ಕಲಬುರಗಿ: ದೇಶದ ಕೆಲವು ರಾಜ್ಯದಲ್ಲಿ ಕೊರೊನಾ ಸೊಂಕು ಹರಡುವಿಕೆಯು ಇನ್ನಷ್ಟು ಹೆಚ್ಚುವುದನ್ನು ತಡೆಯುವುದಕ್ಕಾಗಿ ದೇಶದ ಕೆಲವು ರಾಜ್ಯದ ಸ್ಥಳಗಳಲ್ಲಿ ಲಾಕ್ ಡೌನ್ ಮತ್ತು ಕಪ್ಯೂ೯ ವಿಧಿಸಲಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಸದ್ಯಕ್ಕೆ ಲಾಕ್ ಡೌನ್ ಮತ್ತು ಕಪ್ಯೂ೯ ವಿಧಿಸದಿರುವುದು ಉತ್ತಮ ನಿರ್ಧಾರ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ) ದ ಕಲ್ಯಾಣ ಕರ್ನಾಟಕ ಅಧ್ಯಕ್ಷರಾದ ಶರಣು ಹೊಸಮನಿ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಲಸಿಕೆ ಬಂದ ಮೇಲೂ ಲಾಕ್ ಡೌನ್ ಯಾಕೆ ಬೇಕು ಎಂಬ ಜನರಲ್ಲಿ ಪ್ರಶ್ನೆ ಹುಟ್ಟಿಕೊಂಡಿದೆ. ಆದರೆ ಜನರಿಗೆ ಲಸಿಕೆಯ ಬಗ್ಗೆ ಭಯ ಮತ್ತು ಅನುಮಾನ ಕಾಡುತ್ತಿದೆ. ಕೆಲಸ ಮಾಡದ ಲಸಿಕೆ ಹಾಕುವುದರಿಂದ ಪ್ರಯೋಜನವೇನು ಎಂಬ ದೂರುಗಳು ಜನರಿಂದ ಕೇಳಿಬರುತ್ತಿದೆ.
ಮಾಜಿ ಸೈನಿಕನ ಮೇಲಿನ ಹಲ್ಲೆಗೆ ಸಿಡಿದೆದ್ದ ಸೈನಿಕರು
ಲಸಿಕೆ ಸರಿ ಇದ್ದರೂ ಲಸಿಕೆ ವಿತರಿಸಿ ಮತ್ತೆ ಕೊರೊನಾ ಭಯ ಸೃಷ್ಟಿಸುವುದು ಲಾಕ್ ಡೌನ್ ಮಾಡುವುದು ಏಕೆ ಎಂದು ಜನರಿಗೆ ಸ್ಪಷ್ಟವಾದ ಉತ್ತರವನ್ನು ಸರಕಾರ ನೀಡಬೇಕು. ಈ ಹಿಂದೆ ಸರಕಾರವೇ ಹೇಳಿದ ಲಸಿಕೆ ಬಂದ ಮೇಲೆ ಕೊರೊನಾದ ಭಯಪಡಬೇಡಿ. ಲಸಿಕೆ ಹಾಕಿಸಿಕೊಂಡರೆ ಕೊರೊನಾ ಸಂಪೂರ್ಣವಾಗಿ ನಾಶವಾಗುತ್ತದೆ ಎಂದು ಲಸಿಕೆ ಬಂದು ತಿಂಗಳೂಗಳೇ ಕಳೆಯಿತು. ಮತ್ತೆ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಾ ಇರುವುದು ವಿಷಾದನೀಯ ಎಂದರು.
ಸರಕಾರ ಕೂಡಲೇ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದರ ಬಗ್ಗೆ ನಗರ-ಗ್ರಾಮೀಣ ಎನ್ನದೇ ಜನರಲ್ಲಿ ಜಾಗೃತಿ ಮೂಡಿಸಬೇಕಾದ ತುರ್ತು ಅಗತ್ಯವು ಇದೆ. ಕೋವಿಡ್ ತಡೆಯ ನಿಯಮ ಪಾಲನೆಗಳಲ್ಲಿ ಅಧಿಕಾರಸ್ಥರಿಗೆ ವಿನಾಯಿತಿ ನೀಡುವ ಜೊತೆಗೆ ಸರಕಾರವೇ ಗಂಭೀರವಾಗಿ ಜವಬ್ದಾರಿವಹಿಸಿ ಕೊರೊನಾ ನಿಯಂತ್ರಿಸಲು ಪಣತೊಡಬೇಕು ಎಂದು ಅವರು ಸರಕಾರಕ್ಕೆ ಮನವಿ ಮಾಡಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
View Comments
ಎಲ್ಲಾ ಸುದ್ದಿಗಳು ಚೆನ್ನಾಗಿ ಬರುತ್ತವೆ. ಆದರೆ ನಮ್ಮ ಸುದ್ದಿ ಕಳುಹಿಸೇಕಾದರೆ ಹೆಗೆ..?