ಕಲಬುರಗಿ: ಶಿಕ್ಷಕರು, ಉಪನ್ಯಾಸಕರು ತಮ್ಮ ಪಾಲಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ, ವಿದ್ಯಾರ್ಥಿಗಳ ಅಭಿವೃದ್ಧಿಯೊಂದಿಗೆ, ಶೈಕ್ಷಣಿಕ ಕ್ಷೇತ್ರವೂ ಅಭಿವೃದ್ಧಿ ಹೊಂದುತ್ತದೆ ಎಂದು ಬೆಂಗಳೂರು ಹೆಚ್.ಕೆ.ಇ.ಸಂಸ್ಥೆಯ ಪತ್ರಿಕೋದ್ಯಮ ವಿಭಾಗದ ಹಿರಿಯ ಉಪನ್ಯಾಸಕ ಡಾ.ಹಾಲಸ್ವಾಮಿ ಕೆ.ಜಿ ಅವರು ಅಭಿಪ್ರಾಯ ಪಟ್ಟರು.
ಇಲ್ಲಿನ ಗ್ರ್ಯಾಂಡ್ ಹೋಟೆಲ್‍ನಲ್ಲಿ ಭಾನುವಾರ ಅವರ ಪತ್ರಿಕೋದ್ಯಮ ವಿದ್ಯಾರ್ಥಿಗಳು, ಪತ್ರಕರ್ತರು ಹಾಗೂ ಹಿತೈಷಿಗಳು ನೀಡಿದ ಆತ್ಮೀಯ ಸನ್ಮಾನ ಸ್ವೀಕರಿಸಿ ಮಾತನಾಡಿ, ಉಪನ್ಯಾಸಕನಾದ ನಾನು ನನ್ನ ಕರ್ತವ್ಯವನ್ನು ಸೇವಾ ಮನೋಭಾವನೆಯೊಂದಿಗೆ ನಿರ್ವಹಿಸಿದ್ದೇನೆ ಎಂದರು.
ಭಾರತ ದೇಶದ ಯುವಜನತೆ ಬೂದಿಮುಚ್ಚಿದ ಕೆಂಡದಂತೆ : ಪ್ರೊ. ದಯಾನಂದ ಅಗಸರ
ಪತ್ರಿಕೋದ್ಯಮ ಕ್ಷೇತ್ರ ಪವಿತ್ರವಾದದ್ದು, ಸಾಮಾಜಿಕ ಅಭಿವೃದ್ಧಿ ಪರ ಚಿಂತನೆಯೊಂದಿಗೆ ಸರಳತೆ, ನಿಸ್ವಾರ್ಥ ಸೇವಾ ಮನೋಭಾವದಿಂದ ಮುನ್ನಡೆದಾಗ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು. ಗುರು-ಶಿಷ್ಯರ ಮನೋಭಾವನೆ ಒಂದೇ ಆಗಿದ್ದಾಗ, ಅಲ್ಲಿ ಒಂದು ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ. ಅಲ್ಲದೆ ಅವರಿಬ್ಬರ ಬಾಂಧವ್ಯ ನಿರಂತರವಾಗಿ ಮುಂದುವರೆಯುತ್ತದೆ ಎಂದು ಹೇಳಿದರು.
ಪತ್ರಿಕೋದ್ಯಮ ಕ್ಷೇತ್ರ ಇಂದು ಮೊದಲಿನಂತಿಲ್ಲ. ಸಾಕಷ್ಟು ವಿಸ್ತಾರಗೊಂಡಿದೆ. ಅಷ್ಠೆ ಸವಾಲುಗಳು ಎದುರಾಗಿವೆ. ಬರುವಂತಹ ಸವಾಲುಗಳನ್ನು ಆರೋಗ್ಯಕರ ಸ್ಪರ್ಧೆಯೊಂದಿಗೆ ಎದುರಿಸಿ, ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ. ಈ ದಿಶೆಯುಲ್ಲಿ ಪತ್ರಕರ್ತರು ಸಾಕಷ್ಟು ಶ್ರಮವಹಿಸಬೇಕೆಂದು ಹೇಳಿದರು.
ದಲಿತ ಮಾದಿಗ ಸಮನ್ವಯ ಸಮಿತಿಯಿಂದ ಗ್ರಾಪಂ ಸದಸ್ಯರಿಗೆ ಸನ್ಮಾನ
ಹಿರಿಯ ಪತ್ರಕರ್ತ ಹಾಗೂ ಹಾಲಸ್ವಾಮಿ ಅವರ ವಿದ್ಯಾರ್ಥಿ ಸುಭಾಷ ಬಣಗಾರ ಮಾತನಾಡಿ, ಕಳೆದ ಮೂವತ್ತು ವರ್ಷಗಳಿಂದ ಹಾಲಸ್ವಾಮಿ ಅವರು ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ. ನೂರಾರು ವಿದ್ಯಾರ್ಥಿಗಳು ಮಾಧ್ಯಮ ಕ್ಷೇತ್ರದಲ್ಲಿ ವರದಿಗಾರರಾಗಿ, ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಲ್ಲಿನ ಸರಳತೆ, ಆತ್ಮೀಯತೆ, ಪ್ರಾಮಾಣಿಕತೆ ಪ್ರತಿಯೊಬ್ಬರೂ ಮೇಲೂ ಪರಿಣಾಮ ಬೀರಿದೆ. ಅವರೊಬ್ಬ ಅಪರೂಪದ ಉಪನ್ಯಾಸಕರಾಗಿದ್ದಾರೆ ಎಂದು ಹೇಳಿದರು.
ಮತ್ತೋರ್ವ ವಿದ್ಯಾರ್ಥಿನಿಯೂ ಆದ ಕಲಬುರಗಿಯ ಎಂ.ಎಂಇ. ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ವಾಣಿಶ್ರೀ ನಂದ್ಯಾಳ ಮಾತನಾಡಿ, ಹಾಲಸ್ವಾಮಿ ಸರ್ ವ್ಯಕ್ತಿತ್ವ ನಡೆ-ನುಡಿ ಆದರ್ಶಮಯವಾಗಿದೆ. ಅವರೊಬ್ಬ ಮಾದರಿ ಉಪನ್ಯಾಸಕರಾಗಿದ್ದಾರೆ ಎಂದು ಹೇಳಿದರು.
ರಾಜ್ಯ ಸರಕಾರಿ ವಿಕಲಚೇತನ ನೌಕರರ ಸಂಘದಿಂದ ಸನ್ಮಾನ ಕಾರ್ಯಕ್ರಮ
ಇದೇ ಸಂದರ್ಭದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಉಪನ್ಯಾಸಕರಾದ ಡಾ.ಪಾರ್ವತಿ, ಕುಸುಮ ಜಿ.ಆರ್., ಪ್ರೊ.ಮಹೇಶ್ವರಪ್ಪ, ಡಾ.ವಿ.ಬಿ.ನಂದ್ಯಾಳ, ಹಿರಿಯ ಪತ್ರಕರ್ತ ಸಂಜಯ ಚಿಕ್ಕಮಠ, ರಾಹುಲ್ ಬೆಳಗೇರಿ, ಲಕ್ಷ್ಮಣ ನಾಯಕ್, ಗುರುರಾಜ, ರೇಣುಕಪ್ಪ ಕೆ.ಜಿ. ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…