ಅಂಕಣ ಬರಹ

‘ಶೆಹನಾಯಿ ವಾದ’ದ ದಂತಕಥೆ ‘ಉಸ್ತಾದ್ ಬಿಸ್ಮಿಲ್ಲಾ ಖಾನ್’..!

ಶೆಹನಾಯಿ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ರು ಮಾರ್ಚ್ ೨೧, ೧೯೧೬ – ಆಗಸ್ಟ್ ೨೧, ೨೦೦೬ ಕಾಲಾವಧಿಯವರು.

ಭಾರತರತ್ನ ಪಡೆದ ಮೂರನೆಯ ಶಾಸ್ತ್ರೀಯ ಸಂಗೀತಗಾರರು ಅವರು. ಇವರಿಗೆ ೨೦೦೧ ರಲ್ಲಿ ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯೂ ಲಭಿಸಿದ್ದು ಅವರ ಶೆಹನಾಯ ವಾದಕತ್ವದ ಹಿರಿಮೇ ಸರಿ..! ಮಾರ್ಚ್ ೨೧, ಅವರ ಹುಟ್ಟಿದ ಹಬ್ಬದ ದಿನದ ಗೌರವ ಪೂರ್ವಕ ಲೇಖನವಿದು.

ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಜೀವನ: ಇವರ ಪೂರ್ವಜರು ಬಿಹಾರಿನ ದುಮ್ರಾಓ ಸಾಮ್ರಾಜ್ಯದವರೆಂದು ಹೇಳಲಾಗುತ್ತದೆ. ಬಿಸ್ಮಿಲ್ಲಾ ಖಾನ್ ತಮ್ಮ ಚಿಕ್ಕಪ್ಪ, ಅಲಿ ಬಕ್ಸ್ ವಿಲಾಯತು ಬಳಿ ಕಲೆತರೆಂದು ಹೇಳಲಾಗುತ್ತದೆ. ಅಲಿ ಬಕ್ಸ್ ವಿಲಾಯತುರವರು ವಾರಣಾಸಿಯ ವಿಶ್ವನಾಥ ದೇವಾಲಯದೊಂದಿಗಿದ್ದವರು. ಇವರ ಕೀರ್ತಿ ಉತ್ತುಂಗಕ್ಕೇರಿದ್ದರೂ ಇವರು ವಾರಣಾಸಿಯ ಸಾಮಾನ್ಯ ಜನರಂತೆ ಜೀವನ ನಡೆಸಿದವರು. ಜೀವನದ ಕೊನೆಯ ವರೆಗೂ ತಮ್ಮ ಓಡಾಟಕ್ಕಾಗಿ ಸೈಕಲ್ ರಿಕ್ಷಾವನ್ನೆ ಅವಲಂಬಿಸಿದ್ದರು ಇವರು. ಬಿಸ್ಮಿಲ್ಲಾ ಖಾನ್ ರವರಿಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ವಿಶ್ವ ಭಾರತಿ ವಿಶ್ವವಿದ್ಯಾಲಯ, ಶಾಂತಿನಿಕೇತನ ಗಳಿಂದ ಗೌರವಪೂರ್ವಕ ಡಾಕ್ಟರೇಟ್ ಲಭಿಸಿದೆ.

ಗೆಲುವಿಗಿಂತ ಜವಾಬ್ದಾರಿ ಮುಖ್ಯ: ಲಕ್ಷ್ಮಣ ದಸ್ತಿ

ಸಾಧನೆಯ ಹಾದಿ: ಶೆಹನಾಯಿಯನ್ನು ಪ್ರಸಿದ್ಧ ಶಾಸ್ತ್ರೀಯ ಸಂಗೀತ ವಾದ್ಯವಾಗಿಸಿದ ಕೀರ್ತಿ ಬಿಸ್ಮಿಲ್ಲಾ ಖಾನ್ ಅವರಿಗೆ ಸಲ್ಲಬೇಕು. ೧೯೩೭ರಲ್ಲಿ ಕಲ್ಕತ್ತದಲ್ಲಿ ನಡೆದ ಅಖಿಲ ಭಾರತ ಸಂಗೀತ ಸಮ್ಮೇಳನದ ಇವರ ವಾದ್ಯ ಕಛೇರಿ ಶೆಹನಾಯಿಯನ್ನು ಪ್ರಮುಖ ವಾದ್ಯಗಳ ಸಾಲಿನಲ್ಲಿ ತಂದು ನಿಲ್ಲಿಸಿತು .೧೯೪೭ರ ಭಾರತದ ಸ್ವಾತಂತ್ರ್ಯದ ಸಂಧರ್ಭದಲ್ಲಿ ಕೆಂಪು ಕೋಟೆಯಲ್ಲಿ ಇವರ ಸಂಗೀತ ಕಛೇರಿ ಆಯೋಜಿಸಲಾಗಿತ್ತು. ಇದೊಂದು ಅವರ ಸಾಧನೆಗೆ ಸಂದ ಗೌರವವೇ ಸರಿ. ಜನವರಿ ೨೬ ೧೯೫೦ರ ಭಾರತ ಗಣರಾಜ್ಯೋತ್ಸವ ಸಂದರ್ಭದಲ್ಲಿ ಖಾನ್ ಕಾಪಿ ರಾಗದಲ್ಲಿ ಕೆಂಪು ಕೋಟೆಯಿಂದ ತಮ್ಮ ನಾದ ಲಹರಿಯನ್ನು ಹರಿಸಿದವರು ಬಿಸ್ಮಿಲ್ಲಾ ಖಾನ್.

ಬಿಸ್ಮಿಲ್ಲಾ ಖಾನ್ ಎಂದರೆ ಶೆಹನಾಯಿ, ಶೆಹನಾಯಿ ಅಂದರೆ ಬಿಸ್ಮಿಲ್ಲಾ ಖಾನ್ ಎನ್ನುವಷ್ಟರ ಮಟ್ಟಿಗೆ ಬೆಳೆದು ನಿಂತರು ಅವರು. ಶೆಹನಾಯಿ ವಾದನದಲ್ಲಿ ಹೆಸರು ಗಳಿಸಿದರು. ಖಾನ್ ರವರು ವಿದೇಶಗಳಲ್ಲೂ ಪ್ರಸಿದ್ಧರಾದರು. ಅಪ್ಘಾನಿಸ್ತಾನ, ಯೂರೋಪ್, ಇರಾನ್, ಇರಾಕ್, ಪಶ್ಚಿಮ ಆಫ್ರಿಕ, ಯುಎಸ್ಎ, ಯು.ಎಸ್.ಎಸ್.ಆರ್, ಕೆನಡಾ, ಹಾಂಗ್ ಕಾಂಗ್, ಜಪಾನ್, ಇದಲ್ಲದೇ ಹಲವು ದೇಶಗಳ ಮುಖ್ಯ ನಗರಗಳಲ್ಲಿ ಕಛೇರಿ ನಡೆಸಿ ಖ್ಯಾತಿಯ ಉತ್ತುಂಗಕ್ಕೆ ಏರಿದವರು ಅವರು.

ಗುರು ವ್ಯಕ್ತಿಯಲ್ಲ ಅದೊಂದು ತತ್ತ್ವ: ಜಯಶ್ರೀ ದಂಡೆ

ಇವರ ಶೆಹನಾಯಿ ವಾದಕಕ್ಕೆ ಸಂದ ಪ್ರಶಸ್ತಿಗಳು: ಭಾರತ ರತ್ನ, ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಮಧ್ಯಪ್ರದೇಶ ಸರಕಾರದ ತಾನಸೇನ್ ಪ್ರಶಸ್ತಿ, ನೆಹರು ಅಂತರರಾಷ್ಟ್ರೀಯ ಐಕ್ಯತಾ ಪ್ರಶಸ್ತಿ, ಸ್ವರಾಲಯ ಪ್ರಶಸ್ತಿ (ಮದ್ರಾಸ್),
ರಾಜೀವ್ ಗಾಂಧಿ ಸಧ್ಬಾವನ ಪ್ರಶಸ್ತಿ, ಹೀಗೆಯೇ ಹತ್ತು ಹಲವು ಪ್ರಶಸ್ತಿಗಳು ಬಿಸ್ಮಿಲ್ಲಾ ಖಾನ್ ಅವರನ್ನು ಹುಡುಕಿಕೊಂಡು ಬಂದವು. ಇದಲ್ಲದೇ ಹೀಗೆಯೇ ಹತ್ತಾರು ಗೌರವಗಳೂ ಇವರನ್ನು ಅರಸಿ ಬಂದವು.

ಬಿಸ್ಮಿಲ್ಲಾ ಖಾನ್ ಅವರಿಗೆ ಸಂದ ಗೌರವಗಳು: ಮರಾಠವಾಡ ವಿಶ್ವ ವಿದ್ಯಾಲಯದಿಂದ ಡಿ.ಲಿಟ್, ವಿಶ್ವಭಾರತಿ ಶಾಂತಿನಿಕೇತನದಿಂದ ಡಿ.ಲಿಟ್, ಬನಾರಸ್ ಹಿಂದು ವಿಶ್ವವಿದ್ಯಾನಿಲಯದಿಂದ ಡಿ.ಲಿಟ್, ಮಹಾತ್ಮಗಾಂಧಿ ಕಾಶಿ ವಿದ್ಯಾಪೀಠದಿಂದ ಡಿ.ಲಿಟ್, ಸಂಗೀತ ನಾಟಕ ಅಕಾಡೆಮಿಯ ಫೆಲೋಶಿಪ್, ರಾಷ್ಟ್ರೀಯ ಸಂಶೋಧನಾ ಪ್ರೊಫೆಸರ್ ಶಿಪ್ ಗಳು, ಹೀಗೆಯೇ ಹತ್ತಾರು ಗೌರವಗಳು ಇವರನ್ನು  ಹುಡಿಕಿಕೊಂಡು ಬಂದವು.

ಸಾಹಿತ್ಯ ಸಿಂಧು ಪ್ರಶಸ್ತಿ ಪ್ರದಾನ

ಕನ್ನಡದ ‘ಸನಾದಿ ಅಪ್ಪಣ್ಣ’ ಚಲನಚಿತ್ರಕ್ಕೆ ಬಿಸ್ಮಿಲ್ಲಾ ಖಾನ್ ಅವರ ಶಹನಾಯಿಯೇ ನಾಯಕ ಪಾತ್ರ ವಹಿಸಿತ್ತು..! ೧೯೭೭ರಲ್ಲಿ ಬಿಡುಗಡೆಯಾದ ‘ಸನಾದಿ ಅಪ್ಪಣ್ಣ’ ಕನ್ನಡ ಚಲನಚಿತ್ರದಲ್ಲಿ, ಡಾ.ರಾಜ್‍ಕುಮಾರ್ ಅವರ ಶಹನಾಯಿ ವಾದಕರಾಗಿ ಅಭಿನಯಿಸಿದ ದೃಶ್ಯಗಳಿಗೆ ಅವಶ್ಯಕವಾಗಿದ್ದ ಶಹನಾಯಿ ವಾದನವನ್ನು ಬಿಸ್ಮಿಲ್ಲಾ ಖಾನ್ ಅವರೇ ನುಡಿಸಿದರು. ಜಿ.ಕೆ.ವೆಂಕಟೇಶ್ ಸಂಗೀತದಲ್ಲಿ ಎಸ್.ಜಾನಕಿಯವರು ಹಾಡಿರುವ ‘ಕರೆದರೂ ಕೇಳದೆ’ ಎಂಬ ಹಾಡಿನಲ್ಲಿ ಬರುವ ಶಹನಾಯಿ ವಾದನವನ್ನು ಬಿಸ್ಮಿಲ್ಲಾ ಖಾನರು ನುಡಿಸಿದ್ದಾರೆ.

ಹೀಗೆಯೇ ಶಹನಾಯಿ ಬಿಸ್ಮಿಲ್ಲಾ ಖಾನ್ ಅವರ ಜೀವನದ ಉಸಿರಾಗಿತ್ತು. ಬಿಸ್ಮಿಲ್ಲಾ ಖಾನ್ ಅವರ ಹುಟ್ಟಿದ ಹಬ್ಬದ ಸವಿನೆನಪಿಗಾಗಿ ಈ ಪುಟ್ಟ ಲೇಖನವಿದು.

-ಕೆ.ಶಿವು.ಲಕ್ಕಣ್ಣವರ

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

5 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

15 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

15 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

15 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago