ಕಲಬುರಗಿ: ಮಾವಿನ ಹಣ್ಣುಗಳು ಪಕ್ವವಾಗುವ 45 ರಿಂದ 60 ದಿನಗಳ ಮುಂಚೆ ಮಾವಿನ ಹಣ್ಣುಗಳು ನಿಂಬೆ ಹಣ್ಣು ಗಾತ್ರ ಹೊಂದಿದಾಗ ನೊಣಗಳು ಹಣ್ಣುಗಳಿಗೆ ಚುಚ್ಚಿ ಮೊಟ್ಟೆಗಳಿಡುತ್ತವೆ. ಕೆಳಗೆ ಬಿದ್ದ ಹಣ್ಣುಗಳಿಂದ ಈ ನೊಣಗಳು ವೃದ್ಧಿಯಾಗಿ ಮತ್ತೆ ಹೊಸ ಹಣ್ಣುಗಳನ್ನು ಚುಚ್ಚಿ ನಷ್ಟ ಮಾಡುತ್ತವೆ. ಹೀಗಾಗಿ ಕೆಳಗೆ ಬಿದ್ದ ಹಣ್ಣುಗಳನ್ನು ವಾರಕ್ಕೊಮ್ಮೆ ಆಯ್ದು ತೋಟದ ಅಂಚಿನಲ್ಲಿ ಗುಂಡಿ ತೆಗೆದು 4 ಅಡಿ ಆಳಕ್ಕೆ ಹೂತು ಮಣ್ಣು ಮುಚ್ಚಬೇಕು ಇಲ್ಲವೇ ಬೆಂಕಿಯಲ್ಲಿ ಸುಡಬೇಕು ಎಂದು ಕಲಬುರಗಿಯ ಹಿರಿಯ ಸಹಾಯಕ ತೋಟಗಾರಿಕೆಯ ನಿರ್ದೇಶಕರು ಸಲಹೆ ನೀಡಿದ್ದಾರೆ.
ಒಂದು ಎಕರೆಗೆ 8 ರಿಂದ 10 ಲಿಂಗಾಕರ್ಷಕ ಮೋಹಕ ಬಲೆಗಳನ್ನು ಮರಗಳಿಗೆ ಕಟ್ಟಬೇಕು. ಬಲೆಗಳನ್ನು ತೋಟದಲ್ಲಿ ಕಟ್ಟುವ ಮುನ್ನ ಲಿಂಗಾಕರ್ಷಕ ಮೋಹಕವನ್ನು ಹೊಂದಿರುವ ಮರದ ತುಂಡಿನ ಮೇಲೆ 5 ರಿಂದ 6 ಹನಿ ಮ್ಯಾಲಿಥಿಯಾನ್ ಅಥವಾ ಡೈಕ್ಲೊರೊವಾಸ್‍ನಿಂದ ನೆನೆಸಿ ಮರಗಳಿಗೆ ಕಟ್ಟುವಾಗ ಭೂಮಿಯಿಂದ 3 ರಿಂದ 6 ಅಡಿ ಎತ್ತರದಲ್ಲಿ ಕಟ್ಟಬೇಕು. ಗಾಳಿಗೆ ಅಲುಗಾಡದಂತೆ ನೇರವಾದ ಬಿಸಿಲು ಬೀಳದಂತೆ ಎಲೆಗಳ ಮರೆಯಲ್ಲಿ ಕಟ್ಟಬೇಕು.
ಗುರು ವ್ಯಕ್ತಿಯಲ್ಲ ಅದೊಂದು ತತ್ತ್ವ: ಜಯಶ್ರೀ ದಂಡೆ
ಮೋಹಕ ಬಲೆಗಳನ್ನು ಕಟ್ಟಿದ 12 ರಿಂದ 15 ದಿನಗಳ ನಂತರ, ಮೋಹಕ ಮರದ ತುಂಡಿನ ಮೇಲೆ 5 ತಟ್ಟು ಮ್ಯೌಲಾಥಿಯಾನ್ ಅಥವಾ ಡೈಕ್ಲೊರೊವಾಸ್‍ನಿಂದ ನೆನೆಸಬೇಕು. ಹಾಗೆ ಮಾಡುವುದರಿಂದ ಮೋಹಕದ ಕಾರ್ಯದಕ್ಷತೆ ಹೆಚ್ಚಿ ನೊಣದ ಆಕರ್ಷಣೆ ಅಧಿಕವಾಗುವುದು. 3 ರಿಂದ 4 ವಾರಗಳ ನಂತರ ಹಳೆಯ ಮೋಹಕದ ಜೊತೆಗೆ ಒಂದು ಹೊಸ ಮೋಹಕವನ್ನು ಹಾಕಬೇಕು. ಒಂದು ವೇಳೆ ತೋಟದ ಎಲ್ಲಾ ಹಣ್ಣುಗಳ ಕೊಯಿಲು ಆಗದೆ ಇನ್ನೂ ಮುಂದುವರಿದಲ್ಲಿ ಎಲ್ಲ ಹಣ್ಣುಗಳ ಕೊಯಿಲಾಗುವರೆಗೂ ಮೋಹಕಗಳನ್ನು ಇರಿಸಿ ಹಣ್ಣುಗಳನ್ನು ನೊಣಗಳಿಂದ ರಕ್ಷಿಸಿಕೊಳ್ಳಬೇಕು. ನೀಲಂ ತಳಿ ಸಾಮಾನ್ಯವಾಗಿ ತಡವಾಗಿ ಕಾಯಿ ಕಚ್ಚಿ ಕೊಯಿಲಿಗೆ ಬರುವುದರಿಂದ ನೊಣಗಳಿಂದ ರಕ್ಷಿಸುವುದು ಅಗತ್ಯ. ಮೋಹಕ ಬಲೆಯಲ್ಲಿ ಬಿದ್ದಿರುವ ಸತ್ತ ನೊಣಗಳನ್ನು ಆಗಿಂದಾಗ್ಗೆ ತಗೆದು ಡಬ್ಬಿಯನ್ನು ಸ್ವಚ್ಛಿಗೊಳಿಸಬೇಕು.
ಪೋಷಣ ಅಭಿಯಾನದಲ್ಲಿ ಪಾಲ್ಗೊಳ್ಳದಿರಲು ಅಂಗನವಾಡಿ ನೌಕರರ ನಿರ್ಧಾರ: ಸುರೇಖಾ ಕುಲಕರ್ಣಿ
ಹೆಚ್ಚಿನ ಮಾಹಿತಿಗಾಗಿ ಕಲಬುರಗಿಯ ತೋಟಗಾರಿಕೆ ಇಲಾಖೆಯ ವಿಷಯತಜ್ಞ (ಹಾರ್ಟಿಕ್ಲಿನಿಕ್) ಮಂಜುನಾಥ ಪಾಟೀಲ 7090832016 ಇವರನ್ನು ಸಂಪರ್ಕಿಸಬಹುದು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…