ಕೆಕೆ ಪ್ರದೇಶದ ಅಭಿವೃದ್ಧಿಯಲ್ಲಿ ವಾಣಿಜ್ಯ ಕೈಗಾರಿಕೆಗಳ ಅಭಿವೃದ್ಧಿಯ ಪಾತ್ರ ಕುರಿತು ವಿಚಾರ ಸಂಕಿರಣ 14ಕ್ಕೆ

0
70

ಕಲಬುರಗಿ: ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ವತಿಯಿಂದ ಬರುವ 14 ರಂದು ರವಿವಾರ ಬೆಳಿಗ್ಗೆ 11:30 ಗಂಟೆಗೆ ನಗರದ ಸ್ಟೇಷನ್ ಬಜಾರ್ ಮುಖ್ಯ ರಸ್ತೆಯಲ್ಲಿ ಬರುವ ವಿಠ್ಠಲ ಮಂದಿರ ದೇವಸ್ಥಾನದ ನೂತನ ಸಭಾಂಗಣದಲ್ಲಿ “ಕಲ್ಯಾಣ ಕರ್ನಾಟಕ ಪ್ರದೆಶದ ಅಭಿವೃದ್ಧಿಗೆ ವಾಣಿಜ್ಯ ಮತ್ತು ಕೈಗಾರಿಕೆಗಳ ಅಭಿವೃದ್ಧಿಯ ಪಾತ್ರದ ಕುರಿತು ವಿಚಾರ ಸಂಕೀರಣ”  ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀಕ್ಷೇತ್ರ ಶ್ರೀನಿವಾಸ ಸರಡಗಿ ಮಠದ‌ ಪೀಠಾಧಿಪತಿಗಳಾದ ಶ್ರೀ ರೇವಣಸಿದ್ದ ಶಿವಾಚಾರ್ಯರು ವಹಿಸುವರು. ಅಧ್ಯಕ್ಷತೆಯನ್ನು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ವಹಿಸುವರು.

Contact Your\'s Advertisement; 9902492681

ಬಂಜಾರ ಸಮುದಾಯದ ಅಭಿವೃದ್ದಿಗೆ ಒತ್ತು: ಶಾಸಕ ಖರ್ಗೆ

ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿಗಳಾದ ಮನೀಷ ಜಾಜು ರವರು ವಿಚಾರ ಸಂಕಿರಣದ ವಿಷಯ ಮಂಡನೆ ಮಾಡುವರು. ಮುಖ್ಯ ಅತಿಥಿಗಳಾಗಿ ಪ್ರೋ.ಅಣ್ಣಾರಾವ ಧುತ್ತರಗಾಂವ, ಮಾರುತಿ ಪವಾರ, ದತ್ತಾತ್ರೆಯ ಪುಕಾಳೆ, ಸುಭಾಷ ಕಮಲಾಪೂರ, ವಿಜಯಕುಮಾರ ತೋಶ್ನಿವಾಲ್  ಮಜರ ಹುಸೈನ್, ಲಿಂಗರಾಜ ಸಿರಗಾಪೂರ, ಶಿವಲಿಂಗಪ್ಪ ಬಂಡಕ,ಡಾ.ಮಾಜೀದ ದಾಗಿ, ಮಾರುತಿ ಪವಾರ, ಅಶೋಕ್ ಧಂಗಾಪೂರ ಭಾಗವಹಿಸುವರು.

ವಿಚಾರ ಸಂಕಿರಣ ಚರ್ಚೆಯಲ್ಲಿ ವಿಶೇಷ ಆಹ್ವಾನಿತರಾಗಿ ವಿರೇಶ ಪುರಾಣಿಕ, ಮಹ್ಮದ್ ಮಿರಾಜುದ್ದಿನ್, ಜ್ಞಾನಮಿತ್ರ,ಹೆಚ್.ಎಂ.ಹಾಜಿ, ನಂದಕುಮಾರ, ಅಬ್ದುಲ್ ರಹೀಂ,ಸಾಲೋಮನ ದೀವಾಕರ, ಗುರುಲಿಂಗಪ್ಪ ಟೆಂಗಳಿ, ಪ್ರಭು ಪಾಟೀಲ, ಶಾಂತಪ್ಪ ಕಾರಭಾಸಗಿ,ಗುರುರಾಜ ಭಂಡಾರಿ, ಹೇಮಂತ ರಾಠೋಡ, ಆನಂದ ಚವ್ಹಾಣ, ಆನಂದ ದೇಶಪಾಂಡೆ, ಸಂಧ್ಯಾರಾಜ ಸ್ಯಾಮ್ಯುವೆಲ್, ಶಿವರಾಜ ಪಾಟೀಲ್, ಸಾಜೀದ ಅಲಿ ರಂಜೋಳ್ಳ್ವಿ,ಬಾಬಾ ಫಕ್ರುದ್ದೀನ್ ಅಸ್ಲಂ ಚೋಂಗೆ, ಸುನೀಲ್ ಬಿ,  ಲಿಂಗಣ್ಣ ಉದನೂರ, ಮಲ್ಲಿಕಾರ್ಜುನ ಬಿ., ಶ್ರೀನಿವಾಸ ಕಠಾರೆ,ಚಾಂದ ಅಕ್ಬರ್ ಹಾಗೂ ಆನಂದ ಖಾನಾಪೂರ ಆಗಮಿಸುರು. ಈ ವಿಚಾರ ಸಂಕಿರಣದಲ್ಲಿ ಕೆಲವೊಂದು ಮಹತ್ವದ ನಿರ್ಣಯಗಳನ್ನು ಸಹ ಕೈಗೊಳ್ಳಲಾಗುವುದು.

ಕೆಕೆ ಪ್ರದೇಶದ ಅಭಿವೃದ್ಧಿಯಲ್ಲಿ ವಾಣಿಜ್ಯ ಕೈಗಾರಿಕೆಗಳ ಅಭಿವೃದ್ಧಿಯ ಪಾತ್ರ ಕುರಿತು ವಿಚಾರ ಸಂಕಿರಣ 14ಕ್ಕೆ

 ಈ ಸಂದರ್ಭದಲ್ಲಿ ಸುಮಾರು 3 ದಶಕಗಳಿಂದ ಹೈದರಾಬಾದ ಕರ್ನಾಟಕ ಜನಪರ ಸಂಘರ್ಷ ಸಮಿತಿ ಹೆಸರಿನಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ನಿರಂತರ ಹೋರಾಟ ಮಾಡಿಕೊಂಡು ಬಂದಿರುವುದಲ್ಲದೆ ಹೈ.ಕ. ಪ್ರದೇಶಕ್ಕೆ ಕಲ್ಯಾಣ ಕರ್ನಾಟಕ ನಾಮಕರಣ ಮಾಡಬೇಕೆಂದು ಸರಕಾರದ ಮೇಲೆ ಒತ್ತಾಯಿಸಲಾಗಿತ್ತು.

ಸಮಿತಿಯ ನಿರ್ಧಾರದಂತೆ ನಮ್ಮ ಪ್ರದೇಶದ ಹೆಸರು ಬದಲಾವಣೆಯ ನಂತರ ಸಮಿತಿಯ ಹೆಸರನ್ನು ಬದಲಾಯಿಸಬೇಕೆಂಬ ನಿರ್ಧಾರದಂತೆ ಈಗ ಸಮಿತಿಯ ಹೆಸರು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಎಂದು ಸಮಿತಿಯ ಸರ್ವಾನುಮತದ ನಿರ್ಣಯದಂತೆ ಅಧಿಕೃತವಾಗಿ ನಾಮಕರಣ ಮಾಡಿ ಚಾಲನೆ ನೀಡಲಾಗುವುದು.

ನಿಂಬರ್ಗಾ ಗ್ರಾಮದಲ್ಲಿ ವಿಶೇಷ ಪೂಜೆ ಹಾಗೂ ದೀಪೋತ್ಸವ

ಈ ಮಹತ್ವದ ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಸಮಿತಿಯ ಕ್ರೀಯಾಸದಸ್ಯರು, ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಉದ್ಯೋಗ, ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಪರ ಚಿಂತಕರು, ವ್ಯಾಪಾರಸ್ಥರು, ಸಾಮಾಜಿಕ ಕಳಕಳಿಯ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪರ ಆಯಾ ಕ್ಷೇತ್ರದ ನಾಗರಿಕ ಪ್ರಮುಖರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಮಿತಿ ಮುಖಂಡ ಲಿಂಗರಾಜ ಸಿರಗಾಪೂರ, ಶಿವಲಿಂಗಪ್ಪ ಬಂಡಕ, ಗುರುರಾಜ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here