ಕಲಬುರಗಿ: ತಾಲೂಕಿನ ಬಬಲಾದ ಐಕೆ ಗ್ರಾಮ ಪಂಚಾಯತ್‌ನಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ಸಮುದಾಯ ವಂತಿಕೆ ಸಂಗ್ರಹಣಾ ಅಭಿಯಾನ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿಯೋಣ ಬಾ ಕಾರ್ಯಕ್ರಮ ಆಯೋಜಿಸಲಾಗಿತು.
ಈ ಸಂದರ್ಭದಲ್ಲಿ ಜಲ ಜೀವನ ಮಿಷನ್ ಜಿಲ್ಲಾ ಯೋಜನಾ ವವ್ಯಸ್ಥಾಪಕರಾದ ಡಾ.ರಾಜು ಕಂಬಾಳಿಮಠ ಮಾತನಾಡಿ ನೀರು ಅತ್ಯಮೂಲ್ಯವಾದ್ದದು ಜಾಗತಿಕ ತಾಪ ಮಾನದಿಂದ ನೀರಿನ ಮೂಲ ಬರಿದಾಗುತ್ತಿದ್ದು, ಹಾಗೂ ಬೇಸಿಗೆ ಕಾಲದಲ್ಲಿ ಹಿತವಾಗಿ-ಮಿತವಾಗಿ ನೀರನ್ನು ಬಳಸಬೇಕೆಂದರು.
ಬಬಲಾದ ಗ್ರಾಮದಲ್ಲಿ ಈಗಾಗಲೇ ಟೆಂಡರ್ ಕರೆದಿದ್ದು, ಗ್ರಾಮಗಳಲ್ಲಿ ಕಾರ್ಯಾತ್ಮಕ ಮನೆ ನಳ ಸಂಪರ್ಕ ನೀಡುವುದಕ್ಕೆ ಸಮುದಾಯ ಮಾಲಿಕತ್ವ ವಹಿಸುವ ಹಾಗೂ ಭಾಗೀದಾರರಾಗಲು ಶೇ.೧೦ ರಷ್ಟು ಸಮುದಾಯ ವಂತಿಕೆಯನ್ನು ಯೋಜನೆಯ ಸದುಪಯೋಗ ಪಡೆದು ಕೊಳ್ಳುವ ಫಲಾನುಭವಿಗಳಿಂದ ಸಂಗ್ರಹಿಸುತ್ತಿದ್ದು, ಇನ್ನುಳಿದ ಶೇಕಡಾ ೯೦% ಅನುದಾನವನ್ನು ಸರಕಾರ ನೀಡುತ್ತಿದೆ ಯೋಜನೆಯಡಿ ವೈಯಕ್ತಿಕ ಶೌಚಾಲಯ, ಹಾಗೂ ಉದ್ಯೋಗ ಖಾತ್ರಿ ಯೋಜನೆ ಅಡಿ ಬಚ್ಚಲು ಗುಂಡಿ, ಕೃಷಿ ಹೊಂಡ , ಕೃಷಿ ಬದು, ಪುಷ್ಕರಣಿಗಳ ಪುನರುಜೀವನ ಕಾರ್ಯಕ್ರಮವಿದ್ದು, ಅದರ ಸದುಪಯೋಗ ಪಡದು ಕೊಳ್ಳುವಂತೆ ಗ್ರಾಮಸ್ಥರಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಸುಜಾತ ಅವರಾಧಿಕಾರಿ ಮಾತನಾಡಿ ಗ್ರಾಮಸ್ಥರು ಸರಕಾರದ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ಸಂದೀಪ್ ಬಬಲಾದ ವಹಿಸಿಕೊಂಡು ಗ್ರಾಮ ಪಂಚಾಯತ್ ವತಿಯಿಂದ ಸರಕಾರದ ಎಲ್ಲ ಯೋಜನೆಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ರೂಡಾ ಸಂಸ್ಥೆಯ ತಂಡದ ನಾಯಕರಾದ ಸಂತೋಷ ಮೂಲಗೆ ಯೋಜನೆಯ ತಾಂತ್ರಿಕ ವಿಷಯದ ಕುರಿತು ತಿಳಿಸಿದರು.
ಮಾಜಿ ಸೈನಿಕನ ಮೇಲಿನ ಹಲ್ಲೆಗೆ ಸಿಡಿದೆದ್ದ ಸೈನಿಕರು
ಕಾರ್ಯಕ್ರಮದ ವೇದಿಕೆ ಮೇಲೆ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಸುಶೀಲಾ ಬಾಯಿ ಶರಣು ಹಾಗೂ ಗ್ರಾಮ ಪಂಚಾಯತ ಸದಸ್ಯರಾದ ಸಿದ್ಧರಾಮ ಸಿರಶಾಪೂರು , ಜಗದೇವಿ ಜಗನ್ನಾಥ ಪೂಜಾರಿ , ಶಿವ ಕುಮಾರ ಉಪಸ್ಥಿರತರಿದ್ದರು ಇದೇ ಕಾರ್ಯಕ್ರಮದಲ್ಲಿ ಸಂದೀಪ್ ಬಬಲಾದ , ಮಹಾದೇವಿ ಬಸವರಾಜ , ಜಗನ್ನಾಥ ದೇವಿಂದ್ರಪ್ಪ , ಪುತಳಾಬಾಯಿ ಯಶವಂತಪ್ಪ , ಶರಣಪ್ಪ ದಸ್ತಾಪೂರು, ಇಂದುಬಾಯಿ ಬಾಬುರಾವ , ಶಿವಕುಮಾರ ಮಲ್ಲೇಶಪ್ಪ ರವರು ಒಟ್ಟು ರೂ.೧೧೦೦೦/-ಸಮುದಾಯವ ವಂತಿಕೆ ನೀಡಿದರು., ರೂಡಾ ಸಂಸ್ಥೆಯ ಶ್ರವಣಕುಮಾರ ಅಕ್ಕಿಮನಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…