ಕಲಬುರಗಿ: ಸಮಾಜದಲ್ಲಿರುವ ಲಕ್ಷಾಂತರ ಬಡ, ದೀನ-ದಲಿತ, ಶೋಷಿತ,ಅನಾಥ ಮಕ್ಕಳಿಗೆ ಅನ್ನ,ಜ್ಞಾನದಾಸೋಹ, ಸಂಸ್ಕಾರ,ಮಾನವೀಯೆತೆಯನ್ನು ನೀಡಿ, ಅವರ ಬದುಕನ್ನುಕಟ್ಟಿಕೊಟ್ಟ ಮಹಾನ ಶಿಲ್ಪಿ ಸಿದ್ಧಗಂಗಾ ಶ್ರೀಗಳಾದ ಡಾ.ಶಿವಕುಮಾರ ಮಹಾಸ್ವಾಮೀಜಿಗಳಾಗಿದ್ದಾರೆ. ಪರಹಿತ, ಸಮಾಜ ಸೇವೆಯಲ್ಲಿಯೇ ಶಿವನನ್ನು ಕಂಡುದೈವತ್ವಕ್ಕೇರಿದ ಮಹಾನ ಚೇತನಅವರಾಗಿದ್ದಾರೆಂದುಮಠದ ಹಳೆಯ ವಿದ್ಯಾರ್ಥಿಗಳಾದ ವಿಶ್ವನಾಥ ಶೇಗಜಿದಂಗಾಪುರ, ಶಿವಪ್ಪಗೌಡ ಎಸ್.ಪಾಟೀಲ ಬೊಮ್ಮನಳ್ಳಿ ಅಭಿಮತಪಟ್ಟರು.
ನಗರದಆಳಂದ ರಸ್ತೆಯಲ್ಲಿರುವ ’ಸಿದ್ದಗಂಗಾ ಕಂಪ್ಯೂಟರತರಬೇತಿಕೇಂದ್ರ’ದಲ್ಲಿ ’ಸಿದ್ದಗಂಗಾ ಸಂಸ್ಥೆ’, ’ಬಸವೇಶ್ವರ ಸಮಾಜ ಸೇವಾ ಬಳಗ’ ಮತ್ತು ’ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ತಂಡ’ ಇವುಗಳ ವತಿಯಿಂದಗುರುವಾರಏರ್ಪಡಿಸಿದ್ದ ಲಿಂ.ಡಾ.ಶಿವಕುಮಾರ ಮಾಹಾಸ್ವಾಮೀಜಿಯವರ೧೧೪ನೇ ಜಯಂತ್ಯುತ್ಸವ ಹಾಗೂ ಮಹಾದೇವಿ ವೃದ್ಧಾಶ್ರಮದಲ್ಲಿ ಪ್ರಸಾದ ವಿತರಣೆ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಉಪನ್ಯಾಸಕಎಚ್.ಬಿ.ಪಾಟೀಲ ಮಾತನಾಡಿ, ಹನ್ನೆರಡನೆಯ ಶತಮಾನದಬಸವಾದಿ ಶರಣರತತ್ವವನ್ನುಅಕ್ಷರಶಃತಮ್ಮಜೀವನದಲ್ಲಿ ಅಳವಡಿಸಿಕೊಂಡು ಅದರಂತೆ ಬದುಕಿ ತೋರಿಸಿದವರು. ದಾಸೋಹ,ಕಾಯಕ ಸಂಸ್ಕೃತಿ,ಸಮಾನತೆ, ಸಾಮರಸ್ಯ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವಗುಣ ಪೂಜ್ಯರದಾಗಿತ್ತು. ಸಮಾಜಕ್ಕಾಗಿ ನಿರಂತರವಾಗಿದಣಿವರಿಯದೆ ಸಾರ್ಥಕ ಸೇವೆಯನ್ನು ಸಲ್ಲಿಸಿ ಲಕ್ಷಾಂತರಜನರ ಹೃದಯ ಮಂದಿರದಲ್ಲಿ ಶಾಶ್ವತವಾಗಿ ನೆಲೆನಿಂತಿದ್ದಾರೆಂದರು.
ಚಿಂತಕ ನರಸಪ್ಪ ಬಿರಾದಾರದೇಗಾಂವ ಮಾತನಾಡಿ, ಪ್ರತಿಯೊಬ್ಬರೂ ಪರಸ್ವರ ಪ್ರೀತಿ,ಶಾಂತಿ, ನಾವೆಲ್ಲರೂಒಂದೇ ಎಂಬ ಭಾವನೆಯಿಂದ ಬದುಕಬೇಕು.ಪ್ರಪಂಚದಲ್ಲಿಧರ್ಮಯಾವುದುಎಂದರೆಒಂದೇಧರ್ಮ, ಅದು ಮನುಷ್ಯಧರ್ಮ. ಮತ್ತೊಬ್ಬರ ಕಷ್ಟಕ್ಕೆ ನೆರವಾಗಬೇಕೆಂಬ ತತ್ವ ಸಾರ್ವಕಾಲಿಕವಾಗಿದೆಯೆಂದರು.
ಕಾರ್ಯಕ್ರಮದಲ್ಲಿಪ್ರಮುಖರಾದ ಸಿದ್ದರಾಮ ಶೇಗಜಿದಂಗಾಪುರ, ವಿಶ್ವನಾಥ ಗೋನಾಕಿ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪಗಣಮುಖಿ, ಅಮರ ಜಿ.ಬಂಗರಗಿ, ಅಣ್ಣಾರಾಯ ಪಾಟೀಲ, ಶ್ರೀಗುರು ವಾಲಿ, ದತ್ತುಕುರಕೋಟಾ, ಬಸವರಾಜದುರ್ಗದ್, ಗುರುಬಸಯ್ಯ ಹಿರೇಮಠ, ಸಂಜೀವ ಪಾಟೀಲ, ಸುಭಾಷ ಮೂಲಗೆ, ಶ್ರೀಕಾಂತ ಇಸ್ರಿ, ರೇವಣಸಿದ್ದಪ್ಪ ಸೇರಿದಂತೆ ಮತ್ತಿತರರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…