ಕಲಬುರಗಿ: ನಗರದ ಡಾ.ಎಸ್.ಎಂ ಪಂಡಿತ ರಂಗಮಂದಿರದಲ್ಲಿ ಇತ್ತೀಚೆಗೆ ನಟರಾಜ್ ಶಿಕ್ಷಣ ಮತ್ತು ಸಂಗೀತ ಸಾಂಸ್ಕೃತಿಕ ಸೇವಾ ಸಂಸ್ಥೆ ವತಿಯಿಂದ ಆಯೋಜಿಸಿದ ಕಲ್ಯಾಣ ಕರ್ನಾಟಕ ಜನಪದ ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಅವರು ಉದ್ಘಾಟಿಸಿದರು. ಕಾರ್ಯಕ್ರಮ ಸಂಯೋಜಕ ದಿನೇಶ ನಾಯಕ್ ನೇತೃತ್ವದಲ್ಲಿ ನೃತ್ಯ ಕಲಾವಿದರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಉಪಾಧ್ಯಕ್ಷೆ ರೇಣುಕಾ ಬಾಬುಚವ್ಹಾಣ, ಲಿಂಗರಾಜ್ ತಾರಫೈಲ, ಪ್ರದೀಪ್ ಭಾವೆ, ಎ.ಬಿ. ಹೊಸಮನಿ, ರಾಮು ರೆಡ್ಡಿ, ಮನೋಹರ್ ಬಿರನೂರ, ತ್ರಿಶಾಂಕ ಪಾಟೀಲ್, ಗಣೇಶ ಟಾಗೋರ್, ಅಂಬಿಕಾ ಅಲ್ಲೊಳ್ಳಿ ಕಾರ್ಯದರ್ಶಿ ಅಶ್ವಿನಿ ಸತೀಶ್ ರಾಂಪುರ ಇದ್ದರು.