ವಾಡಿ: ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ದಬ್ಬಾಳಿಕೆಯ ವಿರುದ್ಧ ಸಂದಾನತೀತವಾಗಿ ಹೋರಾಡುತ್ತಲೆ ಬಂಧನಕ್ಕೊಳಗಾದ ಮಹಾನ್ ಕ್ರಾಂತಿಕಾರಿ ಶಹೀದ್ ಭಗತ್‌ಸಿಂಗ್, ಭಾರತೀಯ ವಿದ್ಯಾರ್ಥಿ ಯುವಜನರ ಹೋರಾಟಗಳಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ಜಿಲ್ಲಾಧ್ಯಕ್ಷ ಹಣಮಂತ ಎಸ್.ಎಚ್. ಹೇಳಿದರು.
ಹಳಕರ್ಟಿ ಗ್ರಾಮದಲ್ಲಿ ಎಐಡಿಎಸ್‌ಒ ವತಿಯಿಂದ ಏರ್ಪಡಿಸಲಾಗಿದ್ದ ಶಹೀದ್ ಭಗತ್‌ಸಿಂಗ್ ಅವರ ೯೧ನೇ ಹುತಾತ್ಮದಿನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಅನ್ಯಾಯ ಹಾಗೂ ಅಸತ್ಯಗಳ ವಿರುದ್ಧ ಸಿಡಿದೆದ್ದ ಬಾಲಕ ಭಗತ್‌ಸಿಂಗ್ ಯುವಕನಾಗಿ ನೇಣಿಗೆ ಶರಣಾಗುವವರೆಗೂ ಸಿಡಿಲಬ್ಬರದ ಘೋಷಣೆ ಮೊಳಗಿಸುತ್ತ ಬ್ರಿಟೀಷ್ ಸಾಮ್ರಾಜ್ಯವನ್ನು ನಡುಗಿಸಿದ್ದರು. ಭಗತ್‌ಸಿಂಗ್, ರಾಜಗುರು, ಸುಖದೇವ್ ವರು ಒಂದೇ ಗಳಿಗೆಯಲ್ಲಿ ನಗುನಗುತ್ತ ಜತೆಜತೆಯಾಗಿ ಕೊರಳಿಗೆ ನೇಣು ಹಗ್ಗ ಹಾಕಿಕೊಂಡು ಪ್ರಾಣವನ್ನು ಅರ್ಪಿಸಿದ್ದು ಐತಿಹಾಸಿಕ ದಾಖಲೆಯಾಗಿ ಉಳಿದಿದೆ. ಭಗತ್‌ಸಿಂಗ್ ಬಂಧನಕ್ಕೋಳಗಾಗಿ ಗಲ್ಲಿಗೇರುವಾಗ ಕೇವಲ ೨೩ ವಯಸ್ಸಿನ ಯುವಕರಾಗಿದ್ದರು. ಈ ಘಟನೆ ದೇಶದ ಅಸಂಖ್ಯಾತ ವಿದ್ಯಾರ್ಥಿ ಯುವಜನರಲ್ಲಿ ಕ್ರಾಂತಿಯ ಕಿಡಿ ಹೊತ್ತಿಸುವಲ್ಲಿ ಯಶಸ್ವಿಯಾಯಿತು ಎಂದರು.
ಕಲಬುರಗಿಯಲ್ಲಿ ಮಾ.26 ರಂದು ಕ್ಯಾಂಪಸ್ ಸಂದರ್ಶನ
ಬಂಡವಾಳಶಾಹಿಗಳ ಹಿಡಿತದಲ್ಲಿರುವ ಭಾರತದ ಆಡಳಿತದಲ್ಲಿ ಶಿಕ್ಷಣವೂ ಕೂಡ ಮಾರಾಟದ ವಸ್ತುವಾಗಿದೆ. ಉನ್ನತ ಶಿಕ್ಷಣ ಉಳ್ಳವರ ಪಾಲಾಗಿದೆ. ದೇಶದಲ್ಲಿ ನೀರುದ್ಯೋಗ ತಾಂಡವಾಡುತ್ತಿದೆ. ಅಶ್ಲೀಲ ಸಿನಿಮಾ, ಸಾಹಿತ್ಯದ ಪ್ರಚಾರ ಎಗ್ಗಿಲದೆ ಸಾಗಿದೆ. ಉದ್ಯೋಗವಿಲ್ಲದೆ ಯುವಕರು ಬಿದಿ ಬಿದಿ ಅಲಿಯುತ್ತಿರುವಾಗ ಕುಸಂಸ್ಕೃತಿಯನ್ನೇ ಸಂಸ್ಕೃತಿಯನ್ನಾಗಿಸಲು ಹೊರಟಿರುವ ಸರಕಾರಗಳು, ಯುವ ಶಕ್ತಿಯ ನೈತಿಕ ಬೆನ್ನೆಲುಬು ಮುರಿಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಹಣಮಂತ ಎಸ್.ಎಚ್, ವಿದ್ಯಾರ್ಥಿ ಯುವಕರು ಮಾನವೀಯ ಮೌಲಗ್ಯಳನ್ನು ಮೈಗೂಡಿಸಿಕೊಳ್ಳಬೇಕು. ಕೊಳೆತು ನಾರುತ್ತಿರುವ ಈ ಶೋಷಕ ವ್ಯವಸ್ಥೆಯನ್ನು ಬದಲಿಸಲು ಭಗತ್‌ಸಿಂಗರ ಕನಸಿನ ಮಾಜವಾದಿ ಸ್ವಾತಂತ್ರ್ಯ ಸ್ಥಾಪನೆಗೆ ಪಣ ತೊಡಬೇಕು ಎಂದರು.
ಪ್ರಕೃತಿಗಾಗಿ ಮಾತನಾಡಿ, ಮಾ. 27ಕ್ಕೆ “ಅರ್ಥ್ ಅವರ್” ವರ್ಚು ವಲ್ಸ್ಪಾಟ್ ಲೈಟ್‌ನ ಅಭಿಯಾನ
ಎಐಡಿಎಸ್‌ಒ ಹಳಕರ್ಟಿ ಗ್ರಾಮ ಘಟಕದ ಅಧ್ಯಕ್ಷ ದತ್ತಾತ್ರೇಯ ಹುಡೆಕರ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಗೌತಮ ಪರತೂರಕರ, ವೆಂಕಟೇಶ ದೇವದುರ್ಗ, ಗೋವಿಂದ ಯಳವಾರ, ಸಿದ್ದರಾಜ ಮದ್ರಿ, ಭಾಗಣ್ಣ ಬುಕ್ಕಾ, ಶಿವುಕುಮಾರ ಆಂದೊಲಾ, ರಾಧಿಕಾ, ಸಾಯಬಣ್ಣ, ವಿನೋದ, ಅಭಿಷೇಕ, ವಿರೇಶ ಆರ್.ಟಿ ಪಾಲ್ಗೊಂಡಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…