ಬಿಸಿ ಬಿಸಿ ಸುದ್ದಿ

ಮಹಿಳೆಯರು ಆರ್ಥಿಕವಾಗಿ ಸಬಲರಾದಲ್ಲಿ ಮಾತ್ರ ಕುಟುಂಬದ ಆರ್ಥಿಕ ಭದ್ರತೆ

ಶಹಾಬಾದ: ಮಹಿಳೆಯರು ಆರ್ಥಿಕವಾಗಿ ಸಬಲರಾದಲ್ಲಿ ಮಾತ್ರ ಕುಟುಂಬದ ಆರ್ಥಿಕ ಭದ್ರತೆ ಹೆಚ್ಚಾಗುವ ಮೂಲಕ ಸ್ವಾಲಂಬಿ ಬದುಕನ್ನು ನಡೆಸಲು ಸಾಧ್ಯವಾಗಲಿದೆ ಎಂದು ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಹೇಳಿದರು.

ಅವರು ಸೋಮವಾರ ವಿಠ್ಠಲ್ ರುಕ್ಮಾಯಿ ಮಂದಿರದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಕಲಬುರಗಿ ವಿಭಾಗದ ವತಿಯಿಂದ ಶಹಾಬಾದ ತಾಲೂಕಾದ ಗ್ರಾಪಂ ಮತ್ತು ನಗರಸಭೆ ವ್ಯಾಪ್ತಿಯ ಮಹಿಳೆಯರಿಗೆ ಪ್ರಗತಿ ಕೇಂದ್ರದಿಂದ ಹೊಲಿಗೆ ತರಬೇತಿ ಶಿಬಿರದಲ್ಲಿ ಮಾತನಾಡಿದರು.

ಭಗತಸಿಂಗ್ ಹುತಾತ್ಮ ದಿನಾಚರಣೆ: ಗಲ್ಗಂಬಕ್ಕೆ ಮುತ್ತಿಟ್ಟ ಭಗತ್‌ಸಿಂಗ್ ಹೋರಾಟದ ಸ್ಪೂರ್ತಿ

ಈ ಹೊಲಿಗೆ ತರಬೇತಿಯಿಂದ ಮಹಿಳೆಯರು ಸ್ವಂತ ಉದ್ಯೋಗ ಹಮ್ಮಿಕೊಳ್ಳುವ ಜತೆಗೆ ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದುವುದರ ಮೂಲಕ ಕುಟುಂಬದ ಭದ್ರತೆಗೆ ಸಹಕಾರಿಯಾಗಲಿದೆ.ಕೇವಲ ಮಹಿಳೆಯರಿಗೆ ತರಬೇತಿ ನೀಡಿದರೇ ಸಾಲದು.ಅವರಿಗೆ ಯಂತ್ರ ಸೇರಿದಂತೆ ತಾಂತ್ರಿಕ ಸಾಮಗ್ರಿಗಳನ್ನು ಒದಗಿಸಿದರೇ ಬಹಳ ಅನುಕೂಲವಾಗುತ್ತದೆ ಎಂದು ಹೇಳಿದರು.

ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಮಲ್ಲಮ್ಮ.ಎ.ಕಡ್ಲಾ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬ ಮಹಿಳೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಪ್ರಗತಿ ಹೊಂದಲು ಅತ್ಯುತ್ತಮ ಕೌಶಲ್ಯಗಳನ್ನು ಹೊಂದಿ ಸ್ವಾಲಂಬಿಯಾಗಿ ಬದುಕಲು ಕಲಿಯಬೇಕು.ಮಹಿಳೆ ಉದ್ಯಮಶೀಲ ಮಹಿಳೆಯಾಗಬೇಕು.ಮಹಿಳೆಯರು ಸ್ವಾವಲಂಬಿ ಬದುಕಲು ನಡೆಸಲು ಸರ್ಕಾರದಿಂದ ಅನೇಕ ಯೋಜನೆಗಳಿವೆ.ಅಲ್ಲದೇ ಬ್ಯಾಂಕುಗಳು ಕೂಡ ಮಹಿಳಯರಿಗೆ ಸಾಲ ಸೌಲಭ್ಯಗಳು ನೀಡುತ್ತವೆ.ಈ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ಮಹಿಳೆ ಮುಂದುವರಿಯಬೇಕೆಂದು ತಿಳಿಸಿದರು.

ಮಾಸಿಕ ಶರಣ ಸಂಗಮ ಮತ್ತು ಎರಡು ಕೃತಿಗಳ ಲೋಕಾರ್ಪಣೆ

ತಾಲೂಕಾ ವಿಕಾಸ ಅಕಾಡೆಮಿಯ ಸಂಯೋಜಕ ಕನಕಪ್ಪ ದಂಡಗುಲಕರ್ ಮಾಥನಾಡಿ, ಮಹಿಳೆಯರು ಸ್ವಾವಲಂಬಿಗಳಾಗಬೇಕು, ಮನೆಯ ಕೆಲಸದ ಜೊತೆಗೆ ಹೊಲಿಗೆ ಹೊಲೆಯುವದಾಗಲಿ, ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಳ್ಳಬೇಕೆಂದು ತಿಳಿಸಿದರು.

ಹೊಲಿಗೆ ತರಬೇತಿದಾರರಾದ ಜಯಶ್ರೀ ಮಠ, ಅಣ್ಣಾರಾವ ಬಾಳಿ ರಾವೂರ, ಮಲ್ಲಿಕಾರ್ಜುನ ಇಟಗಿ ಮಾಲಗತ್ತಿ, ಸುನೀಲ ಭಂಕೂರ, ಸಂಧ್ಯಾ ತೊನಸನಹಳ್ಳಿ(ಎಸ್), ಸಿದ್ದಲಿಂಗ ಹೊನಗುಂಟಾ ಇತರರು ಇದ್ದರು. ಶರಣು ವಸ್ತ್ರದ್ ನಿರೂಪಿಸಿದರು, ಸಂಧ್ಯಾ ಸ್ವಾಗತಿಸಿದರು, ರಮೇಶ ಸಾಹು ಮರತೂರ ವಂದಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

5 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

15 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

15 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

15 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago