ಕಸ ಸಂಗ್ರಹಣೆಯ ಬುಟ್ಟಿ ವಿತರಣೆ

0
147

ಕಲಬುರಗಿ: ಸ್ವಚ್ಛ ಸರ್ವೇಕ್ಷಣೆ-2021 ಅಂಗವಾಗಿ ಶುಕ್ರವಾರ ಬೆಳಿಗ್ಗೆ ನಗರದ ವಾರ್ಡ ಸಂಖ್ಯೆ 39 ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಮನೆಯಲ್ಲಿ ಹಸಿ ಮತ್ತು ಒಣ ಕಸ ಬೇರ್ಪಡಿಸಲು ಪ್ಲಾಸ್ಟಿಕ್ ಕಸದ ಬುಟ್ಟಿಗಳನ್ನು ವಾರ್ಡಿನ ಸ್ವಚ್ಛ ಸರ್ವೇಕ್ಷಣದ ಮೇಲ್ವಿಚಾರಣಾಧಿಕಾರಿಯಾಗಿರುವ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ದಯಾನಂದ ಪಾಟೀಲ ವಿತರಿಸಿದರು.

ಕಸದ ಬುಟ್ಟಿ ವಿತರಿಸಿ ಮಾತನಾಡಿದ ಅವರು ಮನೆಯಲ್ಲಿ ಒಣ ಮತ್ತು ಹಸಿ ಕಸ ಪ್ರತ್ಯೇಕವಾಗಿ ಸಂಗ್ರಹಿಸಿ ಪೌರ ಸಿಬ್ಬಂದಿಗೆ ನೀಡುವ ಮೂಲಕ ವೈಜ್ಣಾನಿಕ ಕಸ ವಿಲೇವಾರಿಗೆ ಮತ್ತು ನಗರದ ಸೌಂದರ್ಯೀಕರಣಕ್ಕೆ ಸಾರ್ವಜನಿಕರು ಪಾಲಿಕೆಗೆ ಸಹಕರಿಸಬೇಕು ಎಂದು ದಯಾನಂದ ಪಾಟೀಲ ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ವಿಜಯಕುಮಾರ ಕುಲಕರ್ಣಿ, ಪಾಲಿಕೆಯ ಆರೋಗ್ಯ ನಿರೀಕ್ಷಕ ಬಸವರಾಜ ಕಲಾಲ್, ಆಹಾರ ನಿರೀಕ್ಷಕ ಅಮರೇಶ, ಗೋಪಾಲಕೃಷ್ಣ ಮತ್ತಿತ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here