ಬಿಸಿ ಬಿಸಿ ಸುದ್ದಿ

ಸನ್ಮಯ ರುದ್ರವಾಡಿ ಅಮೋಘ ಶತಕ, ಕಲಬುರಗಿಗೆ ಭರ್ಜರಿ ಗೆಲುವು

ಕಲಬುರಗಿ: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯಿಂದ ಅಂಡರ್ -16 ರಾಜ್ಯ ತಂಡದ ಆಯ್ಕೆಗಾಗಿ ಇಲ್ಲಿನ ಖಾಜಾ ಬಂದೆ‌ನವಾಜ್ ಟರ್ಫ್ ಮೈದಾನದಲ್ಲಿ‌ ಶುಕ್ರವಾರ ನಡೆದ 50 ಓವರ್ ಗಳ ಸೀಮಿತ ಪಂದ್ಯದಲ್ಲಿ ಸನ್ಮಯ ರುದ್ರವಾಡಿ ಅವರ ಭರ್ಜರಿ ಶಕತದ ನೆರವಿನಿಂದ ಬಾಗಲಕೋಟೆ ತಂಡದ ವಿರುದ್ಧದ ಪಂದ್ಯದಲ್ಲಿ ಕಲಬುರಗಿ ತಂಡ ಭರ್ಜರಿ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಅಯ್ದುಕೊಂಡ ಬಾಗಲಕೋಟೆ ತಂಡದ ನಾಯಕ ಪ್ರಭು ಸೊಸಾಲಟ್ಟಿ ಕಲಬುರಗಿ ತಂಡಕ್ಕೆ ಮೊದಲು ಬ್ಯಾಟ್ ಮಾಡಲು ಅವಕಾಶ ನೀಡಿದರು. ಅದರಂತೆ ಕಲಬುರಗಿ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟದೊಂದಿಗೆ 280 ರನ್ ಗಳಿಸಿ ಎದುರಾಳಿ ತಂಡಕ್ಕೆ ಬೃಹತ್ ಮೊತ್ತದ ಸವಾಲು ಒಡ್ಡಿತು.

ಮದ್ಯ ಸೇವನೆಗೆ ಹಣ ಕೊಡಲಿಲ್ಲ ಎಂದು ಹೆತ್ತ ತಾಯಿ ಮೇಲೆ ಕಲ್ಲು ಹಾಕಿ ಹತ್ಯೆ

ಆರಂಭಿಕ ಅಟಗಾರನಾಗಿ ಕಣಕ್ಕಿಳಿದ ಕಲಬುರಗಿಯ ಯುವಕ ಸನ್ಮಯ ರುದ್ರವಾಡಿ ಅವರು 14 ಬೌಂಡರಿ, 4 ಸಿಕ್ಸರ್ ಸಿಡಿಸುವುದದೊಂದಿಗೆ ಅಮೋಘ ಶತಕ ಬಾರಿಸಿ ಪ್ರೇಕ್ಷಕರ‌ ಚಪ್ಪಾಳೆ ಗಿಟ್ಟಿಸಿದರು. ಪರಿಣಾಮ ಕಲಬುರಗಿ ತಂಡ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಯಿತು.147 ಎಸೆತದಲ್ಲಿ 128 ರನ್ ಗಳಿಸಿದ ಸನ್ಮಯ ರುದ್ರವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ತಂಡದ ಮತ್ತೋರ್ವ ಬ್ಯಾಟ್ಸ್ ಮೆನ್ ಸುಹಾಸ ಮಾಲಿಪಾಟೀಲ ಅವರೊಂದಿಗೆ 100 ಕ್ಕೂ ಹೆಚ್ಚಿನ ರನ್ ಗಳ ಜೊತೆಯಾಟವು ಹೆಚ್ಚಿನ ರನ್‌ ಪೇರಿಸಲು ಸಹಾಯವಾಯಿತು.

ಕಲಬುರಗಿ ತಂಡದ ಬೃಹತ್ ಮೊತ್ತ‌ ಬೆನ್ನತ್ತಿದ ಬಾಗಲಕೋಟೆ ತಂಡ 24.2 ಓವರ್ ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 85 ರನ್ ಮಾತ್ರ ಗಳಿಸಲು ಸಾಧ್ಯವಾಯಿತು. ಕಲಬುರಗಿ ತಂಡದ ಬೌಲರ್ ಗಳ ಮಾರಕ ದಾಳಿ ಬಾಗಲಕೋಟೆ ತಂಡವನ್ನು ಎರಡಂಕಿಗೆ ಕಟ್ಟಿಹಾಕಿತು. ಅಂತಿಮವಾಗಿ 195 ರನ್ ಗಳೊಂದಿಗೆ ಲಕ್ಷ್ಮೀಕಾಂತ ಸೂರ್ಯವಂಶಿ ಅವರ ನಾಯಕತ್ವದ ಕಲಬುರಗಿ ತಂಡ ಗೆಲುವಿನ ನಗೆ ಬೀರಿತು.

ಕೋವಿಡ್ ಹಿನ್ನೆಲೆ: ಡಿ.ಸಿ. ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮುಂದೂಡಿಕೆ

ರುದ್ರವಾಡಿಗೆ ಮ್ಯಾನ್ ಆಪ್ ದಿ‌ ಮ್ಯಾಚ್: ಅಮೋಘ ಶತಕದಿಂದ ಕಲಬುರಗಿ ತಂಡದ ಗೆಲುವಿಗೆ ಕಾರಣರಾದ ಸನ್ಮಯ ರುದ್ರವಾಡಿ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ಘೋಷಿಸಿ ಪಂದ್ಯದ ನಂತರ‌ ಮೆಡೆಲ್‌ ನೀಡಿ ಗೌರವಿಸಲಾಯಿತು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

12 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

22 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

22 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

22 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago