ಗೋಪಲಪುರ ಚರ್ಚ್ ನಲ್ಲಿ ಜೋಸೆಫರ ಹಬ್ಬ ಶ್ರದ್ಧಾ ಭಕ್ತಿಯಿಂದ ಆಚರಣೆ

1
55

ಕೊಡಗು: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿಯ ಗೋಪಾಲಪುರ ಚರ್ಚ್ ನಲ್ಲಿ ಸಂತ ಜೋಸೆಫರ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು ಭಾನುವಾರದ ಬೆಳಗಿನ ಬಲಿಪೂಜೆಯನ್ನು 10.30ಗಂಟೆಗೆ ಪ್ರಾರಂಭಿಸಿ ಮೊದಲಿಗೆ ಜೋಸೆಫರ ಪ್ರತಿಮೆಯನ್ನು ಚರ್ಚಿನ ಸುತ್ತಲೂ ಮೆರವಣಿಗೆ ಮುಖಾಂತರ ಕೊಂಡೊಯ್ಯಲಾಯಿತು.

ಬಲಿಪೂಜೆಯಲ್ಲಿ ಚರ್ಚ್ ನ ಫಾದರ್ ಜಾಕಬ್ ಕೊಳನೂರು ಪ್ರಬೋಧನೆ ನೀಡುತ್ತಾ ಸಂತ ಜೋಸೆಫರು ದೇವರಲ್ಲಿ ನಂಬಿಕೆ ಮತ್ತು ಪ್ರಾಮಾಣಿಕತೆ ಇಟ್ಟುಕೊಂಡ ವ್ಯಕ್ತಿಯಾಗಿದ್ದರು ಹಾಗಾಗಿ ಜೋಸೆಫ್ ಮತ್ತು ಮಾತೆ ಮರಿಯಮ್ಮ ಮಗನಾಗಿ ಯೇಸು ಕ್ರಿಸ್ತರು ಈ ಲೋಕಕ್ಕೆ ಬಂದರು ಹಾಗಾಗಿ ಇವತ್ತು ಯೇಸುವಿನ ತಂದೆಯ ಹಬ್ಬವನ್ನು ಸಂತ ಜೋಸೆಫರ ಹಬ್ಬವೆಂದು ಭಕ್ತಿಯಿಂದ ಆಚರಿಸುತ್ತಿದ್ದು, ಸಂತ ಜೋಸೆಫ್ ರಂತೆ ದೇವರಲ್ಲಿ ನಂಬಿಕೆ ಇಟ್ಟು ಪ್ರಾಮಾಣಿಕರಾಗಿ ಇರಬೇಕೆಂದು ಪ್ರಬೋಧನೆಯಲ್ಲಿ ತಿಳಿಸಿದರು.

Contact Your\'s Advertisement; 9902492681

ಕಲ್ಯಾಣ ಕರ್ನಾಟಕ ಕೋಗಿಲೆ ಸೀಜನ್ 1 ಆಡಿಷನ್‌ನ ಕಾರ್ಯಕ್ರಮಕ್ಕೆ ಚಾಲನೆ

ಸಂತ ಜೋಸೆಫ್ ರಲ್ಲಿ ಸರ್ವರಿಗೂ ಕೊರೋನಾ ಕಾಯಿಲೆ ಬಾಧಿಸದಂತೆ ಪ್ರಾರ್ಥಿಸಿದರು. ಕೊರೊನಾ ಕಾಯಿಲೆ ಬೇಗನೆ ನಿವಾರಣೆ ಆಗಲಿ ಎಂದು ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಫಾದರ್ ಜೇಕಬ್ ಕೊಳನೂರು, ಗೋಪಾಲಪುರ ಚರ್ಚನ ಕ್ರೈಸ್ತ ಬಾಂಧವರು ನೆರೆದಿದ್ದು, ಈ ವೇಳೆಯಲ್ಲಿ ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here