ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಂಘಟಿತ ಹೋರಾಟವೆ ಪ್ರಬಲ ಅಸ್ತ್ರ : ಲಕ್ಷ್ಮಣ ದಸ್ತಿ

ಕಲಬುರಗಿ: ದೇಶದ ಮತ್ತು ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಪ್ರಸ್ತುತ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಅತಿ ಹಿನ್ನಡೆಯಾಗುತ್ತಿರುವುದು ಖೇದಕರವಾದ ವಿಷಯವಾಗಿದೆ. ನಮ್ಮ ಪ್ರದೇಶದ ಆಯಾ ಪಕ್ಷದ ನಾಯಕರಲ್ಲಿರುವ ಬಿಕ್ಕಟ್ಟು, ಸಂಘಟಿತ ರಾಜಕಿಯ ಒಕ್ಕಟ್ಟಿನ ಇಚ್ಛಾಶಕ್ತಿಯ ಕೊರತೆಯಿಂದ  ಕೇಂದ್ರ ಮತ್ತು ರಾಜ್ಯ ಸರಕಾರಗಳು ದಿವ್ಯ ನಿರ್ಲಕ್ಷ ತೋರುತ್ತಿರುವುದು ೨೦೨೦-೨೦೨೧ ರ ಬಜೆಟ್ ನಿಂದ ಸ್ಪಷ್ಟವಾಗುತ್ತಿದೆ ಇಂತಹ ಸಂದರ್ಭದಲ್ಲಿ ನಮ್ಮ ಭಾಗದ ಅಭಿವೃದ್ಧಿಗೆ ಸಂಘಟಿತ ಹೋರಾಟವೇ ಪ್ರಬಲ ಅಸ್ತ್ರವಾಗಿದೆ ಎಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ತಿಳಿಸಿದರು.

ಇಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಅಲ್ಪ ಸಂಖ್ಯಾತರ ಘಟಕದ ವತಿಯಿಂದ ರಿಂಗ್ ರಸ್ತೆಯ ಮಹಮ್ಮದ ರಫಿ ಚೌಕನ ಅಲ್ತಮಶ್ ಸಭಾಂಗಣದಲ್ಲಿ  ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಯಲ್ಲಿ ಹೆಚ್.ಕೆ.ಸಿ.ಸಿ.ಐ. ಪಾತ್ರದ ಕುರಿತು ಏರ್ಪಡಿಸಿದ ಚಿಂತನೆಯಲ್ಲಿ ಮಾತನಾಡಿದ ಅವರು ಸಂಘ ಸಂಸ್ಥೆಗಳಲ್ಲಿ ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ತನ್ನದೇ ಆದ ಇತಿಹಾಸದಿಂದ ಬೆಳೆದು ಬಂದಿದೆ.

ಇಂಗ್ಲೀಷ್ ನಾಮಫಲಕ ತೆರವಿಗೆ ಕಸಾಪ ಆಗ್ರಹ

ಪ್ರಸ್ತುತ ಸಂಸ್ಥೆಯ ಪದಾಧಿಕಾರಿಗಳ ಮತ್ತು ಆಡಳಿತ ಮಂಡಳಿಯ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ, ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ತೊಡಗಿಸಿಕೊಳ್ಳುವ ಪ್ರಗತಿಪರ ಹೋರಾಟ ಮನೋಭಾವನೆಯ ವ್ಯಕ್ತಿಗಳಿಗೆ ಆಯ್ಕೆ ಮಾಡಲು ಕರೆ ನೀಡಿದರು. ಮುಂದುವರೆದು ಮಾತನಾಡಿದ ಅವರು ಸಮಿತಿಯ ಪದಾಧಿಕಾರಿಯಾದ ಮನೀಷ್ ಜಾಜು, ಯುವ ಚಿಂತಕ ನಿಜಾಮೊದ್ದೀನ್ ಚಿಸ್ತಿ ಸೇರಿದಂತೆ ಸಂಸ್ಥೆಗೆ ಸ್ಪರ್ಧಿಸಿರುವ ಯುವ ಹೋರಾಟ ಮನೋಭಾವನೆಯ ವ್ಯಕ್ತಿಗಳನ್ನು ಪದಾಧಿಕಾರಿಗಳ ಸ್ಥಾನಕ್ಕೆ ಮತ್ತು ಆಡಳಿತ ಮಂಡಳಿ ಸ್ಥಾನಕ್ಕೆ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಮಿತಿಯ ಮಹಾಪ್ರಧಾನ ಕಾರ್ಯದರ್ಶಿಗಳು ಮತ್ತು ಪ್ರಸ್ತುತ ಹೆಚ್.ಕೆ.ಸಿ.ಸಿ.ಐ. ಸಂಸ್ಥೆಯ ಆಡಳಿತ ಮಂಡಳಿಯ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿ ಮನೀಷ್ ಜಾಜು ಅವರು ಮಾತನಾಡಿ ತಾವು ಸುಮಾರು ಎರಡು ದಶಕಗಳ ವರೆಗೆ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಪರ ಅನೇಕ ಹೋರಾಟಗಳಿಗೆ ತೊಡಗಿಸಿ ಕೊಂಡಿದ್ದು, ಅದರಂತೆ ನಮ್ಮ ಭಾಗದ ಹೋರಾಟಕ್ಕೆ ಪೂರಕವಾಗುವ ದೃಷ್ಟಿಯಿಂದ ಎಚ್.ಕೆ.ಸಿ.ಸಿ.ಐ. ಆಡಳಿತ ಮಂಡಳಿಯ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದು, ಸಂಸ್ಥೆಯ ಸದಸ್ಯರು ತಮಗೆ ಆಶೀರ್ವದಿಸಿ ಆಯ್ಕೆ ಮಾಡಲು ವಿನಂತಿಸಿದರು.

ಡಿ.ಕೆ.ಶಿವಕುಮಾರಗೆ ಯುವ ಮುಖಂಡ ಆರಿಫ್ ಮೋಮಿನ್ ಸನ್ಮಾನ

ಹಿರಿಯ ವಾಣಿಜ್ಯೋದ್ಯಮಿ  ಜಬ್ಬಾರ ಗೋಲಾರವರು ಮಾತನಾಡಿ, ಎಚ್.ಕೆ.ಸಿ.ಸಿ.ಐ. ತನ್ನ ಮೂಲ ಉದ್ದೇಶ ವ್ಯಾಪಾರಿಗಳ ಹಿತರಕ್ಷಣೆ, ಮತ್ತು ಕಲ್ಯಾಣ ಕರ್ನಾಟಕದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಕ್ಷೇತ್ರದ ಅಭಿವೃದ್ಧಿಯ ವಿಷಯಗಳನ್ನು ಮರೆತು ಕೆಲವು ಜನ ಇದನ್ನು ರಾಜಕೀಯ ವೇದಿಕೆಯನ್ನಾಗಿ ಮಾದಿಕೊಳ್ಳುತ್ತಿರುವುದು ಖೇದಕರವಾದ ವಿಷಯವಾಗಿದೆ. ಇಂತಹ ಮನೋಭಾವನೆಯ ವ್ಯಕ್ತಿಗಳಿಗೆ ಪ್ರಸ್ತುತ ಚುನಾವಣೆಯಲ್ಲಿ ಸಂಸ್ಥೆಗೆ ಆಯ್ಕೆ ಮಾಡದೇ ತಿರಸ್ಕರಿಸಿ ಪ್ರಗತಿಪರ ಮನೋಭಾವನೆಯ ವ್ಯಕ್ತಿಗಳು ಯಾವುದೇ ಜಾತಿ, ಧರ್ಮ ದವರಿರಲಿ ಅವರು ಈ ಭಾಗದ ಅಭಿವೃದ್ಧಿಪರ ಚಿಂತನೆ ಇರುವವರನ್ನು ಆಯ್ಕೆ ಮಾಡಿ ಎಚ್.ಕೆ.ಸಿ.ಸಿ.ಐ. ಸಂಸ್ಥೆಯ ಘನತೆಯನ್ನು ಹುಬ್ಬಳ್ಳಿ, ಧಾರವಾಡ, ಬೆಂಗಳೂರಿನ ಸಂಸ್ಥೆಗಳಿಗೆ ಸಮಾನಾಂತರವಾಗಿ ಬೆಳೆಸಲು ಕೋರಿದರು.

ಇದೇ ಸಂದರ್ಭದಲ್ಲಿ ಹೆಚ್.ಕೆ.ಸಿ.ಸಿ.ಐ. ಗೆ ಮೊಫಸಿಲ್ ಕ್ಷೇತ್ರದ ಆಡಳಿತ ಮಂಡಳಿಯ ಸ್ಥಾನಕ್ಕೆ ಸ್ಪರ್ಧಿಸಿದ ಸೈಯ್ಯದ ನಿಜಾಮೊದ್ದಿನ ಚಿಸ್ತಿಯವರು ಮಾತನಾಡಿ  ನಮ್ಮ ಭಾಗದಲ್ಲಿ ಪಕ್ಷಾತೀತ ಸಂಘಟನೆಯಾದ ಹೆಚ್.ಕೆ.ಸಿ.ಸಿ.ಐ. ಸಂಸ್ಥೆಯಿಂದ ಅಲ್ಪ ಸಂಖ್ಯಾತರಿಗೂ ಸೇವೆ ಮಾಡಲು ಅವಕಾಶ ನೀಡಬೇಕೆಂದು ಕೋರಿ ತಮ್ಮನ್ನು ಎಲ್ಲಾ ಕ್ಷೇತ್ರದ ಸಂಸ್ಥೆಯ ಸದಸ್ಯರು ಬೆಂಬಲಿ ಗೆಲ್ಲಿಸಬೇಕೆಂದು ಮನವಿ ಮಾಡಿಕೊಂಡರು.

ಹಾಳಾದ ರಸ್ತೆ ರಿಪೇರಿ ಮಾಡಿ ಪುಣ್ಯ ಕಟಗೋಳ್ರಿ!

ಈ ಸಂದರ್ಭದಲ್ಲಿ ಮುಖಂಡರುಗಳಾದ ಮೌಲಾನಾ ನುಹೂ, ಲಿಂಗರಾಜ ಸಿರಗಾಪೂರ, ಮಜರ್ ಹುಸೇನ್, ಶಬೊದ್ದೀನ್ ಅಡ್ವೊಕೇಟ್, ಸಾಜಿದ ಅಲಿ ರಂಜೋಲಿ, ಬಾಬಾ ಫಕ್ರೋದ್ದೀನ್, ಎಚ್.ಎಂ.ಹಾಜಿ, ಅಸ್ಲಂ ಚೌಂಗೆ, ಶಕೀಲ ಸರಡಗಿ, ಅಯೋಜಿದ್ದೀನ್ ಪಟೇಲ್, ಡಾ. ಅಬ್ದುಲ ಕರೀಮ್, ರುಕ್ಸಾನಾ ಜುಬೇರ್, ಮೊದಿನ್ ಪಟೇಲ ಅಣಬಿ, ಅಯೂಬ ಪಟೇಲ್, ಮಹ್ಮದ ಇಸ್ಮಾಯಿಲ್, ಮುನ್ನಿ ಬೇಗಂ, ಮಹ್ಮದ ಮಿರಾಜೊದ್ದೀನ್, ಮಕ್ಬೂಲ ಪಟೇಲ್, ಮೈನೋದ್ದೀನ್, ಮಹ್ಮದ ಅಲಿ, ಸಿರಾಜೊದ್ದೀನ್ ಮಾತನಾಡಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಜನಪರ ಸಂಘರ್ಷ ಸಮಿತಿ ಮೂರು ದಶಕಗಳಿಂದ ತನ್ನದೇ ಆದ ಛಾಪು ಮೂಡಿಸಿಕೊಂಡು ಬಂದಿದೆ.

ಅಷ್ಟೇ ಅಲ್ಲದೆ ಪಕ್ಷಾತೀತ, ಧರ್ಮಾತೀತವಾಗಿ ಜಾತ್ಯತೀತವಗಿ, ವರ್ಗಾತೀತವಾಗಿ ಶುದ್ಧ ರಾಜಕಿಯೇತರ ತಳಹದಿಯ ಮೇಲೆ ತನ್ನ ದಿಟ್ಟತನದ ನಿಲುವಿನಿಂದ ಸರಕಾರದ ಕಣ್ಣು ತೆರೆಸಿರುವುದಲ್ಲದೆ ಎಲ್ಲಾ ಪಕ್ಷಗಳ ಸಂಘಟನೆಗಳ ಮತ್ತು ಜನಮಾನಸದಲ್ಲಿ ಮನೆ ಮಾಡಿದೆ. ಸಮಿತಿಯ ಧೋರಣೆಗೆ ಮತ್ತು ಕರೆಗೆ ತಾವೆಲ್ಲರೂ ಬದ್ಧವಾಗಿರುವುದಾಗಿ ಮುಖಂಡಾರು ತಮ್ಮ ಭಾಷಣದಲ್ಲಿ ವಿವರಿಸಿದದರು.

ಇಂಗ್ಲೀಷ್ ನಾಮಫಲಕ ತೆರವಿಗೆ ಕಸಾಪ ಆಗ್ರಹ

ಈ ಸಂದರ್ಭದಲ್ಲಿ ನೂರಾರು ಜನ ಸಮಿತಿಯ ಸದಸ್ಯರು ಮತ್ತು ಎಚ್.ಕೆ.ಸಿ.ಸಿ.ಐ. ಸದಸ್ಯರು ಭಾಗವಹಿಸಿದರು ಎಂದು ಸಮಿತಿಯ ಅಲ್ಪ ಸಂಖ್ಯಾತರ ಘಟಕದ ಮುಖಂಡರಾದ ಅಸ್ಲಂ ಚೌಂಗೆ, ಸಾಜಿದ ಅಲಿ ರಂಜೋಲಿ ಮಾತನಾಡಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

20 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago