ಬಿಸಿ ಬಿಸಿ ಸುದ್ದಿ

ಭಾರತ ದೇಶದ ಯುವಜನತೆ ಬೂದಿಮುಚ್ಚಿದ ಕೆಂಡದಂತೆ : ಪ್ರೊ. ದಯಾನಂದ ಅಗಸರ

ಕಲಬುರಗಿ: ಭಾರತ ದೇಶದ ಯುವಜನತೆ ಬೂದಿಮುಚ್ಚಿದ ಕೆಂಡದಂತೆ. ಅವರಿಗೆ ವಿಜ್ಞಾನದ ಕಲಿಕೆಯತ್ತ ನಾವು ಕೊಂಡ್ಯೋದಾಗ ಅವರು ಪ್ರಪಂಚದಲ್ಲಿ ಬೆಂಕಿಯಂತೆ ಪ್ರಜ್ವಲಿಸುತ್ತಾರೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಅಭಿಪ್ರಾಯಪಟ್ಟರು.

ನಗರದ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ರವಿವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನ-೨೦೨೧ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭವಿಷ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಆವಿಷ್ಕಾರಗಳು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೊಸ ಕೌಶಲ್ಯಗಳನ್ನು ಹುಟ್ಟಿಕೊಳ್ಳುವುದಕ್ಕೆ ನಾಂದಿಯಾಗುತ್ತದೆ. ವಿಜ್ಞಾನವನ್ನು ನಾವು ನಮ್ಮ ಬದುಕಿನ ಎಲ್ಲಾ ಕ್ಷೇತ್ರದಲ್ಲಿ ಅಳವಡಿಸಿಕೊಂಡರೆ, ಅದು ನಮ್ಮ ಜೀವನಕ್ಕೆ ಹೊಸ ಬೆಳಕನ್ನು ಚೆಲ್ಲುತ್ತದೆ ಎಂದರು.

ಕವಿ ಎಂದರೆ ಸಂಸ್ಕೃತಿಯ ಯಜಮಾನ ಇದ್ದಂತೆ: ಶಿವರಂಜನ್ ಸತ್ಯಂಪೇಟೆ

ವಿಜ್ಞಾನ ನಮ್ಮಲ್ಲಿ ಜಾಗೃತಿ ಮೂಡಿಸುತ್ತದೆ. ನಮ್ಮಲ್ಲಿ ಸ್ಫೂರ್ತಿ ಮತ್ತು ಪ್ರೋತ್ಸಾಹದ ಅಂಶಗಳನ್ನು ಅಭಿವೃದ್ಧಿ ಪಡಿಸುತ್ತದೆ. ಎಲ್ಲ ಕೇತ್ರದವರು ವಿಜ್ಞಾನದ ಕೆಲವೊಂದು ಅಂಶಗಳನ್ನು ತಮ್ಮ ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ವಿವಿ ಕುಲಸಚಿವ ಡಾ. ಅನೀಲಕುಮಾರ ಬಿಡವೆ ಮಾತನಾಡಿ, ಅಂತರಜಾ ಬಳಕೆ ಮಾಡಿಕೊಂಡು, ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸಾಧಿಸಬಹುದು. ಹೊಸ ಹೊಸ ಕೌಶಲ್ಯಗಳನ್ನು ನಾವು ಕಲಿಯುವ ಮುಖಾಂತರ ನಮ್ಮದೇ ಆದ ಕ್ಷೇತ್ರದಲ್ಲಿ ಅತೀ ಹೆಚ್ಚು ಅಭಿವೃದ್ಧಿ ಸಾಧಿಸಬಹುದಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಅತೀ ಹೆಚ್ಚು ಅನುಕೂಲಕರವಾಗುವಂತಹ ಅಂತರಜಾಲದ ಮಾಹಿತಿ ಮೂಲಗಳನ್ನು ಉಪಯೋಗಿಸಿಕೊಂಡು ಶಿಕ್ಷಕರು ವಿದ್ಯಾರ್ಥಿಗಳಿಗೆ ಕಲಿಸುವ ಪ್ರಕ್ರಿಯೆಗೆ ತೊಡಗಬೇಕು ಎಂದರು.

ತಂತ್ರಜ್ಞಾನದ ಸಹಾಯದಿಂದ ನಾವು ಏನು ಬೇಕಾದರು? ಯಾವಾಗ ಬೇಕಾದರೂ ಕಲಿಯಬಹುದಾಗಿದೆ. ಕಲಿಕೆ ಪ್ರಕ್ರಿಯೆಯಲ್ಲಿ ನಾವು ತೋಡಗಲು ನಮಗೆ ಅನುಕೂಲಕರವಾದ ಸಮಯವನ್ನು ತಂತ್ರಜ್ಞಾನ ನಿಗಧಿಪಡಿಸಿದೆ ಎಂದರು. ವಿವಿ ಸಮಕುಲಪತಿ ಡಾ. ವಿ.ಡಿ. ಮೈತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ದೇಶದ ಜನರು ಅತೀ ಹೆಚ್ಚು ಶಕ್ತಿವಂತರಾಗಿದ್ದಾರೆ. ಆ ಕಾರಣದಿಂದಲೇ ನಾವು ಕೋವಿಡ್-೧೯ ಮಾರಕ ರೋಗ ಸದೃಢವಾಗಿ ನಿಭಾಯಿಸಿದ್ದೇವೆ. ಬೇರೆ ದೇಶಕ್ಕೆ ಹೋಲಿಕೆ ಮಾಡಿದ್ದರೇ, ನಮ್ಮ ದೇಶದ ಜನರಲ್ಲಿ ಅತೀ ಕಡಿಮೆ ಮಟ್ಟದಲ್ಲಿ ಸಾವು ಸಂಭವಿಸಿವೆ ಎಂದರು.

ಕಸಾಪ ಕಲಬುರಗಿ ಉತ್ತರ ವಲಯದ ಪದಾಧಿಕಾರಿಗಳಿಗೆ ಸನ್ಮಾನ

ವಿಜ್ಞಾನ ಕೇತ್ರದಲ್ಲಿ ನಾವು ಇನ್ನೂ ಹೆಚ್ಚು ಹೆಚ್ಚು ಸಾಧನೆ ಮಾಡಬೇಕಾಗಿದೆ. ಹೀಗಾಗಿ ನಾವುಗಳು ವಿಜ್ಞಾನ ಕೇತ್ರದತ್ತ ಒಲವು ಹೆಚ್ಚಿಸಿಕೊಳ್ಳಬೇಕು ಎಂದರು. ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಡೀನ್ ಡಾ. ರಾಮಕೃಷ್ಣ ರೆಡ್ಡಿ ಮಾತನಾಡಿ ಅನ್ವಯಿಕ ವಿಜ್ಞಾನದತ್ತ ನಾವುಗಳು ಸಾಗಬೇಕಾಗಿದೆ ಎಂದರು.

ಪ್ರೊ. ಸಂಧ್ಯಾ ಮತ್ತು ಅಂಜಲಿ ಬಾಬಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಕೋಮಲ್ ಮತ್ತು ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಡೀನ್ ಡಾ. ನಾಗನಸವಣ್ಣ ಗುರುಜೋಳ ಸ್ವಾಗತಿಸಿದರು. ಸಸ್ಯಶಾಸ್ತ್ರ ವಿಭಾಗದ ಡೀನ್ ಡಾ. ಅರ್ಜುನ್ ಶೆಟ್ಟಿ ವಂದಿಸಿದರು.

sajidpress

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

7 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

7 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

7 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

24 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago