ಬಿಸಿ ಬಿಸಿ ಸುದ್ದಿ

ಬಂಜಾರ ಸಮುದಾಯದ ಅಭಿವೃದ್ದಿಗೆ ಒತ್ತು: ಶಾಸಕ ಖರ್ಗೆ

ಕಲಬುರಗಿ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಂಜಾರ ಸಮುದಾಯದ ಅಭಿವೃದ್ದಿಗೆ ಒತ್ತು ನೀಡಲಾಗಿತ್ತು ಎಂದು ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಹೇಳಿದರು.

28 ನೆಯ ಮಹಾಶಿವರಾತ್ರಿ ಅಂಗವಾಗಿ ಸೋನ್ಯಾಲಗಿರಿ ಸುಕ್ಷೇತ್ರ ( ಬೆಡಸೂರು ) ಪಂಗರಗಾ ತಾಂಡಾದಲ್ಲಿ ಏರ್ಪಡಿಸಲಾಗಿದ್ದ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕೆಕೆ ಪ್ರದೇಶದ ಅಭಿವೃದ್ಧಿಯಲ್ಲಿ ವಾಣಿಜ್ಯ ಕೈಗಾರಿಕೆಗಳ ಅಭಿವೃದ್ಧಿಯ ಪಾತ್ರ ಕುರಿತು ವಿಚಾರ ಸಂಕಿರಣ 14ಕ್ಕೆ

” ನಾನು ಸಮಾಜಕಲ್ಯಾಣ ಸಚಿವನಾಗಿದ್ದಾಗ ಎಸ್ ಸಿ ಎಸ್ ಟಿ ಸಮುದಾಯಗಳ ಅಭಿವೃದ್ದಿಗಾಗಿ ಸುಮಾರು 30,000 ಕೋಟಿ ಅನುದಾನ ತೆಗೆದಿರಿಸಿದ್ದೆ. ಬಂಜಾರ ಸಮುದಾಯದ ಸಮಗ್ರ ಅಭಿವೃದ್ದಿ ಸೇರಿದಂತೆ ಯುವಕರಿಗಾಗಿಯೇ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದೆ” ಎಂದು ನೆನಪಿಸಿಕೊಂಡರು.

SCP/ TSP ಅಡಿಯಲ್ಲಿ ಯೋಜನೆಗಳ ಜಾರಿಗಾಗಿ ಸರ್ಕಾರದ ಬಳಿ ಇದ್ದ ಅನುದಾನದಲ್ಲಿ ಶೇ 21% ಅನುದಾನ ತೆಗೆದಿರಸಲಾಗಿತ್ತು. ” ತಾಂಡಾ ಅಭಿವೃದ್ಧಿ ನಿಗಮಕ್ಕೆ ರೂ 100 ಕೋಟಿ ಅನುದಾನ, ಅರ್ಹ ಫಲಾನುಭವಿಗಳಿಗೆ ಸುಮಾರು 4500 ಟ್ಯಾಕ್ಸಿ ವಿತರಣೆ, ಬಂಜಾರ ಸಮುದಾಯದ ಉಡುಗೆ ತೊಡುಗೆ ಸಂರಕ್ಷಣೆಗೆ, ಸಂತ ಸೇವಾಲಾಲ ಭವನ ನಿರ್ಮಾಣಕ್ಕಾಗಿ ಪ್ರತಿಯೊಂದು ಭವನಕ್ಕಾಗಿ ರೂ 10 ಲಕ್ಷದಂತೆ ಒಟ್ಟು 400 ಭವನಗಳನ್ನು ನಿರ್ಮಿಸಲು ಹಣ ಬಿಡುಗಡೆ ಹಾಗೂ ಸೇವಾಲಾಲ ಪ್ರಗತಿ ಕಾಲನಿಗಳ ಅಭಿವೃದ್ದಿಗಾಗಿ ಕ್ರಮಕೈಗೊಳ್ಳಲಾಗಿತ್ತು” ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಕಸ ಸಂಗ್ರಹಣೆಯ ಬುಟ್ಟಿ ವಿತರಣೆ

” ಸಂತ ಸೇವಾಲಾಲರ ಪುಣ್ಯಭೂಮಿ ಸೊರಗೊಂಡನಕೊಪ್ಪದ ಸಮಗ್ರ ಅಭಿವೃದ್ದಿಗಾಗಿ ರೂ
200 ಕೋಟಿಯ ಮಾಸ್ಟರ್ ಪ್ಲಾನ್ ರೂಪಿಸಿ ರೂ 50ಕ ಕೋಟಿ ಅನುದಾನವನ್ನೂ ಕೂಡಾ ಬಿಡುಗಡೆ ಮಾಡಿದ್ದೆ. ಈಗ ಮಾನ್ಯ ಸಂಸದರಾದ ಉಮೇಶ ಜಾಧವ ಹಾಗೂ ಶಾಸಕರಾದ ಅವಿನಾಶ ಜಾಧವ ಅವರು ಪಿ.ರಾಜೀವ್ ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಬೇಕೆಂದು” ಶಾಸಕರು ಹೇಳಿದರು.

ಬುದ್ದ ಬಸವ ಅಂಬೇಡ್ಕರ ಹಾಗೂ ಸೇವಾಲಾಲರ ತತ್ವಾದರ್ಶಗಳ ಪಾಲನೆ ಹಾಗೂ ಮಾರ್ಗದರ್ಶನದ ಅಡಿಯಲ್ಲಿ ಸಾಗಬೇಕಾದರೆ ಅಭಿವೃದ್ದಿ ಕೆಲಸ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟ ಶಾಸಕರು ದಿವ್ಯ ಸಾನಿಧ್ಯ ವಹಿಸಿದ್ದ ಜಗದ್ಗುರು ಪಂಚಾಕ್ಷರಿ ಪರವತಲಿಂಗ ಪರಮೇಶ್ವರ ಮಹಾರಾಜರು ಸುಕ್ಷೇತ್ರದಲ್ಲಿ 501 ಲಿಂಗಗಳ ಸ್ಥಾಪನೆ ಮಾಡಿದ್ದಾರೆ. ಅವರ ಕಾರ್ಯ ಶ್ಲಾಘನೀಯ ಎಂದರು.

ಆರೋಗ್ಯವಾಗಿರಲು ರೋಗನಿರೋಧಕ ಶಕ್ತಿ ಅಗತ್ಯ: ಡಾ. ಮಹ್ಮದ್ ಮತೀನ್

ಇದೇ ಸಂದರ್ಭದಲ್ಲಿ ಪ್ರಿಯಾಂಕ್ ಖರ್ಗೆ ಅವರಿಗೆ ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಲಾಯಿತು.

ವೇದಿಕೆಯ ಮೇಲೆ ಬೀದರ್ ಸಂಸದರಾದ ಭಗವಂತ ಖೂಬಾ, ಕಲಬುರಗಿ ಸಂಸದರಾದ ಉಮೇಶ್ ಜಾಧವ, ಶಾಸಕರಾದ ಅವಿನಾಶ ಜಾಧವ, ಮಾಜಿ‌ಸ ಚಿವರಾದ ಡಾ ಶರಣಪ್ರಕಾಶ್ ಪಾಟೀಲ್ ಹಾಗೂ ರೇವುನಾಯಕ ಬೆಳಮಗಿ ಸೇರಿದಂತೆ ವಿವಿಧ ಮಠಗಳ ಶ್ರೀಗಳು ಹಾಜಿರಿದ್ದರು.

emedialine

Recent Posts

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

1 hour ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

1 hour ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

1 hour ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

1 hour ago

ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಬೇಡಿ

ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…

1 hour ago

ಸೇಡಂ: `ಅಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭ ನಾಳೆ

ಸೇಡಂ (ಕಲಬುರಗಿ);  ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…

2 hours ago