ಮೀಸಲಾತಿ ಪರಮರ್ಶಿಸುವ “ಉನ್ನತ ಮಟ್ಟದ ಸಮಿತಿ” ರದ್ದುಪಡಿಸಂತೆ ಆಗ್ರಹ

ಬೆಂಗಳೂರು: ಮಾ. 10 ರ ಸರಕಾರದ ಆದೇಶ ಸಂಖ್ಯೆ:ಸಕಇ 84 ಎಸ್‌ಟಿಪಿ 2021, ಬೆಂಗಳೂರು ಸಚಿವ ಸಂಪುಟದ ನಿರ್ಣಯದಂತೆ ಮೀಸಲಾತಿ ಕುರಿತು ಪರಿಶೀಲನೆ ನಡೆಸಲು ರಚಿಸಿರುವ ಉನ್ನತ ಮಟ್ಟದ ಸಮಿತಿ ಅಸಂವಿಧಾನಿಕವಾಗಿದ್ದು, ಯಾವದೇ ಸಾಂವಿಧಾನಿಕ ಮಾನ್ಯತೆ ಇಲ್ಲದೇ ಇರುವ ಈ ಸಮಿತಿಯನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಆಗ್ರಹಿಸಿ ಇಂದು ಗೃಹ ಮಂತ್ರಿ ಬಸವರಾಜ್‌ ಬೊಮ್ಮಾಯಿ ಹಾಗೂ ಮುಖ್ಯಕಾರ್ಯದರ್ಶಿ ಅವರಿಗೆ ಮನವಿಯನ್ನು ಸಲ್ಲಿಸಿದೆ.

ವೇದಿಕೆಯ ಗೌರವಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರ ನೇತೃತ್ವದಲ್ಲಿ ಸಚಿವರು ಹಾಗೂ ಮುಖ್ಯಕಾರ್ಯದರ್ಶಿಗಳನ್ನು ಭೇಟಿಯಾದ ನಿಯೋಗ, ಭಾರತ ದೇಶದ ಸಂವಿಧಾನದಲ್ಲಿ ಡಾ.ಅಂಬೇಡ್ಕರ್ ರವರ ಆಶಯದಂತೆ ಮೀಸಲಾತಿಯನ್ನು ಅಳವಡಿಸಿಕೊಳ್ಳಲಾಗಿದೆ. ಪ್ರಾತಿನಿದ್ಯವೇ ಇಲ್ಲದ ಹಿಂದುಳಿದ ವರ್ಗಗಳ ಜನರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಅಭಿವೃದ್ದಿಗೊಳ್ಳಲು ಅವಕಾಶ ನೀಡುವ ಸದುದ್ದೇಶ ಇದರ ಹಿಂದೆ ಇದೆ. ಆದರೆ, ಸಂವಿಧಾನದ ಮೂಲಕ ದತ್ತವಾಗಿರುವ ಮೀಸಲಾತಿಯನ್ನೇ ಪರಿಶೀಲನೆ ಮಾಡಲು ಕರ್ನಾಟಕ ರಾಜ್ಯ ಸರಕಾರ ಹೊರಟಿದ್ದು, ಸಂವಿಧಾನದಲ್ಲಿ ಅಡಕವಾಗಿರುವ ಅಂಶಗಳನ್ನು ಪರಾಮರ್ಶಿಸುವಂತಹ ಸಮಿತಿಯನ್ನು ರಚಿಸುವಂತಹ ಕ್ರಮಕ್ಕೆ ಯಾವ ಕಾನೂನು ಅವಕಾಶ ನೀಡಿದೆ?.

ಸ್ತ್ರೀಶಕ್ತಿ ಗುಂಪುಗಳ ಸದಸ್ಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ

ಸಂವಿಧಾನದ ಆಶಯದೊಂದಿಗೆ ಸರ್ವೊಚ್ಚ ನ್ಯಾಯಾಲಯದ ಸಂವಿದಾನಿಕ ಪೀಠ ‘ಇಂದ್ರಾ ಸಾಹ್ನಿ vs ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲಿ ನೀಡಿರುವ ತೀರ್ಪಿನಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸುವಂತೆ ಆದೇಶ ನೀಡಿದೆ. ಇದರ ಆಧಾರದ ಮೇಲೆ ರಚನೆ ಮಾಡಲಾಗಿರುವ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಈಗಾಗಲೇ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಸಂಧರ್ಭದಲ್ಲಿ ಈ ಆಯೋಗ ರಾಜ್ಯದಲ್ಲಿರುವ ಜಾತಿವರ್ಗಗಳನ್ನು ಪರಾಮರ್ಶಿಸುವ‌ ಅಧಿಕಾರ ಉಳ್ಳದ್ದಾಗಿದ್ದೂ ಮೀಸಲಾತಿ ಪರಾಮರ್ಶಿಸುವ ಕುರಿತು ಇನ್ನೊಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಿರುವುದು ಸಂವಿದಾನಬದ್ದವೆ ಎಂದು ಪ್ರಶ್ನಿಸಿದರು.

ವೇದಿಕೆಯ ಅಧ್ಯಕ್ಷ ಎಂ.ಸಿ ವೇಣುಗೋಪಾಲ್‌ ಮಾತನಾಡಿ, ಮೀಸಲಾತಿ ಪರಾಮರ್ಶಿಸುವ ಕುರಿತು ಉನ್ನತ ಮಟ್ಟದ ಸಮಿತಿಗೆ ಯಾವುದೇ (ಮೇಲಿನ ಸಂಖ್ಯೆಯ ಆದೇಶ ಪತ್ರದಂತೆ) ಯಾವುದೇ ನಿರ್ದಿಷ್ಟ ಮಾನದಂಡಗಳನ್ನು ಕೂಡ (TERMS OF REFERENCE) ನೀಡಲಾಗಿಲ್ಲ! ಯಾವುದೇ ನಿರ್ದಿಷ್ಟ ಮಾನದಂಡಗಳನ್ನು ನೀಡದೇ ಇರುವ ಮೂಲಕ ಕಾರ್ಯವ್ಯಾಪ್ತಿಯ ಚೌಕಟ್ಟನ್ನು ನೀಡದೇ ಇರುವುದು ಅನೇಕ ರೀತಿಯ ಅನುಮಾನಗಳಿಗೆ ಕಾರಣವಾಗುತ್ತದೆ. ಹಾಗೂ ಯಾವುದೇ ಕಾರ್ಯವ್ಯಾಪ್ತಿ ಇಲ್ಲದೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಿರುವುದು ಕಾನೂನು ಬಾಹಿರವಲ್ಲವೆ.?

ಬುಡಕಟ್ಟು ಜನಾಂಗಕ್ಕೆ ಸರ್ಕಾರದ ಯೋಜನೆಗಳ ಅರಿವು-ನೆರವು ಕಾರ್ಯಕ್ರಮ

ಪರಿಶಿಷ್ಟ ಪಂಗಡಕ್ಕೆ ಸೇರಿದ ಶ್ರೀಮತಿ ಕೆ. ರತ್ನಪ್ರಭ, ಭಾ.ಆ.ಸೇ (ನಿ) ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ ಸರಕಾರ. ಇವರು ತಮ್ಮ ನಿವೃತ್ತಿಯ ನಂತರ ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದಾರೆ. ಮೂರನೇ ಸದಸ್ಯರಾಗಿ ಮಹಾರಾಣಿ ಕಲಾ ಕಾಲೇಜು, ಮೈಸೂರು ಸಹ ಪ್ರಾಧ್ಯಾಪಕರೆಂದು ಹೇಳಲಾದ ಡಾ.ಬಿ.ವಿ. ವಸಂತಕುಮಾರ್‌ ಕೂಡಾ ಬಿಜೆಪಿ ಪರ ಮನಸ್ಥಿತಿ ಹೊಂದಿರುವವರಾಗಿದ್ದಾರೆ. ಅವರು ಪಕ್ಷದ ಅಣತಿಯಂತೆ ನಡೆದುಕೊಳ್ಳುತ್ತಾರೆಯೇ ಹೊರತು ಅತಿ ಹಿಂದುಳಿದ ಜಾತಿಗಳ ಬಗ್ಗೆ ಪೂರ್ವಗ್ರಹವಿಲ್ಲದೆ ನ್ಯಾಯಯುತವಾದ ನಿರ್ಧಾರ ತಗೆದುಕೊಳ್ಳುತ್ತಾರೆ ಎನ್ನುವ ನಂಬಿಕೆ ನಮಗೆ ಹೇಗೆ ಬರಲು ಸಾದ್ಯ ಎಂದು ಹೇಳಿದರು.

ಈ ಎಲ್ಲಾ ಅಂಶಗಳ ಹಿನ್ನಲೆಯಲ್ಲಿ ಯಾವುದೇ ಕಾನೂನಿನ ಪಾವಿತ್ರತೆ ಇಲ್ಲದ, ಕೇವಲ ರಾಜಕೀಯ ಕಾರಣಕ್ಕೆ ಪೂರ್ವಾಗ್ರಹದಿಂದ ಮಾಡಲಾಗಿರುವ ಸದರಿ ಉನ್ನತ ಮಟ್ಟದ ಸಮಿತಿಯನ್ನು ನಾವು ಒಪ್ಪಿಕೊಳ್ಳಲು ಸಾದ್ಯವೆ ಇಲ್ಲ. ಇದರಿಂದ ನಮ್ಮ ಹಿತಾಸಕ್ತಿಗೆ ಧಕ್ಕೆ ಉಂಟಾಗುವ ಆತಂಕ ನಮಗಿದೆ. ಈ ಹಿನ್ನೆಲೆಯಲ್ಲಿ ಮೀಸಲಾತಿ ಪರಾಮರ್ಶಿಸುವ ಕುರಿತು ಉನ್ನತ ಮಟ್ಟದ ಸಮಿತಿಯನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದರು.

ವಾಡಿಯಲ್ಲಿ ಸಾರ್ವಜನಿಕರಿಗೆ ಖುರಾನ್ ಉಚಿತ ವಿತರಣೆ

ನಿಯೋಗದಲ್ಲಿ ವೇದಿಕೆಯ ಉಪಾಧ್ಯಕ್ಷರಾದ ಪಿ.ಆರ್‌ ರಮೇಶ್‌, ಡಾ.ಜಿ. ರಮೇಶ್‌, ಹೆಚ್‌ ಸುಬ್ಬಣ್ಣ, ಕಾರ್ಯಕಾರಿ ಸಮಿತಿ ಸದಸ್ಯರಾರದ ಜಿ.ಡಿ ಗೋಪಾಲ್‌, ಹೆಚ್‌ ಸಿ ರುದ್ರಪ್ಪ, ಟಿ.ಸಿ ನಟರಾಜ್‌, ಎಂ.ಬಿ ಬಸವರಾಜ್‌, ವಿಧಾನ ಪರಿಷತ್‌ ಸದಸ್ಯ ಕೆ.ಪಿ ನಂಜುಂಡಿ ಉಪಸ್ಥಿತರಿದ್ದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

4 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

15 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

15 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

17 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

17 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

17 hours ago