ಕಲಬುರಗಿ; ಶ್ರೀ ಶರಣಬಸವೇಶ್ವರ ಸಂಸ್ಥಾನದ ೮ನೇ ಪೀಠಾಧಿಪತಿ ಪರಮ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಏಪ್ರೀಲ್ ೨ರಂದು ಜರುಗುವ ಶ್ರೀ ಶರಣಬಸವೇಶ್ವರ ೧೯೯ನೇ ಜಾತ್ರಾ ಮಹೋತ್ಸವದಲ್ಲಿ ಭಕ್ತರು ಭಾಗಿಯಾಗುವ ಬದಲು ಅಥವಾ ದೇವಾಲಯಕ್ಕೆ ಭೇಟಿ ನೀಡುವ ಬದಲಿಗೆ ತಮ್ಮ ತಮ್ಮ ಮನೆಗಳಲ್ಲೆ ಇದ್ದು, ತಮ್ಮ ಆರಾಧ್ಯ ದೇವ ಶ್ರೀ ಶರಣಬಸವೇಶ್ವರರನ್ನು ಪ್ರಾರ್ಥಿಸಬೇಕು ಎಂದು ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಶ್ರೀ ಶರಣಬಸವೇಶ್ವರ ದೇಗುಲದ ಇತಿಹಾಸದಲ್ಲಿ, ಇದು ಎರಡನೇ ಬಾರಿಗೆ ಜಾತ್ರಾ ಮಹೋತ್ಸವ ಅತೀ ವಿಜ್ರಂಭಣೆ ಮತ್ತು ವೈಭವದಿಂದ ಕೂಡದೇ, ಸರಳತೆಯಿಂದ ನಡೆಸಲಾಗುತ್ತದೆ. ವೀರಶೈವ ಲಿಂಗಾಯತ ಸಂಪ್ರದಾಯದಲ್ಲಿ ಸಾವನ್ನು ಮೋಕ್ಷವೆಂದು ಅನುಸರಿಸುವ ಸಂಪ್ರದಾಯದಂತೆ ಶ್ರೀ ಶರಣಬಸವೇಶ್ವರರ ಪುಣ್ಯಸ್ಮರಣೆಯ ದಿನದಂದು ರಥೋತ್ಸವ ಜರುಗಿಸಿಸುವ ವಾಡಿಕೆಯಿದೆ. ಈ ಜಾತ್ರೆಯಲ್ಲಿ ರಾಷ್ಟ್ರ ಮತ್ತು ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಭಾಗವಹಿಸುತ್ತಿದ್ದರು. ಆದರೆ ಪ್ರಸ್ತುತ ಜಾತ್ರೆಯಲ್ಲಿ ಸಂಸ್ಥಾನದ ಕುಟುಂಬ ಸದಸ್ಯರು ಹಾಗೂ ಕೆಲವೊಂದು ಆಯ್ಕೆಯ ಸದಸ್ಯರನ್ನೊಳಗೊಂಡು, ಈ ಉತ್ಸವ ಸರಳ ರೀತಿಯಲ್ಲಿ ಜರುಗಲಿದೆ ಎಂದರು.
ಯಶಸ್ಸಕಂಡ ಡಿಜಿಟಲ್ ಅರ್ಥ್ ಅವರ್ – ಭಾರತ ಸ್ವಿಚ್-ಆಫ್
ಏಪ್ರಿಲ್ ೦೨ ರಂದು ರಥೋತ್ಸವಕ್ಕೂ ಮುಂಚೆ ಅನಾದಿ ಕಾಲದಿಂದಲೂ ಆಚರಣೆಯಲ್ಲಿದ್ದ ಎಲ್ಲಾ ಧಾರ್ಮಿಕ ಸಮಾರಂಭಗಳು ನಡೆಯಲಿವೆ. ಏಪ್ರಿಲ್ ೦೨ ರಂದು ಮುಂಜಾನೆ ಡಾ. ಅಪ್ಪಾಜಿಯವರು ಕೃತ ಗದ್ದುಗೆಗೆ ವಿಶೇ? ಪೂಜೆ ಅಭಿ?ಕ ಮತ್ತು ಗುರುಪಾದ ಪೂಜೆ ಇತ್ಯಾದಿ ಧಾರ್ಮಿಕ ಸಮಾರಂಭಗಳು ಮತ್ತು ಆಚರಣೆಗಳನ್ನು ನಡೆಸಲಿರುವರು. ಅದೇ ದೀನ ೧೮ನೇ ಶತಮಾನದ ಸಂತ ಶ್ರೀ ಶರಣಬಸವೇಶ್ವರು ಬೆಳಗಿಸುತ್ತಿದ್ದ ನಂದಾದೀಪ ಹಾಗೂ ಕುಂಭ ಪೂಜೆ ನಡೆಯಲಿದೆ. ೧೮ ನೇ ಶತಮಾನದಲ್ಲಿ ಸಂತ ಶರಣಬಸವೇಶ್ವರರು ಈ ದೀಪವನ್ನು ಬೆಳಗಿಸಿದರು. ಅದೇ ಇಂದು ನಂದಾದೀಪ ಎಂದು ಕರೆಯಲಾಗುತ್ತಿದೆ. ರಥೋತ್ಸವಕ್ಕೆ ಪೂಜೆ ಸಲ್ಲಿಸುವ ಮೊದಲು ದೇವರಿಗೆ ಕುಂಭ ಪೂಜೆಯನ್ನು ಅರ್ಪಿಸಲಾಗುತ್ತದೆ. ರಥೋತ್ಸವಕ್ಕೂ ಮುಂಚೆ ಶ್ರೀ ಶರಣಬಸವೇಶ್ವರರ ಪ್ರಸಾದ ಬಟಲು (ಸಂತರು ಬಳಸಿದ ಬೆಳ್ಳಿ ತಟ್ಟೆ) ಮತ್ತು ಲಿಂಗ ಸಜ್ಜಿಕೆಯನ್ನು ಭಕ್ತರಿಗೆ ಅಪ್ಪಾಜಿ ಪ್ರದರ್ಶಿಸಲಿರುವರು.
ತದನಂತರ ಶ್ರೀ ಶರಣಬಸವೇಶ್ವರರ ರಥೋತ್ಸವ ಜರುಗಲಿದೆ. ಈ ಎಲ್ಲಾ ಧಾರ್ಮಿಕ ಆಚರಣೆಗಳು ಏಪ್ರೀಲ್ ೨ರಂದು ಜರುಗಲಿವೆ. ಜಾತ್ರೆಗೆ ಪೂರಕವಾಗಿ ಏಪ್ರಿಲ್ ೦೧ ರಂದು ಸಂಜೆ ಉಚ್ಛಾಯಿ ಸಮಾರಂಭ ನಡೆಯಲಿದ್ದು, ದೇವಾಲಯದ ಆವರಣದ ಸುತ್ತಲೂ ಶರಣಬಸವೇಶ್ವರರ ಉಚ್ಛಾಯಿ ಎಳೆಯಲಾಗುವುದು, ಇದು ಶರಣಬಸವೇಶ್ವರರ ಜಾತ್ರಾ ಮಹೋತ್ಸವದ ಆರಂಭವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ.
ಕಲ್ಯಾಣ ಕರ್ನಾಟಕ ಜನಪದ ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಮೋಶಿ ಚಾಲನೆ
ಪರಮ ಪೂಜ್ಯ ಡಾ.ಅಪ್ಪಾಜಿ ಮತ್ತು ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ಮಾತನಾಡಿ, ಹೆಚ್ಚುತ್ತಿರುವ ಕರೋನಾ ಕಾರಣ ಹಾಗೂ ಸರ್ಕಾರ ಮತ್ತು ಜಿಲ್ಲಾಡಳಿತ ಹೊರಡಿಸಿದ ಹೊಸ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಭೀಕರ ಕರೋನಾ ೧೯ -ರ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಈ ಜಾತ್ರಾ ಮಹೋತ್ಸವ ಮತ್ತು ಇತರೆ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಸಂಖ್ಯೆಯನ್ನು ಮೊಟಕುಗೊಳಿಸಲಾಗುತ್ತಿದೆ. ಸಾರ್ವಜನಿಕರ ಅತೀ ದೊಡ್ಡ ಗುಂಪು ಸಭೆಯನ್ನು ತಪ್ಪಿಸುವ ಮೂಲಕ ಸರಳವಾಗಿ ಜಾತ್ರೆಯನ್ನು ಆಚರಿಸಲು ಸಂಸ್ಥಾನ ನಿರ್ಧರಿಸಿದೆ ಹಾಗೂ ಭೀಕರ ರೋಗದ ವಿರುದ್ಧ ಹೋರಾಡುತ್ತಿರುವ ಸರ್ಕಾರದೊಂದಿಗೆ ಕೈಜೋಡಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಹೇಳಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…