ಕಲಬುರಗಿ: ಬಂಡಾಯ ಸಾಹಿತಿ ಹೋರಾಟಗಾರ ಸಮಾಜ ಚಿಂತಕ ಡಾ. ಚನ್ನಣ್ಣ ವಾಲಿಕಾರ ಅವರ ಜನ್ಮದಿನೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧಕರಿಗೆ ’ವೋಮಾವ್ಯೋಮ’ ಪ್ರಶಸ್ತಿ ನೀಡಿ ಸತ್ಕರಿಸಬೇಕೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಹಿರಿಯರು ಎ.ಕೆ. ರಾಮೇಶ್ವರರು ಆಯ್ಕೆ ಸಮಿತಿ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಸಮಿತಿಯಲ್ಲಿ ಡಾ. ಕೆ.ಎಸ್. ಬಂಧು ಸಿದ್ದೇಶ್ವರ, ಸಿದ್ಧಮ್ಮ ವಾಲೀಕಾರ, ಬಸವರಾಜ ಸುಣಗಾರ, ಅಯ್ಯಣ್ಣ ವಾಲೀಕಾರ, ಅರವಿಂದಕುಮಾರ ವಾಲೀಕಾರ, ಮನೋಹರ ಮರಗುತ್ತಿ ಅವರು ಪಾಲ್ಗೊಂಡಿದ್ದರು.
ಈ ಸಮಿತಿಯಲ್ಲಿ ಜನಪದ ತಜ್ಞರೆಂದು ಡಾ. ಸ್ವಾಮಿರಾವ ಕುಲಕರ್ಣಿ ಅವರನ್ನು ಡಾ. ಸರಸ್ವತಿ ಚಿಮ್ಮಲಗಿ ಅವರನ್ನು ಹೋರಾಟಗಾರ್ತಿ ಎಂದು ಡಾ. ಟಿ.ವಿ. ಶಿವಾನಂದ ಪತ್ರಕರ್ತರೆಂದು ಮತ್ತು ಡಾ. ಎಚ್.ಟಿ. ಪೋತೆ ಅವರನ್ನು ಸಮಗ್ರ ಸಾಹಿತ್ಯವನ್ನು ಪರಿಗಣಿಸಿ ಪ್ರಶಸ್ತಿ ನೀಡಲು ನಿರ್ಧರಿಸಲಾಯಿತು. ಅದರಂತೆ, ಜಾನಪದ ಗಾಯಕ ರೆಂದು ಶಂಭುಲಿಂಗ ವಾಲದೊಡ್ಡಿಯವರನ್ನು ರಾಜ್ಯಮಟ್ಟದ ’ವೋಮಾವ್ಯೋಮ’ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆಮಾಡಲಾಯಿತು.
ಈ ’ವೋಮಾವ್ಯೋಮ’ ಪ್ರಶಸ್ತಿಯನ್ನು ಡಾ. ಚನ್ನಣ್ಣ ವಾಲೀಕರ ಅವರ ಜನ್ಮದಿನೋತ್ಸದ ಅಂಗವಾಗಿ ಏಪ್ರಿಲ್ ೬ ರಂದು ಜರುಗುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದೆಂದು ಮಕ್ಕಳ ಸಾಹಿತಿಗಳಾದ ಎ.ಕೆ. ರಾಮೇಶ್ವರ, ಸಿದ್ದಮ್ಮ ವಾಲೀಕಾರ, ಡಾ. ಕೆ.ಎಸ್.ಬಂಧು ಸಿದ್ದೇಶ್ವರ ಅವರು ಜಂಟಿಯಾಗಿ ಪ್ರತಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…