ಸುರಪುರ: ಕಾವ್ಯ ಎಂದರೆ ಬೇರೆನು ಅಲ್ಲ ಸತ್ಯಂ ಶಿವಂ ಸುಂದರಂ ಎಂಬುದಾಗಿ ಇದನ್ನು ಅರಿತು ಬರೆಯುವ ಕವಿ ಸಂಸ್ಕೃತಿಯ ಯಜಮಾನ ಇದ್ದಂತೆ ಎಂದು ಖ್ಯಾತ ಶರಣ ಸಾಹಿತಿ ಪತ್ರಕರ್ತ ಶಿವರಂಜನ್ ಸತ್ಯಂಪೇಟೆ ಮಾತನಾಡಿದರು.
ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾವ್ಯ ಕಟ್ಟುವ ಬಗೆ ಎಂಬುವ ವಿಷಯದ ಕುರಿತು ನಡೆದ ಒಂದು ದಿನದ ಕಾವ್ಯ ಕಮ್ಮಟದಲ್ಲಿ ಉಪನ್ಯಾಸ ನೀಡುತ್ತಾ,ಕಾವ್ಯ ಕಟ್ಟುವ ಮುನ್ನ ಕಾವ್ಯ ಎಂದರೆ ಏನೆಂದು ತಿಳಿಯುವುದು ಮುಖ್ಯ ಅಂದಾಗ ಕಾವ್ಯ ಕಟ್ಟಲು ಸಾಧ್ಯ,ಕಾವ್ಯ ಎಂದರೆ ಮರದೊಳಗಣ ಕಿಚ್ಚು,ನೆಲದ ಮರೆಯ ನಿಧಾನದಂತೆ, ಕಾವ್ಯದಲ್ಲಿ ಸೌಂದರ್ಯ ಸುಂದರತೆ ಗಮ್ಯ ಲಯ ವ್ಯಾಕರಣ ಇರಬೇಕು ಎನ್ನುವ ಕಾವ್ಯ ಮಿಮಾಂಸೆ ಹಿಂದೆ ಪಂಪ ರನ್ನ ಜನ್ನರ ಕಾಲದಲ್ಲಿತ್ತು.
ರಾಷ್ಟ್ರೀಯ ಸಮಾಜ ಪಕ್ಷಕ್ಕೆ ತಾಲೂಕು ಸಂಯೋಜಕರಾಗಿ ಬಸವರಾಜ ನೈಕೋಡಿ ನೇಮಕ
ನಂತರ ಬಂದ ಬಸವಣ್ಣನವರ ಸಮಕಾಲಿನ ಶರಣರು ದಂದಣ ದತ್ತಣ ಎಂದು ಸಮಾಜ ವಿರೋಧಿ ನಡೆಗಳನ್ನು ಕುರಿತು ಬರೆಯುವ ಮೂಲಕ ಹೊಸ ಆಯಾಮವನ್ನು ಕಲ್ಪಿಸಿದರು.ಕಾವ್ಯ ಎಂದರೆ ಕನ್ಯೆಯನ್ನು ಪ್ರೀತಿಸಿದಂತೆ.ಕಾವ್ಯ ಕಟ್ಟುವಲ್ಲಿ ಶ್ರಧ್ಧೆ ಬದ್ಧತೆ ಹಾಗು ಏಕಾಗ್ರತೆ ಬೇಕು ಅಂದಾಗ ಕಾವ್ಯ ಹುಟ್ಟುತ್ತದೆ.ಇಂದು ಅನೇಕರು ಹೆಚ್ಚಿನ ಓದು ಇಲ್ಲದೆ ದೊಡ್ಡ ಕವಿಗಳೆಂಬಂತೆ ಬಿಂಬಿಸಿಕೊಳ್ಳುತ್ತಾರೆ,ಆದರೆ ಅವರೆಂದು ಕುವೆಂಪು ಬೇಂದ್ರೆಯರಂತೆ ನೆನಪಲ್ಲಿ ಉಳಿಯುವುದಿಲ್ಲ,ಕವಿ ಎಂದರೆ ಹತ್ತರಲ್ಲಿ ಹನ್ನೊಂದಾಗುವ ಬದಲು ಹತ್ತರ ನಂತರ ಇನ್ನೊಂದಾಗುವಂತಿರಬೇಕೆಂದು ಮಾರ್ಮಿಕವಾಗಿ ಇಂದಿನ ಕವಿಗಳಿಗೆ ಕಿವಿಮಾತು ಹೇಳಿದರು.
ಕಾವ್ಯದಲ್ಲಿ ಧ್ವನಿ ಎನ್ನುವ ವಿಷಯದ ಕುರಿತು ಕಲಬುರ್ಗಿಯ ಸೇಂಟ್ ಜೋಸೆಫ್ ಕಾಲೇಜಿನ ಪ್ರಾಂಶುಪಾಲ ಚಿ.ಸಿ.ಲಿಂಗಣ್ಣ ಮಾತನಾಡಿ,ಕಾವ್ಯ ಎಂದರೆ ಬರೀ ವರ್ಣನೆ ಮಾತ್ರವಲ್ಲದೆ ಪರಕೀಯ ಸಂಸ್ಕೃತಿ ನಮ್ಮ ಮೇಲೆ ಪ್ರಭಾವ ಬೀರುತ್ತಿರುವ ಬಗ್ಗೆ ಸಮಾಜದ ಸುಧಾರಣೆಯ ಬಗ್ಗೆ ಕಾವ್ಯ ಕಟ್ಟಬೇಕು.ಜಗತ್ತಿನ ಎಲ್ಲಾ ಭಾಷೆಗಳಿಗಿಂತ ನಮ್ಮ ಕನ್ನಡ ಭಾಷಾ ಸಾಹಿತ್ಯ ಅತ್ಯಂತ ಶ್ರೀಮಂತ ಸಾಹಿತ್ಯವಾಗಿದೆ.ಆದರೆ ಇಂದು ಸಾಹಿತ್ಯ ವಲಯದಲ್ಲೂ ಜಾತಿ ಪಂಥಗಳು ನುಸುಳಿವೆ ಇದರಿಂದ ಸಾಹಿತ್ಯ ತನ್ನ ಸತ್ವ ಕಳೆದುಕೊಳ್ಳುತ್ತಿದೆ,ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನಗಳಲ್ಲಿ ಶೇ ೭೦ರಷ್ಟು ಸಾಹಿತಿಗಳು ಬರೀ ಶಿಫಾರಸ್ಸಿನ ಮೇರೆಗೆ ಕವನ ವಾಚನಕ್ಕೆ ಅವಕಾಶ ಪಡೆಯುವವರಿದ್ದಾರೆ,ಆದರೆ ನಿಜವಾದ ಕವಿತ್ವ ಉಳ್ಳವರು ಬರೀ ಶೇ ೩೦ ರಷ್ಟು ಮಾತ್ರ ಇರುತ್ತಾರೆ ಎಂದು ರೆಕ್ಮೆಂಡ್ ಸಾಹಿತಿಗಳ ಕುರಿತು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಸರಕಾರಿ ವಿಕಲಚೇತನ ನೌಕರರ ಸಂಘದಿಂದ ಸನ್ಮಾನ ಕಾರ್ಯಕ್ರಮ
ಮತ್ತೋರ್ವರಾದ ಸೇಡಂ ಹಿರಿಯ ಸಾಹಿತಿ ಲಿಂಗಾರೆಡ್ಡಿ ಸೇರಿಯವರು ಕನ್ನಡ ಕಾವ್ಯದಲ್ಲಿ ವಸ್ತು ಮತ್ತು ನೆಲೆಗಳು ಎನ್ನುವ ವಿಷಯದ ಕುರಿತು ಮಾತನಾಡಿ,ಪಂಪನ ಕಾಲದಲ್ಲಿ ಗುರು ಮನೆಗೆ ಮಾತ್ರ ಸೀಮಿತಿವಾಗಿದ್ದ ಕಾವ್ಯವನ್ನು ನಂತರದಲ್ಲಿ ಅದು ಅರಮನೆಗೆ ಬಸವಣ್ಣನ ಕಾಲದಲ್ಲಿ ಅದು ಗುಡಿಸಲಗಿ ಬಂತು ಎಂದರು.ಇಂದು ಅನೇಕರು ಬಂಡಾಯ ದಲಿತ ಸಾಹಿತ್ಯ ಎಂದರೆ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ,ಆದರೆ ಬಂಡಾಯ ಎಂದರೆ ಬದಲಾವಣೆ ಬಯಸುವ ಸಾಹಿತ್ಯವಾಗಿದೆ ಎಂದರು.
ನಂತರ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ನಿಂಗನಗೌಡ ದೇಸಾಯಿ ಮಾತನಾಡಿ,ಕಾವ್ಯ ಎಲ್ಲರ ಸ್ವತ್ತಲ್ಲ ಎಂಬುವ ಬದಲು ಅದು ಸಾಧಕರ ಹಾಗು ಪರಿಶ್ರಮಪಟ್ಟವರ ಸ್ವತ್ತಾಗಿದೆ ಎಂದರು.ಸಾಹಿತಿ ಹೆಚ್.ರಾಠೋಡ ನಿರೂಪಿಸಿದರು,ದೇವಿಂದ್ರಪ್ಪ ಕರಡಕಲ್ ವಂದಿಸಿದರು.ಎಂ.ಎಸ್ ಹಿರೇಮಠ ಪಾರ್ವತಿ ದೇಸಾಯಿ ಗುಂಡಪ್ಪ ಕುಂಬಾರ ಬಸವರಾಜ ಬಾನಾರ ಎಸ್.ಎಸ್.ನಾಯಕ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…