ಕಲಬುರಗಿ : ಕರ್ನಾಟಕ ರಾಜ್ಯದ ಉತ್ತರ ಕರ್ನಾಟಕದ ಹೆಸರಿನ ಮೇಲೆ ಕೇಂದ್ರ ಮತ್ತು ರಾಜ್ಯ ಸಾಕಾರದ ಎಲ್ಲಾ ಯೋಜನೆಗಳು ಮುಂಬೈ ಕರ್ನಾಟಕಕ್ಕೆ ಸ್ಥಳಾಂತರ ಮಾಡಿಕೊಳ್ಳುತ್ತಿರುವ ಪ್ರಭಾವಿ ನಾಯಕರಾದ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಪಸ್ತುತ ರಾಜ್ಯದ ಕೈಗಾರಿಕಾ ಸಚಿವರಾದ ಜಗದೀಶ ಶೆಟ್ಟರ ಅವರು ಕಲ್ಯಾಣ ಕರ್ನಾಟಕ ಅಭಿವೃದ್ದಿಯ ವಿರೋಧಿಗಳಷ್ಟೇ ಅಲ್ಲದೇ ನಮ್ಮ ಪ್ರದೇಶದ ಅಭಿವೃದ್ಧಿಗೆ ಮಾರಕವಾಗಿದ್ದಾರೆ ಎಂದು ಹೈದರಾಬಾದ್ ಕರ್ನಾಟಕ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ದಸ್ತಿ, ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಂಜುಂಡಪ ವರದಿಯಂತೆ ಈ ಹಿಂದೆ ಶಿಫಾರಸ್ಸು ಮಾಡಿದ್ದ ಐ.ಐ.ಟಿ.ಧಾರವಾಡಕ್ಕೆ ಸ್ಥಳಾಂತರ ಮಾಡಿಕೊಂಡಿರುವುದು, ಉತ್ತರ ಕರ್ನಾಟಕ ಹೆಸರಿನ ಮೇಲೆ ಕೈಗಾರಿಕೆಗಳ ಸ್ಥಾಪನೆ ವಿಷಯವಾಗಿ ಮತ್ತು ಹೂಡಿಕೆಯ ವಿಷಯವಾಗಿ ಕೇವಲ ಹುಬ್ಬಳ್ಳಿ ಧಾರವಾಡವನ್ನು ಆಯ್ಕೆ ಮಾಡಿಕೊಂಡು ಕಲ್ಯಾಣ ಕರ್ನಾಟಕ ನಿರ್ಲಕ್ಷಿಸಿರುವುದು ಖಂಡನೀವಾಗಿದೆ ಎಂದಿದ್ದಾರೆ.
ದೊಂಬಿದಾಸ ಸಮುದಾಯಲ್ಲಿ ಕೆಲವರು ಇನ್ನೂ ಮತದಾನವನ್ನೇ ಮಾಡಿಲ್ಲ: ಲಕ್ಷ್ಮಣ ಕೆಂಗೆಟ್ಟಿ
10 ವರ್ಷಗಳ ಹಿಂದೆ ಕಲಬುರಗಿಗೆ ಬರಬೇಕಾದ ಐ.ಐ.ಐ.ಟಿ. ಸಹ ಹುಬ್ಬಳ್ಳಿ-ಧಾರವಾಡಕ್ಕೆ ಸ್ಥಳಾಂತರ ಮಾಡಿಕೊಂಡಿರುವುದು, 371ನೇ(ಜೆ) ಕಲಮಿನಡಿ ವಿಜಯಪೂರ, ಗದಗ ಸೇರಿಸುವ ಕುತಂತ್ರ ಮಾಡಿರುವುದು, ನೈರುತ್ಯ ರೈಲ್ವೆ ವಲಯದಲ್ಲಿ ಕಲಬುರಗಿ ರೈಲ್ವೆ ವಿಭಾಗ ಮಾಡಬೇಕೆಂಬುದರ ಬಗ್ಗೆ ಕಿಂಚಿತ್ತ ಪ್ರಯತ್ನ ಮಾಡದೇ ಇರುವುದು, ನಮ್ಮ ಭಾಗದಲ್ಲಿದ್ದ ಅನೇಕ ಕಚೇರಿಗಳು ಮತ್ತು ಸಂಸ್ಥೆಗಳು ಬೇರೆಡೆಗೆ ಸ್ಥಳಾಂತರವಾಗಲು ಕುತಂತ್ರ ನಡೆಸಿರುವುದು, ಪ್ರಸ್ತುತ ನಮ್ಮ ಭಾಗಕ್ಕೆ ಬರಬೇಕಾದ ಏಮ್ಸನ್ನು ಹುಬ್ಬಳಿ-ಧಾರವಾಡಕ್ಕೆ ತೆಗೆದುಕೊಂಡು ಹೋಗುತ್ತಿರುವುದು ಹೀಗೆ ಹತ್ತಾರು ನಮ್ಮ ಯೋಜನೆಗಳನ್ನು ಉತ್ತರ ಕರ್ನಾಟಕದ ಹೆಸರಿನ ಮೇಲೆ ನಮ್ಮ ಕಲ್ಯಾಣ ಕರ್ನಾಟಕಕ್ಕೆ ಮೋಸ ಮಾಡಿ ಕಬಳಿಸಿಕೊಳ್ಳುತ್ತಿರುವ ಮುಂಬೈ ಕರ್ನಾಟಕ ನಾಯಕರ ಧೋರಣೆ ಖಂಡನೀಯವಾಗಿದೆ ಎಂದರು.
ಜಲ ಜೀವನ ಮಿಷನ್ ಕಾರ್ಯಾಗಾರಕ್ಕೆ ಮಹ್ಮದ್ ಇಸ್ಮಾಯಿಲ್ ಚಾಲನೆ
371ನೇ ಕಲಂ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಜಾರಿಯಾಗುವುದರಲ್ಲಿ ವಿಳಂಬವಾಗುವುದ ರಲಿಯೂ ಸಹ ಎಚ್.ಕೆ.ಪಾಟೀಲ್ ಈ ಹಿಂದೆ ಕುತಂತ್ರ ಮಾಡಿರುವುದು, ನಂತರದ ದಿನಗಳಲ್ಲಿ 371ನೇ ಕಲಂ ಸಂಪುಟ ಉಪ ಸಮಿತಿಯ ಅಧ್ಯಕ್ಷರಾಗಿ ವಿಶೇಷ ಸ್ಥಾನಮಾನದ ಪರಿಣಾಮಕಾರಿ ಅನುಷ್ಠಾನಕ್ಕೆ ನಿರ್ಲಕ್ಷ ಮಾಡಿರುವುದು, ಪ್ರಸ್ತುತ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಉಪ ಮುಖ್ಯಮಂತ್ರಿಗಳು ಹಾಗೂ 371ನೇ(ಜೆ) ಕಲಂ ಸಂಪುಟ ಉಪ ಸಮಿತಿಯ ಅಧ್ಯಕ್ಷರಾದ ಗೋವಿಂದ ಕಾರಜೋಳರವರೂ ಸಹ 371ನೇ (ಜೆ) ಕಲಂ ಅನುಷ್ಠಾನಕ್ಕೆ ಸಂಪೂರ್ಣವಾಗಿ ನಿರ್ಲಕ್ಷ ಮಾಡುತ್ತಿರುವುದು ಗಮನಿಸಿದರೆ, ಮುಂಬೈ ಕರ್ನಾಟಕದ ನಾಯಕರು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಂ.1 ವಿರೋಧಿಗಳಂತೆ ವರ್ತಿಸುತ್ತಿದ್ದಾರೆ ಎಂದು ಕೀಡಿಕಾರಿದ್ದಾರೆ.
ಕರ್ನಾಟಕ ರಾಜ್ಯ ರಚನೆಯಾದ ನಂತರ, ಐದು ದಶಕಗಳ ಕಾಲ ದಕ್ಷಿಣ ಕರ್ನಾಟಕದ ಪ್ರಭಾವಿ ನಾಯಕರು ನಮ ಪ್ರದೇಶದ ಅಭಿವೃದ್ಧಿಗೆ ನಿರ್ಲಕ್ಷ ಮಾಡಿದರೆ, ಪ್ರಸ್ತುತ ದಿನಗಳಲ್ಲಿ ಉತ್ತರ ಕರ್ನಾಟಕದ ಹೆಸರಿನ ಮೇಲೆ ಮುಂಬೈ ಕರ್ನಾಟಕದ ಪ್ರಭಾವಿ ನಾಯಕರು ನಮ್ಮ ಪ್ರದೇಶ ಅಭಿವೃದ್ಧಿಗೆ ಮಾರಕವಾಗಿದ್ದಾರೆ.
ಶಹಾಪುರದಲ್ಲಿ ಬಸವ ಬೆಳಕು ಕಾರ್ಯಕ್ರಮ ನಾಳೆ
ಇವರ ಈ ವರ್ತನೆಗೆ ಕಲ್ಯಾಣ ಕರ್ನಾಟಕದ ನಾಯಕರು ಪಕ್ಷಾತೀತವಾಗಿ ಸಂಘಟಿತರಾಗಿ ವಿರೋಧಿಸಬೇಕು ಮತ್ತು ನಮ್ಮ ಹಕ್ಕಿನ ಯೋಜನೆಗಳಿಗೆ ನಮ್ಮ ಭಾಗಕ್ಕೆ ತರುವ ನಿಟ್ಟಿನಲ್ಲಿ ದಿಟ್ಟತನ ಪದರ್ಶಿಸಬೇಕೆಂದು ಸಮಿತಿ ಒತ್ತಾಯಿಸುತ್ತದೆ.