ಬಿಸಿ ಬಿಸಿ ಸುದ್ದಿ

ಬಂಜಾರಾ ಸಮುದಾಯದವರು ಶ್ರಮ ಜೀವಿಗಳು ಸೇವಲಾಲ ಆರಾಧಕರು: ಶಾಸಕ ಎಂ.ವೈ

ಅಫಜಲಪುರ: ಬಂಜಾರ ಸಮುದಾಯವರು ಶ್ರಮ ಜೀವಿಗಳು ಮತ್ತು ಶ್ರೀ ಸಂತ ಸೇವಲಾಲ ಮಹಾರಾಜರ ಅಪ್ಪಟ ಆರಾಧಕರು ಹಾಗೂ ಕೃಷಿ ಅವಲಂಬಿತರು ಎಂದು ಶಾಸಕ ಎಂವೈ.ಪಾಟೀಲ ಅವರು ಹೇಳಿದರು.

ಅಫಜಲಪುರ ಪಟ್ಟಣದ ಬಸವ ಮಂಟಪದಲ್ಲಿ ತಾಲೂಕಾ ಬಂಜಾರಾ ಸರಕಾರಿ ಹಾಗೂ ಅರೆಸರಕಾರಿ ನೌಕರರ ಸಂಘದ ಶ್ರೀ ಸಂತ ಸದ್ಗುರು ಸೇವಲಾಲ ಮಹಾರಾಜರ ಜಯಂತ್ಯೋತ್ಸವ ಮತ್ತು ಬಂಜಾರಾ ಸಮಾಜದ ನೂತನ ಗ್ರಾಪಂ ಸದಸ್ಯರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವರ್ಗಿಯ ಡಾ. ರಾಮರಾವ ಮಹಾರಾಜರ ಭಾವಚಿತ್ರಕ್ಕೆ ಪುಷ್ಟಾರ್ಚನೆ ಮಾಡಿ ಮಾತನಾಡಿದ ಅವರು ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಸಂಘ ಹಾಗೂ ಸಂಘಟನೆ ಬಹಳ ಮುಖ್ಯವಾಗಿದೆ ಎಂದ ಅವರು ಸಂಘಟನೆಯಿAದ ಸಮಾಜವನ್ನು ಒಂದೂ ಗೂಡಿಸಲು ಸಾಧ್ಯವಾಗುತ್ತದೆ ಅಷ್ಟೇ ಅಲ್ಲದೇ ಸರಕಾರದಿಂದ ಬರುವ ಸೌಲಭ್ಯಗಳನ್ನು ಪಡೆದು ಕೊಳ್ಳಲು ಸುಲಭವಾಗುತ್ತದೆ ಎಂದರು.

ಹಿರಿಯ ಪತ್ರಕರ್ತರಿಗೆ ಸಂಘದಿಂದ ಸನ್ಮಾನ

ಬAಜಾರಾ ಸಮುದಾಯದ ಜನರು ಇಂದು ಶೈಕ್ಷಣಿಕ, ಆರ್ಥಿಕ, ಸಮಾಜೀಕವಾಗಿ ಮುಂದು ವರಿಯುವುದಲ್ಲದೇ ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿ ಇದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ ಅವರು ಅಫಜಲಪುರ ತಾಲೂಕಿನಲ್ಲಿ ಸರಕಾರಿ ಹಾಗೂ ಅರೆ ಸರಕಾರಿ ವತಿಯಿಂದ ಹಮ್ಮಿಕೊಂಡ ಈ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿದೆ ಇದೆ ರೀತಿ ಈ ಸಂಘವು ಎತ್ತರ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದ ಅವರು ತಾಲೂಕಿನಲ್ಲಿ ಸಮುದಾಯದಕ್ಕೆ ಸಮುದಾಯ ಭವನ ಬೇಡಿಕೆ ಇದೆ ಆದರೆ ಪುರಸಭೆಯಿಂದ ಒಮ್ಮತ ಪಡೆದು ನಿವೇಶನ ತೋರಿಸಿದರೆ ನಾನೂ ಸರಕಾರಿಂದ ಭವನಕ್ಕೆ ಅನುದಾನ ನೀಡುತ್ತೇನೆ ಎಂದು ಬರವಸೆ ನೀಡಿದ ಅವರು ಅಷ್ಟೇ ಅಲ್ಲದೇ ಈ ಸಮುದಾಯಕ್ಕೆ ಸರಕಾರದಿಂದ ಬರುವ ಎಲ್ಲಾ ಯೋಜನೆಗಳು ಪ್ರಮಾಣಿಕವಾಗಿ ತಲುಪುವ ಹಾಗೆ ಮಾಡುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನೂತನವಾಗಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಸದಸ್ಯರಿಗೆ ಸನ್ಮಾನ ಸಮಾರಂಭ ಜರುಗಿತು. ಕಾರ್ಯಕ್ರಮದ ಸಾನಿಧ್ಯ ಪೂಜ್ಯ ಶ್ರೀ ಬಳಿರಾಮ ಮಹಾರಾಜರು, ನೇತೃತ್ವನ್ನು ಪೂಜ್ಯ ಶ್ರೀ ಮುರಾಹರಿ ಮಹಾರಾಜರು,ಶ್ರೀ ಬಾಲತಪಸ್ವಿ ಸೋಮಲಿಂಗ ಮಹಾಸ್ವಾಮಿಗಳು, ಶ್ರೀ ಸುರೇಶ ಮಹಾರಾಜರು ವಹಿಸಿದರು.

ಖರ್ಗೆ ಟ್ವಿಟ್‌ಗೆ ಗುತ್ತೇದಾರ ಪ್ರತಿಕ್ರಿಯೆ

ತಾಲೂಕ ಬಂ.ಸ.ಮತ್ತು ಅ.ನೌ.ಸಂಘ ಅಧ್ಯಕ್ಷತೆಯನ್ನು ಲಕ್ಷö್ಮಣಸಿಂಗ ಪವಾರ, ಸಂಘದ ಗೌರವಾಧ್ಯಕ್ಷರಾದ ದೇಶು ರಾಠೋಡ, ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಧಿಕಾರಿ ಸುಧಾಕಾರ ನಾಯಕ, ತಾ. ವೈದ್ಯಾಧಿಕಾರಿಗಳಾದ ವಿನೋದ ರಾಠೋಡ, ಎ.ಪಿ.ಎಮ್.ಸಿ. ಸದಸ್ಯರಾದ ಗಂಗಾಬಾಯಿ ಮನೋಹರ ರಾಠೋಡ, ಎ.ಓ. ಅವಿನಾಶ ರಾಠೋಡ, ರಾಮಚಂದ್ರ ರಾಠೋಡ, ರಾಜ್ಯ ಬಂಜಾರಾ ಸಮುದಾಯದ ರಕ್ಷಣಾ ವೇದಿಕೆ ಅಧ್ಯಕ್ಷರಾದ ಅಪ್ಪ ರಾಠೋಡ, ಉಪಾಧ್ಯಕ್ಷರಾದ ಮನೋಹರ ರಾಠೋಡ, ಮುಖ್ಯ ಅತಿಥಿಗಳಾದ ರಾಜಕುಮಾರ ಚವಾಣ, ಕಮುಲು ಮೇಘು, ಭೈರು ಚವಾಣ, ರಾಜು ಪವಾರ, ಖೇಮಸಿಂಗ ರಾಠೋಡ, ಪೂಲಚಂದ ರಾಠೋಡ, ಅರ್ಜುನ ರಾಠೋಡ, ಶ್ರೀ ರೇವಣಸಿದ್ದ ಶಿಕ್ಷಣ ಸಂಸ್ಥೆ ಸಂಸ್ಥಾಪಕರಾದ ದೇಶು ರಾಠೋಡ, ಸಂಘದ ಖಜಾಂಚಿ ಅಂಜುಕುಮಾರ ರಾಠೋಡ, ಪಂಡಿತ ರಾಠೋಡ, ನಿಸರ್ಗ ಸಂಸ್ಥೆಯ ಸಂಸ್ಥಾಪಕರಾದ ಸೂರ್ಯಕಾಂತ ರಾಠೋಡ,ಶ್ರೀಮತಿ ಸುಮಿತ್ರಾ ರಾಠೋಡ, ಅಂಬದಾಸ ನಾನನಾಯಕ, ಮೇಬೂಬ ನಾಯಕ, ಚಂದ್ರಕಾAತ ರಾಠೋಡ, ಅಶೋಕ ನಾಯಕ, ಉಮಕಾಂತ ರಾಠೋಡ, ಜಗನಾಥ ರಾಠೋಡ, ಅಶೋಕ ರಾಠೋಡ, ಸೇರಿದಂತೆ ಸಂಘದ ಪದಾಧಿಕಾರಿಗಳು ಸೇರಿದಂತೆ ಅನೇಕರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕ ಸುರೇಶ ರಾಠೋಡ ನಡಿಸಿಕೊಟ್ಟರು,

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago