ಶಹಾಬಾದ: ಹಾಳಾದ ರಸ್ತೆ, ಮುರಿದು ಬಿದ್ದ ತಡೆಗೋಡೆ, ಕಿರಿದಾದ ರಸ್ತೆಯ ಮೇಲೆ ನೀರಿನ ಪೈಪ್, ಈ ರಸ್ತೆ ಮಧ್ಯೆ ದೊಡ್ಡ ದೊಡ್ಡ ಗುಂಡಿಗಳು. ಇದರ ಮಧ್ಯೆಯೇ ತೆರಳಬೇಕಾದರೆ ಜೀವ ಕೈಯಲ್ಲಿ ಹಿಡಿದುಕೊಂಡು ಸಾಗಬೇಕಾದ ಪರಿಸ್ಥಿತಿಯಿದೆ.
ಇದು ತಾಲೂಕಿನ ಶಹಾಬಾದ-ವಾಡಿ ನಡುವಿನ ರಾಷ್ಟ್ರೀಯ ಹೆದ್ದಾರಿ-150ಕ್ಕೆ ಸಂಬಂಧಿಸಿದಂತೆ ಶಂಕರವಾಡಿಯ ಸಮೀಪದಲ್ಲಿ ನಿರ್ಮಿಸಲಾಗಿರುವ ಸೇತುವೆಯ ಕಥೆ.
ಇಲ್ಲಿನ ಕಾಗಿಣಾ ಸೇತುವೆಗೆ 1968ರಲ್ಲಿ ಅಂದಿನ ಲೋಕೋಪಯೋಗಿ ಸಚಿವರಾದ ವಿರೇಂದ್ರ ಪಾಟೀಲ ಅವರ ಅವಧಿಯಲ್ಲಿ ಸೇತುವೆ ನಿರ್ಮಿಸಲಾಗಿತ್ತು.ಅಂದಿನಿಂದ ಇಂದಿನವರೆಗೆ ನಿರ್ವಹಣೆ ಕೊರತೆಯಿಂದ ಸಾರ್ವಜನಿಕರ ಜೀವಕ್ಕೆ ಕುತ್ತಾಗಿ ಪರಿಣಮಿಸಿದೆ. ಐವತ್ತು ಅಡಿ ಅಗಲದ ರಾಷ್ಟ್ರೀಯ ಹೆದ್ದಾರಿಗೆ ಹತ್ತಡಿ ಅಗಲದ ಸೇತುವೆ ಇದ್ದು, ಮಧ್ಯದಲ್ಲಿ ಕಂದಕಗಳು, ನೀರಿನ ಪೈಪ್‍ಗಳು, ಅಲ್ಲದೆ ತಡೆ ಗೋಡೆ ಇಲ್ಲದ ಸುರಕ್ಷತೆಯಿಲ್ಲದ ಸೇತುವೆ ಅಪಾಯಕ್ಕೆ ಆಹ್ವಾನಿಸುತ್ತಿದೆ.
26ಕ್ಕೆ ಅಪ್ರೆಂಟಿಸ್ ತರಬೇತಿಗೆ ಆಯ್ಕೆಗಾಗಿ ಸಂದರ್ಶನ
ಈಗಾಗಲೇ ಈ ಸೇತುವೆಯಿಂದ ಹಲವಾರು ವಾಹನಗಳು ನದಿಗೆ ಬಿದ್ದಿವೆ.ಹಲವಾರು ಸಾವು ನೋವುಗಳಿಗೆ ಕಾರಣವಾಗಿದೆ.ಈಗ ರಾಷ್ಟ್ರೀಯ ಹೆದ್ದಾರಿಯ ಸುರ್ಪದಿಗೆ ಬಂದರೂ ಯಾವುದೇ ಕ್ರಮಕೈಗೊಳ್ಳದಕ್ಕೆ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿದೆ.
ಈ ರಸ್ತೆ ಮೂಲಕ ನಿತ್ಯ ನೂರಾರು ವಾಹನಗಳ ಸಂಚಾರವಿದೆ. ರೈತಾಪಿ ಜನರು ಇದೇ ರಸ್ತೆ ಮಾರ್ಗವಾಗಿ ನಿತ್ಯ ತಮ್ಮ ತಮ್ಮ ಜಮೀನುಗಳಿಗೆ ಕೃಷಿ ಚಟುವಟಿಕೆಗಳಿಗಾಗಿ ಜಾನುವಾರು, ಎತ್ತಿನ ಬಂಡಿ, ಬೈಕ್, ಟ್ರ್ಯಾಕ್ಟರ್ ಸಮೇತ ಸಂಚಾರ ಜಾಸ್ತಿ .ಅಲ್ಲದೆ ಚಿತ್ತಾಪೂರ, ವಾಡಿ, ಯಾದಗಿರಿ, ಮಂತ್ರಾಲಯ ತೆರಳಲು ಇದೇ ರಸ್ತೆ ಮಾರ್ಗ ಅನುಕೂಲವಿದೆ.ಇದೇ ರಸ್ತೆಯಿಂದ ಸಾವಿರಾರು ವಾಹನಗಳು ಸಂಚರಿಸುತ್ತವೆ.ಆದರೆ ಈ ರಸ್ತೆ ಮಧ್ಯೆ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ತಡೆ ಗೋಡೆ ಇಲ್ಲದ ಸೇತುವೆ ದಾಟಲು ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಶೂದ್ರರು ಎಂದು ಕೊಳ್ಳುವುದಾದರೆ ಪರಿಶಿಷ್ಟ ಜಾತಿಯ ಮೀಸಲಾತಿ ಕೇಳಿ: ಮುಖ್ಯಮಂತ್ರಿ ಚಂದ್ರು
ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕಳೆದ ವರ್ಷದ ಮಳೆಗಾಲದಲ್ಲಿ ಭೀಮಾ ಹಾಗೂ ಕಾಗಿಣಾ ನದಿಯ ಪ್ರವಾಹಕ್ಕೆ ಸೇತುವೆ ಮೇಲಿನ ರಸ್ತೆ ಹಾಳಾಗಿ ಹೋಗಿತ್ತು.ತಡೆಗೋಡೆಗಳು ಮಾಯವಾಗಿತ್ತು.ಸೇತುವೆ ಮೇಲಿನ ಕುಡಿಯುವ ನೀರಿನ ಪೈಪ್ ಹಾಳಾಗಿ ಹೋಗಿ ರಸ್ತೆಯ ಮಧ್ಯದಲ್ಲಿ ಬಿದಿದ್ದವು.ಅಂದು ಈ ರಸ್ತೆ ಸಂಪೂರ್ಣ ಬಂದ್ ಆಗಿತ್ತು.ಅಂದು ವಾಹನ ಸಂಚಾರಕ್ಕೆ ಬೇಕಾದ ಅನುಕೂಲ ಮಾಡಿಕೊಟ್ಟಿದ್ದು ಬಿಟ್ಟರೇ ಹೆದ್ದಾರಿ ಪ್ರಾಧಿಕಾರದವರು ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.ಇದರಿಂದ ಹಲವು ಅಪಘಾತಗಳಾಗಿರುವ ಅನೇಕ ಉದಾಹರಣೆಗಳಿವೆ.
ನಿತ್ಯ ಈ ಸೇತುವೆಯಿಂದ ಹೊರಡಬೇಕಾದರೆ ಎಲ್ಲಿಲ್ಲದ ಆತಂಕ ಹಾಗೂ ಸಂಕಟ ವ್ಯಕ್ತವಾಗುತ್ತದೆ. ಇದೇ ರಸ್ತೆಯಿಂದ ಜಿಲ್ಲಾ ಅಧಿಕಾರಿಗಳು, ಜನಪ್ರತಿನಿಧಿಗಳು ಹೋಗುವ ಸಮಯದಲ್ಲಿ ಒಂದು ಬಾರಿ ವಾಹನದಿಂದ ಕೆಳಗಿಳಿದು ಗಮನಿಸಿ. ಸೇತುವೆ ಸುರಕ್ಷತೆಗೆ ಹಾಗೂ ರಸ್ತೆ ಅಗಲೀಕರಣಕ್ಕೆ ಮುಂದಾಗಬೇಕಿದೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…