ಕಲಬುರಗಿ: ಸಮಾಜದಲ್ಲಿನ ಹಿರಿಯರನ್ನು ಗೌರವಿಸುವ ಮನೋಭಾವ ಇಂದಿನ ಯುವಜನತೆ ಬೆಳೆಸಿಕೊಳ್ಳುವುದರ ಮೂಲಕ ಅವರ ಜೀವನ ಅನುಭವ ಹಾಗೂ ಮಾರ್ಗದರ್ಶನ ಪಡೆದು ಸುಂದರ ಬದುಕು ರೂಪಿಸಿಕೊಳ್ಳುವಂತೆ ಸಮಾಜ ಸೇವಕಿ ಜಯಶ್ರೀ ಬಸವರಾಜ ಮತ್ತಿಮಡು ಕರೆ ನೀಡಿದರು.
ನಗರದ ಸೈಯದ ಚಿಂಚೋಳಿಸ ರಸ್ತೆಯಲ್ಲಿರುವ ಮಹಾದೇವಿ ವೃದ್ಧಾಶ್ರಮದಲ್ಲಿ ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ರಾಜ್ಯ ನಿರ್ದೇಶಕರಾದ ಸುರೇಶ ಎಸ್.ತಂಗಾ ಅವರು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಬಸವರಾಜ ಮತ್ತಿಮಡು ರವರ ಜನ್ಮ ದಿನದ ಅಂಗವಾಗಿ ಆಯೋಜಿಸಿದ ಪ್ರಸಾದ ವಿತರಣೆ ಸಮಾರಂಭವನ್ನು ಹಿರಿಯರಿಗೆ ಊಟ ಬಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣದ ಜೊತೆಗೆ ಮಕ್ಕಳಿಗೆ ಮನೆಯಲ್ಲಿ ಸಂಸ್ಕಾರ ನೀಡುವುದು ಅತ್ಯವಶ್ಯವಾಗಿದ್ದು ಸಂಸ್ಕಾರ ಕಲಿತ ಮಗು ಸಂತಸದಿಂದ ಹಾಗೂ ಸಮಾಜಕ್ಕೆ ಶಕ್ತಿಯಾಗಿ ಬೆಳೆಯಬಲ್ಲದು ಎಂದು ಅವರು ಅಭಿಪ್ರಾಯಪಟ್ಟರು. ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದ ಸುರೇಶ ತಂಗಾ ಅವರಿಗೆ ಮತ್ತಿಮಡು ರವರು ಅಭಿನಂದನೆ ಸಲ್ಲಿಸಿದರು.
ಸಮಾರಂಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಕಾರ್ಯಕಾರಿ ಸಮಿತಿ ಸದಸ್ಯರಾದ ನಾಗಲಿಂಗಯ್ಯ ಮಠಪತಿ, ಶಹಾಬಾದ ನಗರ ಸಭೆಯ ಸದಸ್ಯರಾದ ರವಿ ರಾಠೋಡ, ಜೈನ ಸಮಾಜದ ಯುವ ಮುಖಂಡರಾದ ರಾಜೇಂದ್ರ ಕುಣಚಗಿ, ಬಿ.ಜೆ.ಪಿ. ಮಹಿಳಾ ಪ್ರಮುಖರಾದ ಭಾಗೀರಥಿ ಗುನ್ನಾಪೂರ ಮುಖಂಡರಾದ ಮಂಜುನಾಥ ವಾರದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಕೆ.ಎಂ.ಡಿ.ಸಿ. ನಿರ್ದೇಶಕರಾದ ಸುರೇಶ ಎಸ್.ತಂಗಾ ವಹಿಸಿದ್ದರು. ವೃದ್ಧಾಶ್ರಮದಲ್ಲಿರುವ ವಯೋವೃದ್ಧರಿಗೆ ಜನ್ಮ ದಿನದ ಅಂಗವಾಗಿ ಹೋಳಿಗೆ, ಹಾಲು, ತುಪ್ಪದ ಪ್ರಸಾದ ವ್ಯವಸ್ಥೆ ಮಾಡಿರುವ ಕಾರ್ಯ ಎಲ್ಲರಿಂದ ಪ್ರಶಂಸನೆಗೊಳಗಾಯಿತು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…