ಬಿಸಿ ಬಿಸಿ ಸುದ್ದಿ

ಮಾಜಿ ಸೈನಿಕನ ಮೇಲಿನ ಹಲ್ಲೆಗೆ ಸಿಡಿದೆದ್ದ ಸೈನಿಕರು

ಆಳಂದ: ಇತ್ತೀಚಿಗೆ ಪಟ್ಟಣದಲ್ಲಿ ಮಾಜಿ ಸೈನಿಕ ಹರಿನಂದ ಕೊಡಮೂಡ ಮೇಲೆ ಹಲ್ಲೆ ನಡೆಸಿದ ಸಮಾಜಘಾತುಕ ಶಕ್ತಿಗಳನ್ನು ಅತ್ಯುಗ್ರ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿ ಆಳಂದ ಹಾಗೂ ಸಿಂಧಗಿ ತಾಲೂಕಿನ ಮಾಜಿ ಮತ್ತು ಸೇವೆಯಲ್ಲಿರುವ ಸೈನಿಕರು ಸೋಮವಾರ ತಹಸೀಲದಾರರಿಗೆ ಭೇಟಿಯಾಗಿ ಮನವಿ ಸಲ್ಲಿಸಿದರು.

೭೨ ವರ್ಷ ವಯಸ್ಸಿನ ಹಿರಿಯ ಜೀವಿ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ಈಗಾಗಲೇ ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಆದರೆ ಅವರ ಮೇಲೆ ಹೊರಸಿರುವ ಕಲಂಗಳಿಂದ ಅವರಿಗೆ ಶಿಕ್ಷೆಯಾಗುವ ಸಾಧ್ಯತೆ ಕಡಿಮೆ ಇದೆ ಆದರಿಂದ ಅವರ ಮೇಲೆ ಗಂಭೀರ ಪ್ರಕರಣದ ಕಲಂಗಳನ್ನು ಸೇರಿಸಿ ಅವರಿಗೆ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಗಂಭೀರವಾಗಿ ಆಕ್ರೋಶ ವ್ಯಕ್ತಪಡಿಸಿದರು.

ನುರಿತ ಸಿಬ್ಬಂಧಿಗಳು ಮಹಾವಿದ್ಯಾಲಯಗಳ ಬೆನ್ನೆಲುಬು: ಡಾ. ಎಸ್ಎಸ್ ಹೆಬ್ಬಾಳ

ಶುಕ್ರವಾರ ಸಾಯಂಕಾಲ ಕುಡಿದ ಮತ್ತಿನಲ್ಲಿ ಹೊಟೇಲಗೆ ನುಗ್ಗಿದ ಸಮಾಜಘಾತುಕರು ೭೨ ವರ್ಷ ವಯಸ್ಸಿನ ಹಿರಿಜೀವ, ಮಾಜಿ ಸೈನಿಕ ಹರಿನಂದ ಕೊಡಮೂಡ ಮೇಲೆ ದೈಹಿಕ ಹಲ್ಲೆ ಮಾಡಿದ್ದಲ್ಲದೇ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸಮಾಜಘಾತುಕರನ್ನು ಬಂಧಿಸಿ ಉಗ್ರ ಶಿಕ್ಷೆಗೆ ಗುರಿ ಪಡಿಸುವಂತೆ ಸಾರ್ವಜನಿಕರು ಆಗ್ರಹಪಡಿಸಿದ್ದರು.

ಇನ್ನೂ ೭೨ ವರ್ಷ ವಯಸ್ಸಿನ ಹರಿನಂದ ಕೊಡಮೂಡ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವರು. ಭಾರತ ಚೀನಾ ಯುದ್ಧದ ಸಮಯದಲ್ಲಿ ರಣಾಂಗಣದಲ್ಲಿ ತೊಡೆ ತಟ್ಟಿ ಶತ್ರುಗಳ ಜೊತೆ ಕಾದಾಟ ನಡೆಸಿದವರು. ಇವರ ಸೇವೆಯನ್ನು ಗುರುತಿಸಿ ಭಾರತೀಯ ಸೇನೆಯು ಇವರಿಗೆ ಎರಡು ಪದಕಗಳನ್ನು ನೀಡಿ ಗೌರವಿಸಿದೆ. ಇಂತಹ ದೇಶಪುತ್ರನನ್ನು ಸಮಾಜಘಾತುಕ ಶಕ್ತಿಗಳು ಸಾರ್ವಜನಿಕವಾಗಿ ಹೀಗೆ ಹಲ್ಲೆ ಮಾಡಿರುವುದಕ್ಕೆ ಸೈನಿಕರು ಒಕ್ಕೊರಲಿನಿಂದ ಖಂಡಿಸಿದ್ದರು.

ಸಾಯಬಣ್ಣಾ ಗುಡುಬಾ ಇವರಿಗೆ ಪಿಎಚ್‍ಡಿ

ತಂದೆಯ ಸ್ಥಾನದಲ್ಲಿರುವ, ಹಿರಿಯ ವಯಸ್ಸಿನ ಮಾಜಿ ಸೈನಿಕರ ಮೇಲೆ ಈ ರೀತಿ ಹಲ್ಲೆ ಮಾಡುವುದು ನ್ಯಾಯವೇ?. ಇಂತಹ ಸಮಾಜಘಾತುಕರಿಗೆ ತಕ್ಕ ಶಾಸ್ತಿ ಆಗಬೇಕು ಎಂದು ಆಗ್ರಹಿಸಿದರು.

ಹಲ್ಲೆ ನಡೆಸಿದ ಆರೋಪಿಗಳಾದ ಸತ್ರೋದ್ದೀನ್ ಅನ್ಸಾರಿ ಮತ್ತು ಮಾರುತಿ ಎಂಬುವವರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು. ನಂತರ ತಹಸೀಲದಾರ ಕಾರ್ಯಾಲಯದಿಂದ ಹಲ್ಲೆಗೊಳಗಾದ ಮಾಜಿ ಸೈನಿಕ ಹರಿನಂದ ಕೊಡಮೂಡ ಅವರ ಮನೆತನಕ ಪಾದಯಾತ್ರೆ ಮಾಡಿ ನಿಮ್ಮ ಕುಟುಂಬದ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಲಾಯಿತು.

ಸಾಯಬಣ್ಣಾ ಗುಡುಬಾ ಇವರಿಗೆ ಪಿಎಚ್‍ಡಿ

ಈ ಸಂದರ್ಭದಲ್ಲಿ ಮಾಜಿ ಸೈನಿಕ ಹಾಗೂ ಹಾಲಿ ಸೇನೆಯಲ್ಲಿರುವ ಸೈನಿಕರಾದ ಮಾರುತಿ ಘೋಡಕೆ, ಬಂಡೆಪ್ಪ ಮಾಡ್ಯಾಳ, ಬಸವೇಶ್ವರ ಸಲಗರ, ರಾಜು ಅವರಾದಿ, ಹಣಮಂತ ಸುರೇಶ, ಈರಣ್ಣ ಹೂಗಾರ, ರಾಜು ಸಿಂಗೆ, ಶಾಂತಮಲ್ಲಪ್ಪ ಪಾಟೀಲ, ದತ್ತಾತ್ರೇಯ ಡೋಣಿ, ಶಶಿಕಾಂತ ಎಳಮೇಲಿ, ಹಣಮಂತ ಪಾತಾಳೆ, ಚೆನ್ನವೀರ ವಾಡಿ, ಸುಭಾಷ್ ಚವ್ಹಾಣ, ಶಾಂತಯ್ಯ ವಾಡಿ, ಖಾಜಪ್ಪ ಖ್ಯಾಮಗೋಳ ಸೇರಿದಂತೆ ಸಿಂಧಗಿ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

6 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

16 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

16 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

16 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago