ಶಹಾಬಾದ: ಗ್ರಾಮದ ಜನರ ಸಾರಿಗೆ ಸೌಲಭ್ಯದ ಕನಸು ನನಸಾಗಿದೆ. ಸಾರಿಗೆ ಸೌಲಭ್ಯವಿಲ್ಲದೇ ಪರಿತಪಿಸುತ್ತಿದ್ದ ಮುತ್ತಗಾ ಗ್ರಾಮಕ್ಕೆ ಸೋಮವಾರ ಸಾರಿಗೆ ಬಸ್ ಬಂದಾಗ, ಗ್ರಾಮಸ್ಥರು ಬಸ್‌ಗೆ ಪೂಜೆ ಸಲ್ಲಿಸುವುದರ ಮೂಲಕ ಸಂಚಾರಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಚಿತ್ತಾಪುರ ತಾಲೂಕಿನ ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೋರಿ, ದಶಕಗಳಿಂದ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದೇ ಇರುವುದರಿಂದ ಜನರು ಸಮೀಪದ ಭಂಕೂರ ಗ್ರಾಮಕ್ಕೆ ನಡೆದುಕೊಂಡು ಅಥವಾ ಟಂಟಂ ಮೂಲಕ ಹೋಗಬೇಕಾಗಿತ್ತು.ಅಲ್ಲಿಂದ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾದರೆ ಬಹಳ ತಡವಾಗುತ್ತಿತ್ತು.ಇದರಿಂದ ಜನರಿಗೂ ಹಾಗೂ ಗ್ರಾಮದ ವಿದ್ಯಾರ್ಥಿಗಳಿಗೂ ತೊಂದರೆಯುಂಟಾಗುತ್ತಿತ್ತು.
ಗೋಪಲಪುರ ಚರ್ಚ್ ನಲ್ಲಿ ಜೋಸೆಫರ ಹಬ್ಬ ಶ್ರದ್ಧಾ ಭಕ್ತಿಯಿಂದ ಆಚರಣೆ
ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಬೇಟಿ ಮಾಡಿ ಗ್ರಾಮಕ್ಕೆ ಬಸ್ ಸೇವೆ ಪ್ರಾರಂಭ ಮಾಡಬೇಕೆಂದು ಮನವಿ ಸಲ್ಲಸಿದ್ದೆವು.ಅದಕ್ಕೆ ಅಧಿಕಾರಿಗಳು ಸ್ಪಂದಿಸಿ ಕಲಬುರಗಿಯಿಂದ ವಾಯಾ ನಂದೂರ ಮಾರ್ಗವಾಗಿ ಮುಗಳನಾಗಾವ,ಪೇಠಸಿರೂರ,ಕಾಟಮ್ಮದೇವರ ಹಳ್ಳಿ ಮೂಲಕ ಮುತ್ತಗಾ ಬಸ್ ಸೇವೆ ಒದಗಿಸಿದ್ದಾರೆ.ಇದರಿಂದ ಹಲವು ಗ್ರಾಮಸ್ಥರಿಗೆ ಅನುಕುಲವಾಗಲಿದೆ.ಅಲ್ಲದೇ ಮುತ್ತಾಗಾ ಗ್ರಾಮದಿಂದ ಬೆಳಿಗ್ಗೆ ೬ ಗಂಟೆಗೆ, ೮:೩೦ ಗಂಟೆಗೆ, ಮಧ್ಯಾನ ೧೧:೩೦ಕ್ಕೆ ಮತ್ತು ೩:೩೦ ಹಾಗೂ ಸಂಜೆ ೮.೩೦ಕ್ಕೆ ಬಸ್ ಸೇವೆ ಒದಗಿಸಿದ್ದಾರೆ ಎಂದು ಹೇಳಿದರು.
ನಂತರ ಬಸ್ಸಿಗೆ ಪೂಜೆ ಸಲ್ಲಿಸಿ, ಚಾಲಕ ಹಾಗೂ ನಿರ್ವಾಹಕನಿಗೆ ಸನ್ಮಾನಿಸಿದರು.ಎಸ್‌ಡಿಎಂಸಿ ಅಧ್ಯಕ್ಷ ಕಂಟೆಪ್ಪ ಹೊನಗುಂಟ, ಗುರಲಿಂಗಯ್ಯ ಮಠಪತಿ, ಬಸವರಾಜ ಮಾವೂರ, ಸುಧಾಕರ ರಮಗುಂಡ, ಲಾಡ್ಲೆ ಪಟೇಲ, ನೂರಕಾನ, ರಷೀದ ಪಟೇಲ, ದ್ಯಾವಣ್ಣ ಪಟ್ಟೇದಾರ, ಶರಣಪ್ಪ ಮಾಲಾಗತ್ತಿ, ಬಸವರಾಜ ರಮಗುಂಡ, ಪ್ರಭು ಜಡಗಿ, ಶರಣಪ್ಪ ಬೈರಿ, ಕೆಂಚಪ್ಪ ಪೂಜಾರಿ, ಅಶೋಕ ರಮಗುಂಡ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…