ಕನ್ನಡ ಸಾಹಿತ್ಯ ಪರಿಷತ್ತಿನ ಸೇವೆ ಮಾಡಲು ಕನ್ನಡದ ಮೇಲೆ ಅಭಿಮಾನವಿದ್ದರೆ ಸಾಕು: ಶಾಸಕ ಮುದ್ನಾಳ್

1
59

ಯಾದಗಿರಿ : ಕನ್ನಡದ ಮೇಲೆ ಅನನ್ಯ ಅಭಿಮಾನವನ್ನು ಹೊಂದಿದವರು ಯಾರಾದರೂ ಸರಿ ಕನ್ನಡ ಸಾಹಿತ್ಯ ಪರಿಷತ್ತಿನ ಸೇವೆ ಮಾಡಲು ಅರ್ಹ ಎಂದು ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಹೇಳಿದರು.

ಅವರು ಯಾದಗಿರಿ ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ, ಜಿಲ್ಲೆಯಾದ ನಂತರ ಇದ್ದ ಬಹುದಿನಗಳ ಕೊರತೆ ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡದ ಕನಸು ಈಗ ನನಸಾಗಿದ್ದು ಸಂತಸ ತಂದಿದೆ. ಸಿದ್ದಪ್ಪ ಹೊಟ್ಟಿಯಯವರ ವಿಶೇಷ ಆಸಕ್ತಿಯಿಂದ ನೂತನ ಕಟ್ಟಡ ಸಂಪೂರ್ಣಗೊಂಡಿದೆ. ಯಾರು ಏನೇ ಅಂದರೂ ಎದೆಗುಂದದೆ ಹೊಟ್ಟಿಯವರು ಕನ್ನಡ ಚಟುವಟಿಕೆಗಳ ಪೋಷಣಾ ಮನೋಭಾವವನ್ನು ಗಟ್ಟಿಯಾಗಿ ನಡೆಸಿಕೊಂಡು ಹೋಗುತ್ತಿದ್ದದ್ದು ಶ್ಲಾಘನೀಯ ಕಾರ್ಯ ಎಂದು ಅಭಿಪ್ರಾಪಟ್ಟರು.

Contact Your\'s Advertisement; 9902492681

ಕಲಬುರಗಿ ಪಾಲಿಕೆ ಅಧಿಕಾರಿಗೆ 20 ಸಾವಿರ ದಂಡ

ಎಂಎಲ್ಸಿ ಶಶೀಲ್ ಜಿ. ನಮೋಶಿ ಮಾತನಾಡುತ್ತಾ, ಬರೀ ಕನ್ನಡದ ಅಭಿಮಾನವಿದ್ದರೇ ಸಲದು, ಕನ್ನಡ ಅಭಿಮಾನದ ಜೊತೆಗೆ ಆಸಕ್ತಿಯೂ ಬೇಕು. ಯಾದಗಿರಿಯಲ್ಲಿ ಪಿಜಿ ಸೆಂಟರ್ ಆಗಬೇಕಾಗಿದೆ, ಇಲ್ಲಿಯೂ ಕೂಡ ವಿಶ್ವವಿದ್ಯಾಲಯದ ಅಗತ್ಯವಿದೆ, ಇದಕ್ಕಾಗಿ ಖಾನಾಪೂರ ಹತ್ತಿರ ಸ್ಥಳವೂ ಖಾಲಿ ಇದೆ ಎಂದು ಹೇಳಿದರು. ರಾಜ್ಯದಲ್ಲಿ ವಿಶ್ವವಿದ್ಯಾಲಯಗಳು ಹೆಚ್ಚಾಗಿ ಕೆಲವೊಂದು ಸರ್ಕಾರದಿಂದ ನಿರ್ವಹಣೆಯೇ ಆಗುತ್ತಿಲ್ಲ, ಅದಕ್ಕೆ ಹಂಪಿ ವಿಶ್ವವಿದ್ಯಾಲಯ ನಿದರ್ಶನವಾಗಿದೆ, ಇಲ್ಲಿನ ಸಂಶೋಧನಾ ಅಧ್ಯಯನ ಪ್ರಕ್ರಿಯೆಗೆ ಅನುದಾನವೇ ಇಲ್ಲ. ನೂತನವಾದ ರಾಯಚೂರು ವಿಶ್ವವಿದ್ಯಾಲಯಕ್ಕೆ ಸರ್ಕಾರ ಅನುದಾನ ಒದಗಿಸಬೇಕು ಎಂದು ಹೇಳಿದರು.

ಶಾಸಕ ಕಂದಕೂರರ ಸಂದೇಶ ವಾಚನ : ಅಧಿವೇಶನದ ನಿಮಿತ್ತ ಕಸಾಪ ಕಾರ್ಯಕ್ರಮಕ್ಕೆ ಬರಲು ಆಗಲಿಲ್ಲ ಎಂದು ವಿಷಾಧಿಸುವೆ. ಯಾದಗಿರಿ ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಕಟ್ಟಡ ನಿರ್ಮಾಣ, ಆರಂಭವಾಗಿದ್ದು ಸಂತಸ ತಂದಿದೆ. ಈ ಸಂದರ್ಭದಲ್ಲಿ ಪರಿಷತ್ತಿನ ಅಧ್ಯಕ್ಷರಿಗೆ ಮತ್ತು ಎಲ್ಲಾ ಕನ್ನಡ ಮನಸ್ಸುಗಳಿಗೆ ಅಭಿನಂದನೆಗಳನ್ನು ಕೋರುತ್ತೇನೆ ಎಂದು ಗುರುಮಠಕಲ್ ಕ್ಷೇತ್ರದ ಶಾಸಕ ನಾಗನಗೌಡ ಕಂದಕೂರ ಅವರು ಸಂದೇಶದಲ್ಲಿ ಹೇಳಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮದಲ್ಲಿ ಶಾಸಕರ ಸಂದೇಶವನ್ನು ಡಾ. ಸುಬಾಶ್ಚಂದ್ರ ಕೌಲಗಿ ಕಾರ್ಯಕ್ರಮದಲ್ಲಿ ಓದಿದರು.

ಪಿಂಜಾರ ಸಂಘದ ಅಧ್ಯಕ್ಷರಾಗಿ ಮಹಿಮೂದಸಾಬ, ಪ್ರಧಾನ ಕಾರ್ಯದರ್ಶಿ ಡಾ. ಸೈಯದ್ ಕೊಂಕಲ್ ನೇಮಕ

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಮಾತನಾಡುತ್ತಾ, ಕರ್ನಾಟಕದ ಕಿರೀಟಪ್ರಾಯ ಬೀದರ್ ಆದರೆ, ಕಲಬುರಗಿ ಹೃದಯಭಾಗವಾಗಿದೆ, ಯಾದಗಿರಿ ಕತ್ತಿನ ಭಾಗವಾಗಿದ್ದು. ಈ ಕತ್ತಿನ ಭಾಗದ ಅಧ್ಯಕ್ಷರಾದ ಸಿದ್ದಪ್ಪ ಹೊಟ್ಟಿಯವರ ಗತ್ತಿನ ಕಾರ್ಯ ವೈಖರಿಯಿಂದ ಕಟ್ಟದ ಕಸಾಪ ನೂತನ ಕಟ್ಟಡ ತಲೆ ಎತ್ತಿನಿಂತಿದೆ ಎಂದರು. ರಾಜ್ಯದ ವಿವಿದೆಡೆಯಲ್ಲಿ  ಪ್ರಾಧಿಕಾರದಿಂದ ೧೦ ಕಟ್ಟಡಗಳಿಗೆ ಅನುದಾನವನ್ನು ಒದಗಿಸಿದರೂ ಇನ್ನು ಕಟ್ಟಡಗಳು ನಿರ್ಮಾಣವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಬಾಷೆಯ ರೂಪ ಒಲವನ್ನು ಕೃತಿ ರೂಪದಲ್ಲಿ ತರಬೇಕು ಅಂದಾಗ ಮಾತ್ರ ಬಾಷೆ ಶಕ್ತಿಯುತವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪರಿಷತ್ತಿನ ಅಧ್ಯಕ್ಷ ಡಾ. ಸಿದ್ದಪ್ಪ ಹೊಟ್ಟಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ಪರಿಷತ್ತಿನ ಗೌರವ ಕಾರ್ಯದರ್ಶಿ, ಪ್ರಾಚಾರ್ಯ ಡಾ. ಸುಬಾಶ್ಚಂದ್ರ ಕೌಲಗಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

ಸಮಾಜಿಕ ಅಂತರ ಮರೆತು ಮುಗಿಬಿದ್ದ ನಟ ಪುನೀತ್ ರಾಜ ಕುಮಾರ್ ಅಭಿಮಾನಿಗಳು

ಈ ವೇಳೆ ವೇದಿಕೆಯ ಮೇಲೆ ಮಾಜಿ ಎಂಎಲ್ಸಿ ಚೆನ್ನಾರೆಡ್ಡಿ ಪಾಟೀಲ ತುನ್ನುರು, ಜಿಲ್ಲಾ ಪಂಚಾಯತ ಅಧ್ಯಕ್ಷ ಬಸನಗೌಡ ಪಾಟೀಲ ಯಡಿಯಾಪೂರ, ಯುಡಾ ಅಧ್ಯಕ್ಷ ಬಸವರಾಜ್ ಚಂಡ್ರಿಕಿ, ನಗರಸಭೆ ಅದ್ಯಕ್ಷ ವಿಲಾಸ್ ಪಾಟೀಲ್,  ಸಿದ್ದಾರೆಡ್ಡಿ ಬಲಕಲ್, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೊನಾವಣೆ, ಜಿಪಂ ಸಿಇಓ ಶಿಲ್ಪಾ ಶರ್ಮಾ, ಎಂಕೆ ಬೀರನೂರ, ಅಯ್ಯಣ್ಣಾ ಹುಂಡೇಕಾರ, ಬಸವಂತ್ರಾಯಗೌಡ ಮಾಲಿಪಾಟೀಲ್, ಎಸ್‌ಎಸ್ ನಾಯಕ, ಭೀಮರಾಯ ಲಿಂಗೇರಿ, ಸಿದ್ದಲಿಂಗಪ್ಪ ಆನೆಗುಂದಿ, ಶ್ರೀನಿವಾಸ ಜಾಲವಾದಿ, ಗಾಳೆಪ್ಪ ಪೂಜಾರಿ, ಬಸವರೆಡ್ಡಿ ಎಂಟಿ ಪಲ್ಲಿ, ದೇವರಾಜ್ ನಾಯಕ್ ವರ್ಕನಹಳ್ಳಿ ಮತ್ತಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here