವಾಡಿ: ಸಮಾನತೆಯ ಸಮಾಜ ಬಯಸಿ ಕ್ರಾಂತಿಗೆ ಮುಂದಾದ ಅಣ್ಣ ಬಸವಣ್ಣನವರು ಸಾವಿರಾರು ಚವನಗಳನ್ನು ಬರೆದರು. ಕಳಬೇಡ ಎಂಬ ಅವರ ವಚನದ ಒಂದು ಸಾಲು ಪ್ರತಿಯೊಬ್ಬರ ಬದುಕಿಗೂ ಸವಾಲೊಡ್ಡುತ್ತದೆ ಎಂದು ಯಡ್ರಾಮಿ ಮುರುಘೇಂದ್ರ ಶಿವಯೋಗಿ ವಿರಕ್ತಮಠದ ಪೂಜ್ಯ ಶ್ರೀಸಿದ್ಧಲಿಂಗ ಸ್ವಾಮೀಜಿ ನುಡಿದರು.

ಮಹಾಶಿವರಾತ್ರಿ ಪ್ರಯುಕ್ತ ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಏರ್ಪಡಿಸಲಾಗಿರುವ ೧೫ ದಿನಗಳ ಶ್ರೀಯಡಿಯೂರು ಸಿದ್ಧಲಿಂಗೇಶ್ವರರ ಮಹಾಪುರಾಣ ಪ್ರಾರಂಬೋತ್ಸವಕ್ಕೆ ಚಾಲನೆ ನೀಡಿ ಸ್ವಾಮೀಜಿ ಮಾತನಾಡಿದರು. ಜೀವನದಲ್ಲಿ ಕಳ್ಳತನವನ್ನೇ ಮಾಡದೆ ಬದುಕಲು ಕಷ್ಟಸಾಧ್ಯವಾಗಿರುವಾಗ ಹುಸಿ ನುಡಿಯದೆ, ಕೊಲ್ಲದೆ, ಅಸಹ್ಯಪಡದೆ, ನಿಂದಿಸದೆ ಜೀವನ ಸಾಗಿಸುವುದು ಎಂಥಹ ಕಠಿಣ ಪರೀಕ್ಷೆಯಲ್ಲವೇ? ಇದು ಶಿವಭಕ್ತನಿಗೆ ಮಾತ್ರ ಸಾಧ್ಯ. ಅಲ್ಲದೆ ಬಸವಣ್ಣನವರಿಗೆ ಸಾಮಾಜಿಕ ಕ್ರಾಂತಿ ಮಾಡುವ ಉದ್ದೇಶವಿರಲಿಲ್ಲ. ೧೨ನೇ ಶತಮಾನದಲ್ಲಿ ಧಾರ್ಮಿಕ ಅಂಧಶ್ರದ್ಧೆ ಮತ್ತು ಜಾತಿ ಅಸಮಾನತೆಯ ವಿರುದ್ಧ ಭುಗಿಲೆದ್ದ ಬಸವಾದಿ ಶರಣರ ವಚನ ಕ್ರಾಂತಿಯೇ ಸಮಾಜದಲ್ಲಿ ಪ್ರಮುಖವಾದ ಬದಲಾವಣೆ ತರಲು ಸಾಧ್ಯವಾಯಿತು ಎಂದು ಹೇಳಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಪ್ರತಿಭಟನೆ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ಭೂಮಿಯ ಮೇಲೆ ಯಾವಾಗ ಧರ್ಮ ನಶಿಸಿ ಅಧರ್ಮ ತಾಂಡವಾಡುತ್ತದೋ ಆವಾಗ ಶ್ರೀಕೃಷ್ಣ ಪರಮಾತ್ಮ ಅವತರಿಸಿ ಬರುತ್ತಾನೆ ಎಂದು ಭಗವತ್‌ಗೀತೆ ಹೇಳಿದೆ. ಧರ್ಮ ಕುಂಟಿತವಾದಾಗ ೧೦೧ ವಿರಕ್ತರು ಹುಟ್ಟಿ ಧರ್ಮ ಎತ್ತಿ ಹಿಡಿಯುತ್ತಾರೆ. ೧೫/೧೬ನೇ ಶತಮಾನದಲ್ಲಿ ಯಡಿಯೂರು ಸಿದ್ಧಲಿಂಗೇಶ್ವರರು ಧರ್ಮಕಾರ್ಯ ಕೈಗೊಂಡು ನಿರ್ವಿಕಲ್ಪ ಸಮಾದಿಯಾದರು. ಕಾವಿಗೆ ಕಿಮ್ಮತ್ತು ತಂದು ಕೊಟ್ಟವರು ಹಾನಗಲ್ ಶ್ರೀಗುರುಕುಮಾರೇಶ್ವರ ಶ್ರೀಗಳು. ದೇಹ ಹೊಲಸಾದಾಗ ಸಾಬೂನು ಅಥವ ವಿಧವಿಧ ಶಾಂಪೋ ಹಚ್ಚಿ ತೊಳೆಯಬಹುದು. ಆದರೆ ಮನಸ್ಸು ಹೊಲಸಾದಾಗ ಶರಣರ ಚಿಂತನೆಗಳ ಅರಿಯುವಿಕೆಯಿಂದ ಮಾತ್ರ ಶುಚಿತ್ವಗೊಳಿಸಲು ಸಾಧ್ಯ ಎಂದರು.

ರಾವೂರ ಶ್ರೀಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿ ಶ್ರೀಸಿದ್ಧಲಿಂಗ ದೇವರು ಜ್ಯೋತಿ ಬೆಳಗಿಸುವ ಮೂಲಕ ಪುರಾಣ ಪ್ರವಚನಕ್ಕೆ ಚಾಲನೆ ನೀಡಿದರು. ಮಾಜಿ ಶಾಸಕ ವಾಲ್ಮೀಕಿ ನಾಯಕ, ಅಖಿಲ ಭಾರತ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾದ ತಾಲೂಕು ಅಧ್ಯಕ್ಷ ನೀಲಯ್ಯಸ್ವಾಮಿ ಮಠಪತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ಮಹೆಮೂದ್ ಸಾಹೇಬ, ವೀರಶೈವ ಯುವ ವೇದಿಕೆ ತಾಲೂಕು ಅಧ್ಯಕ್ಷ ಮಹೇಶ ಬಾಳಿ, ಮಲ್ಲಿಕಾರ್ಜುನ ದೇವಸ್ಥಾನ ಸಮಿತಿ ಅಧ್ಯಕ್ಷ ಶಾಂತಪ್ಪ ಶೆಳ್ಳಗಿ, ವೀರಶೈವ ಸಮಾಜದ ಕಾರ್ಯದರ್ಶಿ ಶರಣಗೌಡ ಚಾಮನೂರ, ಪಿಎಸ್‌ಐ ವಿಜಯಕುಮಾರ ಭಾವಗಿ, ಪುರಸಭೆ ಸದಸ್ಯರಾದ ಭೀಮಶಾ ಜಿರೊಳ್ಳಿ, ರಾಜೇಶ ಅಗರವಾಲ, ಮುಖಂಡರಾದ ಅಣ್ಣಾರಾವ ಪಸಾರೆ, ಪರುತಪ್ಪ ಕರದಳ್ಳಿ, ಸಿದ್ಧಲಿಂಗಯ್ಯಸ್ವಾಮಿ, ವೀರಣ್ಣ ಯಾರಿ, ಬಸವರಾಜ ಕೀರಣಗಿ, ನಿಂಗಣ್ಣ ದೊಡ್ಡಮನಿ, ಚಂದ್ರಶೇಖರ ಗೊಳೇದ, ಬಸವರಾಜ ಪಾನಗಾಂವ, ಶಿವಶಂಕರ ಕಾಶೆಟ್ಟಿ, ಬಸವರಾಜ ಶೆಟಗಾರ, ಚೆನ್ನಯ್ಯಸ್ವಾಮಿ, ಚಂದ್ರಶೇಖರ ಹಾವೇರಿ, ಸಂಗಣ್ಣ ಇಂಡಿ, ಮಹಾಲಿಂಗ ಶೆಳ್ಳಗಿ, ಸತೀಶ ಸಾವಳಗಿ, ಅರುಣಕುಮಾರ ಪಾಟೀಲ, ಕಾಶೀನಾಥ ಶೆಟಗಾರ, ಮಹಾಂತೇಶ ಬಿರಾದಾರ ಪಾಲ್ಗೊಂಡಿದ್ದರು. ಸಿದ್ಧಯ್ಯಶಾಸ್ತ್ರೀ ನಂದೂರಮಠ ನಿರೂಪಿಸಿದರು.

ಫೆ. 28ಕ್ಕೆ ಶಾಸಕ ಡಾ. ಅಜಯ್ ಸಿಂಗ್ ಎರಡನೇಯ ಗ್ರಾಮ ವಾಸ್ತವ್ಯ

ಯಡ್ರಾಮಿ ಮುರಘೇಂದ್ರ ವಿರಕ್ತ ಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ ಮಾ.೧೧ ವರೆಗೆ ಪ್ರತಿದಿನ ಸಂಜೆ ೭ ರಿಂದ ೯ ಗಂಟೆ ವರೆಗೆ ಯಡಿಯೂರು ಸಿದ್ಧಲಿಂಗೇಶ್ವರರ ಪುರಾಣ ನಡೆಸಿಕೊಡಲಿದ್ದು, ಸಿದ್ಧಯ್ಯಸ್ವಾಮಿ ಪಡದಳ್ಳಿ ಗಾಯನ ಮತ್ತು ಸಂತೋಷ ಕೋಡ್ಲಿ ತಬಲಾ ಸಾಥ ನೀಡಲಿದ್ದಾರೆ.

sajidpress

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

18 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago