ಕಲಬುರಗಿ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಅಂಡರ್ -16 ರಾಜ್ಯ ತಂಡದ ಆಯ್ಕೆಗಾಗಿ ಇಲ್ಲಿನ ಖಾಜಾ ಬಂದೆನವಾಜ್ ಟರ್ಫ್ ಮೈದಾನದಲ್ಲಿ ಶುಕ್ರವಾರ ನಡೆದ 50 ಓವರ್ ಗಳ ಸೀಮಿತ ಪಂದ್ಯದಲ್ಲಿ ಸನ್ಮಯ ರುದ್ರವಾಡಿ ಅವರ ಭರ್ಜರಿ ಶಕತದ ನೆರವಿನಿಂದ ಬಾಗಲಕೋಟೆ ತಂಡದ ವಿರುದ್ಧದ ಪಂದ್ಯದಲ್ಲಿ ಕಲಬುರಗಿ ತಂಡ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಅಯ್ದುಕೊಂಡ ಬಾಗಲಕೋಟೆ ತಂಡದ ನಾಯಕ ಪ್ರಭು ಸೊಸಾಲಟ್ಟಿ ಕಲಬುರಗಿ ತಂಡಕ್ಕೆ ಮೊದಲು ಬ್ಯಾಟ್ ಮಾಡಲು ಅವಕಾಶ ನೀಡಿದರು. ಅದರಂತೆ ಕಲಬುರಗಿ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟದೊಂದಿಗೆ 280 ರನ್ ಗಳಿಸಿ ಎದುರಾಳಿ ತಂಡಕ್ಕೆ ಬೃಹತ್ ಮೊತ್ತದ ಸವಾಲು ಒಡ್ಡಿತು.
ಮದ್ಯ ಸೇವನೆಗೆ ಹಣ ಕೊಡಲಿಲ್ಲ ಎಂದು ಹೆತ್ತ ತಾಯಿ ಮೇಲೆ ಕಲ್ಲು ಹಾಕಿ ಹತ್ಯೆ
ಆರಂಭಿಕ ಅಟಗಾರನಾಗಿ ಕಣಕ್ಕಿಳಿದ ಕಲಬುರಗಿಯ ಯುವಕ ಸನ್ಮಯ ರುದ್ರವಾಡಿ ಅವರು 14 ಬೌಂಡರಿ, 4 ಸಿಕ್ಸರ್ ಸಿಡಿಸುವುದದೊಂದಿಗೆ ಅಮೋಘ ಶತಕ ಬಾರಿಸಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು. ಪರಿಣಾಮ ಕಲಬುರಗಿ ತಂಡ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಯಿತು.147 ಎಸೆತದಲ್ಲಿ 128 ರನ್ ಗಳಿಸಿದ ಸನ್ಮಯ ರುದ್ರವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ತಂಡದ ಮತ್ತೋರ್ವ ಬ್ಯಾಟ್ಸ್ ಮೆನ್ ಸುಹಾಸ ಮಾಲಿಪಾಟೀಲ ಅವರೊಂದಿಗೆ 100 ಕ್ಕೂ ಹೆಚ್ಚಿನ ರನ್ ಗಳ ಜೊತೆಯಾಟವು ಹೆಚ್ಚಿನ ರನ್ ಪೇರಿಸಲು ಸಹಾಯವಾಯಿತು.
ಕಲಬುರಗಿ ತಂಡದ ಬೃಹತ್ ಮೊತ್ತ ಬೆನ್ನತ್ತಿದ ಬಾಗಲಕೋಟೆ ತಂಡ 24.2 ಓವರ್ ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 85 ರನ್ ಮಾತ್ರ ಗಳಿಸಲು ಸಾಧ್ಯವಾಯಿತು. ಕಲಬುರಗಿ ತಂಡದ ಬೌಲರ್ ಗಳ ಮಾರಕ ದಾಳಿ ಬಾಗಲಕೋಟೆ ತಂಡವನ್ನು ಎರಡಂಕಿಗೆ ಕಟ್ಟಿಹಾಕಿತು. ಅಂತಿಮವಾಗಿ 195 ರನ್ ಗಳೊಂದಿಗೆ ಲಕ್ಷ್ಮೀಕಾಂತ ಸೂರ್ಯವಂಶಿ ಅವರ ನಾಯಕತ್ವದ ಕಲಬುರಗಿ ತಂಡ ಗೆಲುವಿನ ನಗೆ ಬೀರಿತು.
ಕೋವಿಡ್ ಹಿನ್ನೆಲೆ: ಡಿ.ಸಿ. ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮುಂದೂಡಿಕೆ
ರುದ್ರವಾಡಿಗೆ ಮ್ಯಾನ್ ಆಪ್ ದಿ ಮ್ಯಾಚ್: ಅಮೋಘ ಶತಕದಿಂದ ಕಲಬುರಗಿ ತಂಡದ ಗೆಲುವಿಗೆ ಕಾರಣರಾದ ಸನ್ಮಯ ರುದ್ರವಾಡಿ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ಘೋಷಿಸಿ ಪಂದ್ಯದ ನಂತರ ಮೆಡೆಲ್ ನೀಡಿ ಗೌರವಿಸಲಾಯಿತು.