ಬಿಸಿ ಬಿಸಿ ಸುದ್ದಿ

ಎಸಿಸಿ ಸಿಮೆಂಟ್ ಸಾಗಾಣಿಕೆ ಸ್ಥಗಿತಗೊಳಿಸಿ ಪ್ರತಿಭಟನೆ

ವಾಡಿ: ಡಿಸೇಲ್ ಬೆಲೆ ಗಗನಕ್ಕೇರಿದ್ದು, ಸಿಮೆಂಟ್ ಸಾಗಿಸುವ ಲಾರಿಗಳ ಬಾಡಿಗೆ ದರ ಹೆಚ್ಚಿಸುವಂತೆ ಆಗ್ರಹಿಸಿ ಟ್ರಾನ್ಸ್‌ಪೋರ್ಟ್ ಮಾಲೀಕರ ಸಂಘ ಹಾಗೂ ಲಾರಿ ಮಾಲೀಕರ ಸಂಘದ ಕಾರ್ಯಕರ್ತರು ಶುಕ್ರವಾರ ಎಸಿಸಿ ಸಿಮೆಂಟ್ ಕಂಪನಿ ವಿರುದ್ಧ ಪ್ರತಿಭಟನೆ ನಡೆಸಿದರು.

ಗುರುವಾರ ತಡರಾತ್ರಿಯಿಂದಲೇ ಲಾರಿಗಳು ಎಸಿಸಿ ಕಂಪನಿಯೊಳಗೆ ಹೋಗುವುದನ್ನು ತಡೆದು ಹೋರಾಟ ಆರಂಭಿಸಿದ್ದರಿಂದ ಶುಕ್ರವಾರ ಇಡೀ ದಿನ ಸಿಮೆಂಟ್ ಲೋಡಿಂಗ್ ಬಂದ್ ಆಗಿ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿತು.

ಕಳಬೇಡ ಎಂಬ ಬಸವ ಪದವೇ ಬದುಕಿಗೆ ಸವಾಲು

ಎಸಿಸಿ ಮುಖ್ಯ ದ್ವಾರದಲ್ಲಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಲಾರಿ-ಟ್ರಾನ್ಸ್‌ಪೋರ್ಟ್ ಮಾಲೀಕರ ಸಂಘದ ಅಧ್ಯಕ್ಷ ಶಂಕರಸಿಂಗ್ ರಾಠೋಡ, ಕಳೆದ ನಾಲ್ಕು ದಶಕಗಳಿಂದ ಸಾವಿರಾರು ಲಾರಿಗಳ ಮೂಲಕ ದೇಶದ ವಿವಿಧ ರಾಜ್ಯಗಳಿಗೆ ಎಸಿಸಿ ಸಿಮೆಂಟ್ ತಲುಪಿಸಲಾಗುತ್ತಿದೆ. ಡೀಸೆಲ್ ಬೆಲೆ ಏರಿಕೆಯಾದಾಗಲೊಮ್ಮೆ ಎಸಿಸಿ ಕಂಪನಿಯವರು ಸಿಮೆಂಟ್ ಬೆಲೆ ಏರಿಕೆ ಮಾಡುತ್ತಾರೆ. ಲಾರಿ ಬಾಡಿಗೆ ಮಾತ್ರ ಹೆಚ್ಚಿಸುವುದಿಲ್ಲ. ಒಂದು ಸಿಮೆಂಟ್ ಚೀಲಕ್ಕೆ ರೂ.೨೫೦ ಇದ್ದಾಗ ಲಾರಿ ಬಾಡಿಗೆ ದರ ಎಷ್ಟಿತ್ತೋ ಈಗ ಸಿಮೆಂಟ್ ಚೀಲದ ಬೆಲೆ ರೂ.೪೦೦ ಆದರೂ ಅಷ್ಟೇ ದರ ನೀಡಲಾಗುತ್ತಿದೆ. ಇದು ಲಾರಿ ಮತ್ತು ಟ್ರಾನ್ಸ್‌ಪೋರ್ಟ್ ವ್ಯವಹಾರದಲ್ಲಿ ತೊಡಗಿದ್ದವರಿಗೆ ಭಾರಿ ನಷ್ಟದ ಹೊಡೆತ ನೀಡಿದೆ. ಉತ್ಪಾದನೆ ಮತ್ತು ಅಧಿಕ ಲಾಭವನ್ನು ಬಯಸುವ ಎಸಿಸಿ ಕಂಪನಿ ಆಡಳಿತವು ಲಾರಿ ಮಾಲೀಕರ ಹಿತಾಸಕ್ತಿ ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಾಡಿಯಲ್ಲಿ ಆರಂಭಿಸಲಾಗಿರುವ ಲಾರಿ ಮುಷ್ಕರ ತಾತ್ಕಾಲಿಕವಲ್ಲ. ಲಾರಿ ಬಾಡಿಗೆ ದರ ಹೆಚ್ಚಿಸುವ ವರೆಗೂ ಸಿಮೆಂಟ್ ಸಾಗಾಣಿಕೆ ಕೈಬಿಟ್ಟು ಹೋರಾಟ ಮುಂದುವರೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಪ್ರತಿಭಟನೆ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ಮುಖಂಡರಾದ ಗಣೇಶ ಚವ್ಹಾಣ, ಕಲ್ಯಾಣಿ ಚಿಂಚನಸೂರ, ಶಿವಶಂಕ್ರಯ್ಯಸ್ವಾಮಿ, ಕಿಶೋರಕುಮಾರ ಸಿಂಗೆ, ಅಮೀನ್ ಪಟೇಲ, ಸುನೀಲ ರಾಠೊಡ, ಪೀರಮಹ್ಮದ್, ಶಮಶೋದ್ಧೀನ್, ಭಗವಂತಗೌಡ, ರಾಮಚಂದ್ರ ಚೌದರಿ, ಕಿಶನ ರಾಠೊಡ, ಲಕ್ಷ್ಮಣ ಹಡಪದ, ಚಂದ್ರಶೇಖರ, ಭಗವಾನ, ಮಹ್ಮದ್ ಗೌಸ್, ಶರಬಣ್ಣ ಪೂಜಾರಿ, ಮಲ್ಲಿಕಾರ್ಜುನ ರೆಡ್ಡಿ, ಸಂತೋಷ ಕೋಲಿ, ಶಿವುಕುಮಾರ ಚೌಕಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

sajidpress

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

20 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago