ಯಾದಗಿರಿ: ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟನೆ ಸಮಾರಂಭ ಜರುಗಿತು.
ಈ ವೇಳೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಮಾತನಾಡಿ, ರಾಜ್ಯದ ವಿವಿದೆಡೆಯಲ್ಲಿ ಪ್ರಾಧಿಕಾರದಿಂದ ೧೦ ಕಟ್ಟಡಗಳಿಗೆ ಅನುದಾನವನ್ನು ಒದಗಿಸಿದರೂ ಇನ್ನು ಕಟ್ಟಡಗಳು ನಿರ್ಮಾಣವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸೇವೆ ಮಾಡಲು ಕನ್ನಡದ ಮೇಲೆ ಅಭಿಮಾನವಿದ್ದರೆ ಸಾಕು: ಶಾಸಕ ಮುದ್ನಾಳ್
ಅವರು ಯಾದಗಿರಿಯಲ್ಲಿ ಕಸಾಪ ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಬಾಷೆಯಯ ರೂಪ ಒಲವನ್ನು ಕೃತಿ ರೂಪದಲ್ಲಿ ತರಬೇಕು ಅಂದಾಗ ಮಾತ್ರ ಬಾಷೆ ಶಕ್ತಿಯುತವಾಗುತ್ತದೆ. ಮೆಕಾಲೆ ಶಿಕ್ಷಣ ಪದ್ದತಿ ಬಂದ ಮೇಲೆ, ನಾವೆಲ್ಲಾ ಗುರುಪರಂಪರೆಯ ಶಿಕ್ಷಣ ಪದ್ದತಿಯನ್ನು ಅಸಡ್ಡೆಯಾಗಿ ಕಾಣುತ್ತಿದ್ದೇವೆ. ನಮ್ಮ ಪೂರ್ವಜರ ಪರಿಕಲ್ಪನೆ ನಾಳೆಗಾಗಿ ಬದುಕು, ನಾಳೆಗಾಗಿ ಸಂಸ್ಕೃತಿಯನ್ನು ಕಾಪಾಡುವುದು ಎಂದಾಗಿತ್ತು. ನಾಳೆಗಳನ್ನು ಚೆನ್ನಾಗಿರಿಸುವ ಭವ್ಯ ಸಂಸ್ಕೃತಿ ನಮ್ಮದು. ಕನ್ನಡ ಬಾಷಿಗರದು ವಿಶಾಲ ಹೃದಯದವರು, ಮನುಜಮತ ವಿಶ್ವಪಥ, ವಿಶ್ವ ಮಾನವ ಪರಂಪರೆ ಇಂತಹ ವಿಚಾರಗಳಿಂದ ಕನ್ನಡ ಭಾಷೆ ವಿಸ್ತಾರವನ್ನು ಪಡೆದುಕೊಂಡಿದೆ ಎಂದರು.
ಈಗಾಗಲೇ ಕನ್ನಡ ಅಭಿವೃದ್ಧಿ ಪಾಧಿಕಾರದಿಂದ ನಾಡಿನಾಧ್ಯಂತ ಕನ್ನಡ ಜಾಗೃತಿ ಸಮಿತಿಯಿಂದ ಬ್ಯಾಂಕುಗಳಲ್ಲಿ ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸುವಂತೆ ಜಾಗೃತಿಯನ್ನು ಮೂಡಿಸಲಾಗಿದೆ. ವಿದ್ಯುನ್ಮಾನ ಮತ್ತು ಮುದ್ರಣ ಮಾದ್ಯಮದಲ್ಲಿನ ಕನ್ನಡ ಬಳಕೆ ಕುರಿತಾಗಿ ಇದೇ ಮಾಚ್.೨೯ ರಿಂದ ೩೧ ರವರೆಗೆ ರಾಜ್ಯದಾದ್ಯಂತ ’ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆ’ ಎಂಬ ಅಭಿಯಾನವನ್ನು ಮಾಡಲಾಗುತ್ತಿದೆ.
ಪಿಂಜಾರ ಸಂಘದ ಅಧ್ಯಕ್ಷರಾಗಿ ಮಹಿಮೂದಸಾಬ, ಪ್ರಧಾನ ಕಾರ್ಯದರ್ಶಿ ಡಾ. ಸೈಯದ್ ಕೊಂಕಲ್ ನೇಮಕ
ಎಫ್,ಎಂ, ಈಚಿನ ಕನ್ನಡ ಚಾನೆಲ್ ಗಳ:ಲ್ಲಿ ಕನ್ನಡ ಶಬ್ದಗಳನ್ನು ಅಪಬ್ರಂಶ ಮಾಡುವ ಮತ್ತು ಕನ್ನಡವನ್ನು ಅಡ್ಡಾದಿಡ್ಡಿಯಾಗಿ ಬಳಸುವ ಪ್ರಕ್ರಿಯೆ ನಡೆದಿದೆ, ಇದು ನೇರವಾಗಿ ಜನರ ಭಾಷೆಯ ಮೇಲೆ ಪ್ರಭಾವ ಬೀರುತ್ತದೆ. ಭವ್ಯ ವಾದ ಕನ್ನಡ ಭಾಷೆಗೆ ಅರ್ಥವಿಲ್ಲದ ಹೊಸ ಶಬ್ದಗಳನ್ನು ಸೇರಿಸುವುದು ಬೇಡ, ಶುದ್ದ ಕನ್ನಡವನ್ನೇ ಬಳಸಬೇಕು ಎಂದು ಹೇಳಿದರು.
ರೈಲ್ವೆ ನಿಲ್ದಾಣಗಳಲ್ಲಿ ಟಿಕೆಟ್ ಮತ್ತಿತರೆ ಕಡೆಗಳಲ್ಲಿ ಕನ್ನಡ ಬಳಕೆ ಕುರಿತಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಾಗಾಭರರಣ, ಮುಂದಿನ ತಿಂಗಳಲ್ಲಿ ಒಟ್ಟಾರೆ ಗ್ರಾಹಕ ಸೇವೆಗಳಲ್ಲಿ ಕನ್ನಡ ಬಳಕೆ ಎಂಬ ಅಭಿಯಾನವನ್ನು ರೈಲು ನಿಲ್ದಾಣ ಸೇರಿದಂತೆ ವಿವಿದೆಡೆ ಮಾಡಲು ಉದ್ದೇಶಿಸಲಾಗಿದೆ. ಯಾವುದೇ ಕಾಯ್ದೆ-ಕಾನೂನು ಜಾರಿಗೊಳಿಸುವಲ್ಲಿ – ಕಾನೂನು ಪಾಲನೆಗಿಂತ ಮುಖ್ಯವಾಗಿ ಮನಸ್ಸು ಪರಿವರ್ತನೆಯಾಗುವುದು ಮುಖ್ಯವಾಗಿದೆ. ನಾನು ಒಂದುವರೆ ವರ್ಷ ಚಿತ್ರ ರಂಗದಿಂದ ದೂರವಿದ್ದು ಕನ್ನಡ ಅಭಿವೃದ್ಧಿ ಪಾಧಿಕಾರದ ಚಟುವಟಿಕೆಗಳಲ್ಲಿಯೇ ಸಕ್ರೀಯನಾಗಿದ್ದೇನೆ ಎಂದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…