ಬಿಸಿ ಬಿಸಿ ಸುದ್ದಿ

ಆರ್ಗನೈಜೇಷನ್ ಡಿ ಸ್ಕಲೀನ್ ಫೌಂಡೇಷನ್ನಿಂದ ಶೈಕೋಝೋನ್ ಮೊಬೈಲ್ ಆಪ್ ಅನಾವರಣ

ಬೆಂಗಳೂರು: ಸೆಂಟರ್ ಫಾರ್ ಅಡ್ವಾನ್ಸ್ಡ್ ರಿಸರ್ಚ್ ಆಂಡ್ ಡೆವಲಪ್ ಮೆಂಟ್(ಸಿಎಆರ್ಡಿ) ಮತ್ತು ಆರ್ಗನೈಸೇಷನ್ ಡಿ ಸ್ಕಲೀನ್ ಫೌಂಡೇಷನ್ ಸಂಸ್ಥೆಯು ಮಿಟೆರ್ ಸಮೂಹದ ಸಹಭಾಗಿತ್ವದಲ್ಲಿ ಶೈಕೋಝೋನ್ ಎಂಬ ಮೊಬೈಲ್ ಅಪ್ಲಿಕೇಷನ್ ಅನ್ನು ಅನಾವರಣಗೊಳಿಸಿದೆ. ಕೊರೊನಾ ಕುಟುಂಬದ ವೈರಾಣು ಕಣಗಳ ವಿರುದ್ಧದ ಸುರಕ್ಷತಾ ಸಾಧನವಾದ ಶೈಕೋಕ್ಯಾನ್ ಅನ್ನು ಪತ್ತೆಹಚ್ಚುವ ಮೊಬೈಲ್ ಆ್ಯಪ್ ಇದಾಗಿದೆ. ಶೈಕೋಕ್ಯಾನ್ ಎನ್ನುವುದು ಸ್ಕಲೀನ್ ಉತ್ಪಾದಿಸಿರುವ ವಿಶಿಷ್ಟ ಸಾಧನವಾಗಿದೆ.

ಈ ಕಾರ್ಯಕ್ರಮದಲ್ಲಿ ಆರ್ಗನೈಜೇಷನ್ ಡಿ ಸ್ಕಲೀನ್ ಫೌಂಡೇಷನ್ನ ಮುಖ್ಯಸ್ಥರಾದ ಡಾ. ರಾಜೇಶ್ ವಿಜಯ ಕುಮಾರ್ ಮತ್ತು ಮಿಟರ್ ಸಮೂಹದ(ಸ್ಕಲೀನ್ ಸೈಬರ್ ನೆಟಿಕ್ಸ್ ಲಿಮಿಟೆಡ್ನ ಪರವಾನಗಿ ಪಡೆದ ಉತ್ಪಾದಕ ಸಂಸ್ಥೆಗಳಲ್ಲಿ ಒಂದು) ಕಾರ್ಯಕಾರಿ ನಿರ್ದೇಶಕರಾದ ಶ್ರೀ. ನಿಶ್ಚಯ್ ಮಿಟರ್ ಅವರು ಉಪಸ್ಥಿತರಿದ್ದರು.

ಪ್ರಶಾಂತ ಮಾನಕರ್‌ಗೆ ಫೊಟೋಗ್ರಾಫರ್ಸ್ ಅಸೋಸಿಯೇಷನ್ ಸನ್ಮಾನ

ಶೈಕೋಝೋನ್ ಆ್ಯಪ್ ಎನ್ನುವುದು 100 ಕಿ.ಮೀ. ವ್ಯಾಪ್ತಿಯೊಳಗೆ ಶೈಕೋಕ್ಯಾನ್ ಸಾಧನಗಳನ್ನು ಅಳವಡಿಸಲಾಗಿರುವ ಸುರಕ್ಷಿತ ವಲಯಗಳನ್ನು ತೋರಿಸುವಂತಹ ಭಾರತದ ಮೊತ್ತಮೊದಲ ಮೊಬೈಲ್ ಅಪ್ಲಿಕೇಷನ್ ಆಗಿದೆ. ಈ ಆ್ಯಪ್ನ ಬಳಕೆದಾರರು ತಮಗೆ ಬೇಕಾದ ಕೆಟಗರಿಗಳನ್ನು, ಉದಾಹರಣೆಗೆ, ರೆಸ್ಟಾರೆಂಟ್, ಜಿಮ್, ಥಿಯೇಟರ್, ಶಾಲೆಗಳು ಮತ್ತು ಕಾಲೇಜುಗಳು, ಆಸ್ಪತ್ರೆ, ಮಾಲ್, ಹೋಟೆಲ್ ಇತ್ಯಾದಿಗಳನ್ನು ಆಯ್ಕೆ ಮಾಡಿಕೊಂಡರೆ ಸಾಕು, ಆ ನಿರ್ದಿಷ್ಟ ಪ್ರದೇಶದಲ್ಲಿ ಸುರಕ್ಷಿತ ಶೈಕೋಝೋನ್ಗಳು ಎಲ್ಲಿವೆ ಎಂಬುದನ್ನು ನಿಮ್ಮ ಮೊಬೈಲ್ ಆ್ಯಪ್ ತೋರಿಸಿಕೊಡುತ್ತದೆ.

ಶೈಕೋಝೋನ್ ಅನಾವರಣವು ಮೇಕ್ ಇನ್ ಇಂಡಿಯಾ ಹಾಗೂ ಸ್ವಾವಲಂಬಿ ಭಾರತದ ಪರಿಕಲ್ಪನೆಯತ್ತ ಇಟ್ಟ ಹೆಜ್ಜೆಯೂ ಆಗಿದೆ. ಏಕೆಂದರೆ, ಈ ಸಾಧನವನ್ನು ಬೆಂಗಳೂರು ಮೂಲದ ಆರ್ಗನೈಜೇಷನ್ ಡಿ ಸ್ಕಲೀನ್ ಸಂಸ್ಥೆಯೇ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದೆ. ಶೈಕೋಕ್ಯಾನ್ ಎನ್ನುವುದು ಡಾ. ರಾಜೇಶ್ ವಿಜಯ್ ಕುಮಾರ್ ಅವರ ಕನಸಿನ ಕೂಸಾಗಿದ್ದು, ಇದನ್ನು ಕೊರೊನಾ ಸೋಂಕು ಪತ್ತೆಯಾಗುವ ಮುನ್ನವೇ ಅಂದರೆ 2018ರಲ್ಲೇ ಅಭಿವೃದ್ಧಿಪಡಿಸಲಾಗಿತ್ತು.

ಈ ಕುರಿತು ಮಾತನಾಡಿದ ಆರ್ಗನೈಜೇಷನ್ ಡಿ ಸ್ಕಲೀನ್ ಸಂಸ್ಥೆಯ ಮುಖ್ಯಸ್ಥರಾದ ಡಾ. ರಾಜೇಶ್ ವಿಜಯ್ ಕುಮಾರ್, “ವಿಶ್ವ ದರ್ಜೆಯ ಕ್ರಾಂತಿಕಾರಿ ತಂತ್ರಜ್ಞಾನವಾದ ಶೈಕೋಕ್ಯಾನ್- ಕೊರೊನಾ ಸೋಂಕು ಹಾಗೂ ಸೀಸನಲ್ ಇನ್ ಫ್ಲುಯೆನ್ಝಾದಂತಹ ಗಾಳಿಯ ಮೂಲಕ ಹರಡುವ ಇತರೆ ಸೋಂಕುಗಳ ವಿರುದ್ಧದ ಜಾಗತಿಕ ಹೋರಾಟದಲ್ಲಿ ಗೇಮ್ ಚೇಂಜರ್ ಆಗಿ ಹೊರಹೊಮ್ಮಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಹ್ಲಾದ ಜೋಶಿ, ಜಗದೀಶ ಶೆಟ್ಟರ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮಾರಕ: ದಸ್ತಿ

“ದಿನ ಕಳೆದಂತೆಯೇ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಸಾಗುತ್ತಿದೆ. ಈಗ ವೈರಸ್ ವ್ಯಾಪಿಸುವಿಕೆಯನ್ನು ನಿಯಂತ್ರಿಸುವುದೇ ನಮ್ಮ ಮುಂದಿರುವ ಏಕೈಕ ದಾರಿ. ಶೈಕೋಕ್ಯಾನ್ ಎನ್ನುವುದು ಇಡೀ ಜಗತ್ತಿಗಾಗಿ ಭಾರತದಲ್ಲಿ ತಯಾರಾದ ಮೊತ್ತ ಮೊದಲ ವೈರಸ್ನ ತೀವ್ರತೆ ತಗ್ಗಿಸುವ ಸಾಧನವಾಗಿದೆ. ಈ ಸಾಧನವು ಅತ್ಯಂತ ಅಗ್ಗದ ದರದಲ್ಲಿ ಜಗತ್ತಿನ ಮೂಲೆ ಮೂಲೆಗೂ ತಲುಪುವಂತೆ ಮಾಡುವತ್ತ ನಾವು ಹೆಜ್ಜೆಯಿಡಬೇಕು” ಎಂದೂ ಡಾ. ಕುಮಾರ್ ಹೇಳಿದ್ದಾರೆ.

ಶೈಕೋಕ್ಯಾನ್, ಮುಚ್ಚಿದ ಸ್ಥಳಗಳಲ್ಲಿ ಶೇ.99.994ರಷ್ಟು ವೈರಸ್ಗಳನ್ನು ಪತ್ತೆಹಚ್ಚಿ, ಸೋಂಕಿನಿಂದ ಸುರಕ್ಷತೆ ಒದಗಿಸುತ್ತದೆ (ಮೇಲ್ಮೈಗಳಲ್ಲಿ (ಎಂಎಸ್2 ಫೇಜ್) ಶೇ.99.994ರಷ್ಟು ಹಾಗೂ ಗಾಳಿಯಲ್ಲಿ(ಏವಿಯನ್ ಕೊರೊನಾ ವೈರಸ್) ಶೇ.100ರಷ್ಟು ವೈರಾಣುಗಳನ್ನು ಪತ್ತೆಹಚ್ಚಿ, ತಟಸ್ಥಗೊಳಿಸುವ ಸಾಮರ್ಥ್ಯ ಶೈಕೋಕ್ಯಾನ್ಗಿದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ).

ಶೈಕೋಕ್ಯಾನ್ನಿಂದ ಹೊರಬರುವ ಫೆÇೀಟೋನ್ ಮೀಡಿಯೇಟೆಡ್ ಎಲೆಕ್ಟ್ರಾನ್ ಎಮಿಷನ್ ಸಕ್ರಿಯವಾಗಿ ವೈರಸ್ನ ಪಾಸಿಟಿವ್ ಸಂವೇದನೆಯನ್ನು ಅರಿತು, ಆ ವೈರಸ್ನ ಸ್ಪೈಕ್ ಪೆÇ್ರಟೀನ್ ನೊಂದಿಗೆ ಸಂಪರ್ಕ ಸಾಧಿಸುತ್ತದೆ. ಶೈಕೋಕ್ಯಾನ್ ಸಾಧನವನ್ನು ಕಚೇರಿಗಳು, ರೆಸ್ಟಾರೆಂಟ್ಗಳು, ಹೋಟೆಲ್ಗಳು, ಮಾಲ್ಗಳು, ಆಸ್ಪತ್ರೆಗಳು, ತರಗತಿ ಕೊಠಡಿಗಳು, ವಿಮಾನ ನಿಲ್ದಾಣಗಳು, ಜಿಮ್, ಕಾರ್ಖಾನೆಗಳು ಹಾಗೂ ಮನೆಗಳಲ್ಲೂ ಅಳವಡಿಸಬಹುದು. ಇದು ಕೇವಲ ಕೊರೊನಾ ಮಾತ್ರವಲ್ಲದೇ, ಅದೇ ಮಾದರಿಯ ಇತರೆ ಸೋಂಕುಗಳಾದ ಇನ್ಫ್ಲುಯೆನ್ಝಾ, ಏವಿಯನ್ ಫ್ಲೂ, ಎಚ್1ಎನ್1, ಸೀವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್ ಸೇರಿದಂತೆ ಇನ್ನೂ ಅನೇಕ ಸೋಂಕುಗಳಿಂದಲೂ ನಿಮಗೆ ಸುಸ್ಥಿರ ಹಾಗೂ ದೀರ್ಘಾವಧಿಯ ಸುರಕ್ಷತೆಯನ್ನು ಒದಗಿಸುತ್ತದೆ.

ಶಹಾಪುರದಲ್ಲಿ ಬಸವ ಬೆಳಕು ಕಾರ್ಯಕ್ರಮ ನಾಳೆ

ಇದರ ಉತ್ಪಾದನಾ ಪಾಲುದಾರರಲ್ಲಿ ಒಂದಾದ ಮಿಟೆರ್ ಸಮೂಹದ ಕಾರ್ಯಕಾರಿ ನಿರ್ದೇಶಕ ಶ್ರೀ. ನಿಶ್ಚಯ್ ಮಿಟೆರ್ ಮಾತನಾಡಿ, “ಸ್ಕಲೀನ್ ಶೈಕೋಕ್ಯಾನ್ ಎನ್ನುವುದು ಸುರಕ್ಷಿತ, ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಸಾಧನವಾಗಿದ್ದು, ಇದು ದೀರ್ಘಾವಧಿಯಲ್ಲಿ ಕೊರೊನಾವೈರಸ್ ವೈರಾಣುವಿನ ಕಣಗಳ ವ್ಯಾಪಿಸುವಿಕೆಯನ್ನು ಕಾಲಕ್ರಮೇಣ ತಗ್ಗಿಸಲಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ನಾವು ಬೆಂಗಳೂರು, ಮುಂಬೈ ಮತ್ತು ಚೆನ್ನೈನ ಕೆಲವು ರೆಸ್ಟಾರೆಂಟ್ಗಳು ಹಾಗೂ ಆಸ್ಪತ್ರೆಗಳಲ್ಲಿ ಈ ಸಾಧನ ಅಳವಡಿಸುವ ಕೆಲಸವನ್ನು ಆರಂಭಿಸಿದ್ದೇವೆ. ಪ್ರಸ್ತುತ ನಾವು ತಿಂಗಳಿಗೆ 1,50,000 ಸಾಧನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದೇವೆ. ಸದ್ಯದಲ್ಲೇ ಇದನ್ನು ನಾವು ತಿಂಗಳಿಗೆ 2,50,000ಕ್ಕೇರಿಸುವ ಗುರಿ ಹಾಕಿಕೊಂಡಿದ್ದೇವೆ. ಅಲ್ಲದೆ, ಶೈಕೋಕ್ಯಾನ್ ಕುಟುಂಬದ ಇತರೆ ಪಾಲುದಾರರಿಗೂ ನಾವು ಈ ಗುಣಮಟ್ಟದ ಸಾಧನಗಳನ್ನು ಪೂರೈಸಲಿದ್ದೇವೆ.

ಶೈಕೋಝೋನ್ ಮೊಬೈಲ್ ಅಪ್ಲಿಕೇಷನ್ನ ಅನಾವರಣದೊಂದಿಗೆ, ನಾವು ಒಂದು ಸಂದೇಶವನ್ನು ರವಾನಿಸುತ್ತಿದ್ದೇವೆ. ಅದೇನೆಂದರೆ, ಕೊರೊನಾವೈರಸ್ ವಿರುದ್ಧದ ರಕ್ಷಣೆಗಾಗಿ ಭಾರತದಲ್ಲಿ ತಯಾರಾದ ಮೊತ್ತಮೊದಲ ಸುರಕ್ಷಿತ ವಲಯ ಮೊಬೈಲ್ ಅಪ್ಲಿಕೇಷನ್ ಇದಾಗಿದ್ದು, ಶೈಕೋಕ್ಯಾನ್ ಅನ್ನು ಅಳವಡಿಸಿ, ಬಳಸಲಾಗುತ್ತಿರುವ ಪ್ರದೇಶವು ಸುರಕ್ಷಿತ ಪ್ರದೇಶವಾಗಿರುತ್ತದೆ. ಈ ಆ್ಯಪ್ ಭಾರತ, ಅಮೆರಿಕ ಮತ್ತು ಯುರೋಪ್ ಸೇರಿದಂತೆ ಜಗತ್ತಿನಾದ್ಯಂತ ಲಭ್ಯವಿದೆ.

ದೊಂಬಿದಾಸ ಸಮುದಾಯಲ್ಲಿ ಕೆಲವರು ಇನ್ನೂ ಮತದಾನವನ್ನೇ ಮಾಡಿಲ್ಲ: ಲಕ್ಷ್ಮಣ ಕೆಂಗೆಟ್ಟಿ

ವಿಶ್ವಾದ್ಯಂತ ಸುಮಾರು 59 ದೇಶಗಳಲ್ಲಿ ಶೈಕೋಕ್ಯಾನ್ ಲಭ್ಯವಿದೆ. ಶೈಕೋಕ್ಯಾನ್, ಸ್ಕಲೀನ್ ಶೈಕೋಕ್ಯಾನ್, ಕೊರೋನಾಗಾರ್ಡ್ ಪವರ್ಡ್ ಬೈ ಶೈಕೋಕ್ಯಾನ್, ಶ್ರೀಸ್ ಸ್ಕಲೀನ್ ಶೈಕೋಕ್ಯಾನ್ ಇತ್ಯಾದಿಗಳೆಲ್ಲವೂ ಸ್ಕಲೀನ್ ಹೈಪರ್ ಚಾರ್ಜ್ಡ್ ಕೊರೊನಾ ಕ್ಯಾನನ್ ಟೆಕ್ನಾಲಜಿಯನ್ನು ಆಧರಿಸಿವೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

8 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

8 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

8 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago